Ind vs Pak: ಭಾರತ ಮತ್ತು ಪಾಕಿಸ್ತಾನದ ಪ್ರಮುಖ ಕ್ರಿಕೆಟಿಗರ ಸಂಭಾವನೆ ಎಷ್ಟಿದೆ; ಯಾರು ಹೆಚ್ಚು ಶ್ರೀಮಂತರು?
- ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಟಿ20 ವಿಶ್ವಕಪ್ ಹಣಾಹಣಿಗಾಗಿ ಜಗತ್ತೇ ಕುತೂಹಲದಿಂದ ಕಾಯುತ್ತಿದೆ. ಸಾಂಪ್ರದಾಯಿಕ ಎದುರಾಳಿಗಳ ನಡುವೆ ಜೂನ್ 9ರಂದು ನ್ಯೂಯಾರ್ಕ್‌ನಲ್ಲಿ ರೋಚಕ ಪಂದ್ಯ ನಡೆಯಲಿದೆ. ವಿಶ್ವದ ಗಮನ ಸೆಳೆಯುವ ಉಭಯ ತಂಡಗಳಲ್ಲಿ ಬಲಿಷ್ಠ ಆಟಗಾರರಿದ್ದಾರೆ. ತಂಡಗಳ ಪ್ರಮುಖ ಆಟಗಾರರು ರೋಚಕತೆ ಹೆಚ್ಚಿಸುತ್ತಾರೆ.
- ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಟಿ20 ವಿಶ್ವಕಪ್ ಹಣಾಹಣಿಗಾಗಿ ಜಗತ್ತೇ ಕುತೂಹಲದಿಂದ ಕಾಯುತ್ತಿದೆ. ಸಾಂಪ್ರದಾಯಿಕ ಎದುರಾಳಿಗಳ ನಡುವೆ ಜೂನ್ 9ರಂದು ನ್ಯೂಯಾರ್ಕ್‌ನಲ್ಲಿ ರೋಚಕ ಪಂದ್ಯ ನಡೆಯಲಿದೆ. ವಿಶ್ವದ ಗಮನ ಸೆಳೆಯುವ ಉಭಯ ತಂಡಗಳಲ್ಲಿ ಬಲಿಷ್ಠ ಆಟಗಾರರಿದ್ದಾರೆ. ತಂಡಗಳ ಪ್ರಮುಖ ಆಟಗಾರರು ರೋಚಕತೆ ಹೆಚ್ಚಿಸುತ್ತಾರೆ.
(1 / 6)
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಬಾಬರ್ ಅಜಮ್ ಹೀಗೆ ಈ ಎರಡು ತಂಡಗಳಲ್ಲಿ ಬಲಿಷ್ಠ ಆಟಗಾರರಿದ್ದಾರೆ. ಜೂನ್ 9ರ ಪಂದ್ಯಕ್ಕೂ ಮುನ್ನ, ಉಭಯ ತಂಡಗಳ ಪ್ರಮುಖ ಆಟಗಾರರ ಸಂಭಾವನೆ ಹಾಗೂ ನಿವ್ವಳ ಆಸ್ತಿ ಮೌಲ್ಯ ಎಷ್ಟಿದೆ ಎಂಬುದನ್ನು ನೋಡೋಣ.
(2 / 6)
ವಿರಾಟ್ ಕೊಹ್ಲಿ: ಮೈದಾನದಲ್ಲಿ ವಿರಾಟ್ ಕೊಹ್ಲಿ ಅವರ ರನ್ ಮಳೆ ಹಾಗೂ ದಾಖಲೆಗಳು ಎಷ್ಟು ದೊಡ್ಡದೋ, ಅವರ ಸಂಭಾವನೆ ಕೂಡಾ ಅಷ್ಟೇ ದೊಡ್ಡದಾಗಿದೆ. ವಿರಾಟ್ ವಿಶ್ವದ ಶ್ರೀಮಂತ ಆಟಗಾರರಲ್ಲಿ ಒಬ್ಬರು. ಬಿಸಿಸಿಐ ಒಪ್ಪಂದದ ಪ್ರಕಾರ ಗ್ರೇಡ್ A+ ಪಟ್ಟಿಯಲ್ಲಿರುವ ವಿರಾಟ್ ಕೊಹ್ಲಿ , 7 ಕೋಟಿ ಸಂಭಾವನೆ ಪಡೆಯುತ್ತಾರೆ. ಇದರೊಂದಿಗೆ ಹಲವವಾರು ಬ್ರ್ಯಾಂಡ್‌ಗಳ ಅಂಬಾಸಿಡರ್ ಆಗಿರುವ ಅವರು, ಜಾಹೀರಾತುಗಳಿಂದಲೂ ಸಾಕಷ್ಟು ಸಂಪಾದಿಸುತ್ತಾರೆ. ಅವರ ನಿವ್ವಳ ಮೌಲ್ಯ ಸುಮಾರು 770 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
(Getty Images via AFP)(3 / 6)
ಶಾಹೀನ್ ಶಾ ಆಫ್ರಿದಿ: 2024ರಲ್ಲಿ ಶಾಹೀನ್ ಅಫ್ರಿದಿ ಅವರ ನಿವ್ವಳ ಮೌಲ್ಯವು 7 ಮಿಲಿಯನ್ ಡಾಲರ್ ಅಥವಾ 58 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇವರು ಕೂಡಾ ಪ್ರತಿ ತಿಂಗಳು 13.14 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅತ್ಯಂತ ಶ್ರೀಮಂತ ಪಾಕಿಸ್ತಾನಿ ಕ್ರಿಕೆಟಿಗರಲ್ಲಿ ಇವರು ಕೂಡಾ ಒಬ್ಬರು.
(AFP)(4 / 6)
ರೋಹಿತ್ ಶರ್ಮಾ: ಭಾರತ ತಂಡ ನಾಯಕ ರೋಹಿತ್ ಶರ್ಮಾ, ಬಿಸಿಸಿಐ ಕೇಂದ್ರೀಯ ಒಪ್ಪಂದದಲ್ಲಿ ಗ್ರೂಪ್ A+ ವಿಭಾಗದಲ್ಲಿ ಇದ್ದಾರೆ. ಇವರು ಕೂಡಾ 7 ಕೋಟಿ ರೂಪಾಯಿ ಸಂಭಾವನೆ ಗಳಿಸುತ್ತಾರೆ. ಅವರ ನಿವ್ವಳ ಆಸ್ತಿ ಮೌಲ್ಯ ಸುಮಾರು 24 ಮಿಲಿಯನ್ ಡಾಲರ್ (ಅಂದಾಜು ರೂ.200 ಕೋಟಿ) ಎಂದು ಅಂದಾಜಿಸಲಾಗಿದೆ.
(AFP)(5 / 6)
ಜಸ್ಪ್ರೀತ್ ಬುಮ್ರಾ: ಭಾರತದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಗ್ರೇಡ್ A+ ವರ್ಗದಲ್ಲಿ ಬರುವುದರಿಂದ ಅವರು ಕೂಡಾ 7 ಕೋಟಿ ರೂಪಾಯಿ ಸಂಭಾವನೆ ಗಳಿಸುತ್ತಾರೆ. ಅವರ ನಿವ್ವಳ ಆಸ್ತಿ ಮೌಲ್ಯ 7 ಮಿಲಿಯನ್ ಡಾಲರ್ (55 ಕೋಟಿ ರೂಪಾಯಿ) ಎಂದು ಅಂದಾಜಿಸಾಲಗಿದೆ.
(PTI)(6 / 6)
ಬಾಬರ್ ಅಜಮ್: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಕೂಡ ಉತ್ತಮ ಸಂಭಾವನೆ ಪಡೆಯುತ್ತಾರೆ. ಪಾಕಿಸ್ತಾನದ ನಾಯಕ ಪ್ರತಿ ತಿಂಗಳು ಅಂದಾಜು 13.14 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇವರು ಕೂಡಾ ಒಪ್ಪೊ, ಹೆಡ್ & ಶೋಲ್ಡರ್ಸ್, ಮತ್ತು ಸೆರಿದಂತೆ ಹಲವುಬ್ರ್ಯಾಂಡ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದರಿಂದ ಅವರು 5 ಮಿಲಿಯನ್ ಡಾಲರ್(ಅಂದಾಜು 41 ಕೋಟಿ ರೂಪಾಯಿ) ಗಳಿಸುತ್ತಾರೆ.
(PTI)ಇತರ ಗ್ಯಾಲರಿಗಳು