ಏಕದಿನ ಕ್ರಿಕೆಟ್: ರೋಹಿತ್ ಶರ್ಮಾ 134 ರನ್ ಸಿಡಿಸಿದರೆ ಸಚಿನ್ರ ದೊಡ್ಡ ದಾಖಲೆ ಉಡೀಸ್; ಮೈಲ್ಲಿಗಲ್ಲು ತಲುಪಿದರೂ ಕೊಹ್ಲಿಯೇ ಟಾಪ್!
- Rohit sharma: ಟೀಮ್ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರು ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ. ಏಕದಿನದಲ್ಲಿ ಇನ್ನು 134 ರನ್ ಸಿಡಿಸಿದರೆ ಈ ಸಾಧನೆ ಮಾಡಲಿದ್ದಾರೆ.
- Rohit sharma: ಟೀಮ್ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರು ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ. ಏಕದಿನದಲ್ಲಿ ಇನ್ನು 134 ರನ್ ಸಿಡಿಸಿದರೆ ಈ ಸಾಧನೆ ಮಾಡಲಿದ್ದಾರೆ.
(1 / 11)
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ದಾಖಲೆಯೊಂದರ ಮೇಲೆ ಕಣ್ಣಿಟ್ಟಿದ್ದಾರೆ.
(2 / 11)
ಕಳೆದ ವರ್ಷ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಕೊನೆಯದಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ, ಸುಮಾರು 6 ತಿಂಗಳ ನಂತರ 50 ಓವರ್ಗಳ ಫಾರ್ಮೆಟ್ಗೆ ಮರಳಲು ಸಜ್ಜಾಗಿದ್ದಾರೆ.
(3 / 11)
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಿಂದ ನಿವೃತ್ತರಾಗಿರುವ ಹಿಟ್ಮ್ಯಾನ್ ತನ್ನ ಕಳಪೆ ಫಾರ್ಮ್ನಿಂದ ಹೊರಬರಲು ಬಿಸಿಸಿಐ ಆದೇಶದಂತೆ ರಣಜಿ ಕೂಡ ಆಡಿದ್ದರು. ಆದರೆ ಇಲ್ಲೂ ವೈಫಲ್ಯ ಅನುಭವಿಸಿದ್ದರು.
(4 / 11)
ಪ್ರಸ್ತುತ ರೋಹಿತ್ ಲಯಕ್ಕೆ ಮರಳುವುದು ಅನಿವಾರ್ಯ. ಏಕೆಂದರೆ ಈ ಸರಣಿಯ ಬೆನ್ನಲ್ಲೇ ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯಲಿದೆ. ಈ ಐಸಿಸಿ ಪ್ರಶಸ್ತಿ ರೋಹಿತ್ ಲಯಕ್ಕೆ ಮರಳಬೇಕು.
(5 / 11)
ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ 134 ರನ್ ಗಳಿಸಿದರೆ ಏಕದಿನ ಪಂದ್ಯಗಳಲ್ಲಿ ವೇಗವಾಗಿ 11,000 ರನ್ ಗಳಿಸಿದ ವಿಶ್ವದ 2ನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
(6 / 11)
ಇದರೊಂದಿಗೆ ಹಿಟ್ಮ್ಯಾನ್ ಎಲೈಟ್ ಪಟ್ಟಿಯಲ್ಲಿ ಸಚಿನ್ ಅವರನ್ನು ಹಿಂದಿಕ್ಕಲಿದ್ದಾರೆ. ಆದಾಗ್ಯೂ, ವಿರಾಟ್ ಕೊಹ್ಲಿ ಅವರ ವಿಶ್ವ ದಾಖಲೆ ಅಗ್ರಸ್ಥಾನದಲ್ಲೇ ಮುಂದುವರೆಯಲಿದೆ.
(7 / 11)
ಮುಂಬೈಕರ್ 265 ಏಕದಿನ ಪಂದ್ಯಗಳ 257 ಇನ್ನಿಂಗ್ಸ್ಗಳಲ್ಲಿ 10866 ರನ್ ಗಳಿಸಿದ್ದಾರೆ. 31 ಶತಕ, 57 ಅರ್ಧಶತಕಗಳು ಅವರ ಖಾತೆಯಲ್ಲಿವೆ. ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ 264 ರನ್.
(8 / 11)
ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ 222 ಇನ್ನಿಂಗ್ಸ್ಗಳಲ್ಲಿ 11,000 ರನ್ ಗಳಿಸಿದ ವಿಶ್ವದಾಖಲೆ ಹೊಂದಿದ್ದಾರೆ. ಸಚಿನ್ 276 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿ ಎರಡನೇ ಸ್ಥಾನದಲ್ಲಿದ್ದಾರೆ.
(9 / 11)
ಪ್ರಸ್ತುತ ರೋಹಿತ್ ಅವರು ಸಚಿನ್ಗಿಂತ 20 ಇನ್ನಿಂಗ್ಸ್ ಕಡಿಮೆ ಆಡಿದ್ದು, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೇ ದಿಗ್ಗಜ ಆಟಗಾರನನ್ನು ಹಿಂದಿಕ್ಕುವ ಸಾಧ್ಯತೆ ಇದೆ.
(10 / 11)
ಸದ್ಯ ಸಚಿನ್ಗಿಂತ 20 ಇನ್ನಿಂಗ್ಸ್ ಕಡಿಮೆ ಆಡಿರುವ ರೋಹಿತ್ ಇಂಗ್ಲೆಂಡ್ ವಿರುದ್ಧದ ಸರಣಿ ಅಥವಾ ಚಾಂಪಿಯನ್ಸ್ ಟ್ರೋಫಿಯೊಳಗೆ ಈ ದಾಖಲೆ ಬರೆಯುವುದು ಬಹುತೇಕ ಖಚಿತ.
ಇತರ ಗ್ಯಾಲರಿಗಳು