ಪದಾರ್ಪಣೆ ಪಂದ್ಯ-ಬುಮ್ರಾ ಓವರ್‌; 18 ರನ್‌ ಸಿಡಿಸಿದ ಸ್ಯಾಮ್ ಕಾನ್ಸ್ಟಾಸ್, 4484 ಎಸೆತಗಳ ನಂತರ ಸಿಕ್ಸರ್‌ ಬಿಟ್ಟುಕೊಟ್ಟ ವೇಗಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪದಾರ್ಪಣೆ ಪಂದ್ಯ-ಬುಮ್ರಾ ಓವರ್‌; 18 ರನ್‌ ಸಿಡಿಸಿದ ಸ್ಯಾಮ್ ಕಾನ್ಸ್ಟಾಸ್, 4484 ಎಸೆತಗಳ ನಂತರ ಸಿಕ್ಸರ್‌ ಬಿಟ್ಟುಕೊಟ್ಟ ವೇಗಿ

ಪದಾರ್ಪಣೆ ಪಂದ್ಯ-ಬುಮ್ರಾ ಓವರ್‌; 18 ರನ್‌ ಸಿಡಿಸಿದ ಸ್ಯಾಮ್ ಕಾನ್ಸ್ಟಾಸ್, 4484 ಎಸೆತಗಳ ನಂತರ ಸಿಕ್ಸರ್‌ ಬಿಟ್ಟುಕೊಟ್ಟ ವೇಗಿ

  • ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಯುವ ಆರಂಭಿಕ ಆಟಗಾರ ಸ್ಯಾಮ್ ಕಾನ್ಸ್ಟಾಸ್ ಸ್ಫೋಟಕ ಪ್ರದರ್ಶನ ನೀಡಿದರು. ಪದಾರ್ಪಣೆ ಪಂದ್ಯದಲ್ಲೇ ವಿಶ್ವದ ಡೇಂಜರಸ್‌ ವೇಗದ ಬೌಲರ್‌ ಆಗಿರುವ ಭಾರತದ ಜಸ್ಪ್ರೀತ್ ಬುಮ್ರಾ ಎಸೆತಗಳನ್ನು ನಿರಾತಂಕದಿಂದ ಎದುರಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ವಿಶ್ವದ ನಂ.1 ಟೆಸ್ಟ್ ಬೌಲರ್ ಜಸ್ಪ್ರೀತ್ ಬುಮ್ರಾ ನಿರಾಶಾದಾಯಕ ಅನುಭವ ಪಡೆದರು. ಸ್ಟಾರ್‌ ಬ್ಯಾಟರ್‌ಗಳೇ ಬುಮ್ರಾ ಎಸೆತದಲ್ಲಿ ಆಕ್ರಮಣಕಾರಿಯಾಗಿ ಆಡಲು ಧೈರ್ಯ ಮಾಡದಿರುವಾಗ, 19 ವರ್ಷದ ಆಸೀಸ್‌ ಬ್ಯಾಟರ್‌ ತಮ್ಮ ಪದಾರ್ಪಣೆ ಪಂದ್ಯದಲ್ಲೇ ಬುಮ್ರಾ ಎಸೆತಗಳನ್ನು ಗತ್ತಿನಿಂದ ಎದುರಿಸಿದ್ದಾರೆ.
icon

(1 / 8)

(AFP)

ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಉಸ್ಮಾನ್ ಖವಾಜಾ ಅವರೊಂದಿಗೆ ಸ್ಯಾಮ್ ಕಾನ್ಸ್ಟಾಸ್ ಇನ್ನಿಂಗ್ಸ್ ಆರಂಭಿಸಿದರು. 19ರ ಹರೆಯದ ಕಾನ್ಸ್ಟಾಸ್, ಇನ್ನಿಂಗ್ಸ್‌ನ ಏಳನೇ ಓವರ್‌ನಲ್ಲಿ ಬುಮ್ರಾ ಎಸೆತದಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ವಿಶೇಷವೆಂದರೆ, ಅವರು ಸ್ಕೂಪ್ ಶಾಟ್‌ನಲ್ಲಿ 1 ಬೌಂಡರಿ ಬಾರಿಸಿದರು. ರಿವರ್ಸ್ ಸ್ಕೂಪ್ ಶಾಟ್‌ನಲ್ಲಿ ಅವರು ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು. ಆ ಓವರ್‌ನಲ್ಲಿ ಬುಮ್ರಾ 14 ರನ್ ಬಿಟ್ಟಕೊಟ್ಟರು.
icon

(2 / 8)

ಇನ್ನಿಂಗ್ಸ್‌ನ 11ನೇ ಓವರ್‌ನಲ್ಲಿ ಮತ್ತೊಮ್ಮೆ ಸ್ಯಾಮ್ ಕಾನ್ಸ್ಟಾಸ್ ಜಸ್ಪ್ರೀತ್ ಬುಮ್ರಾ ಅವರ ಓವರ್‌ನಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಆಸೀಸ್ ಇನ್ನಿಂಗ್ಸ್‌ನ 11ನೇ ಓವರ್‌ನಲ್ಲಿ, ಬುಮ್ರಾ ಒಟ್ಟು 18 ರನ್‌ಗಳನ್ನು ಬಿಟ್ಟುಕೊಟ್ಟರು. ಆ 18 ರನ್‌ಗಳು ಸ್ಯಾಮ್ ಕಾನ್ಸ್ಟಾಸ್ ಅವರ ಬ್ಯಾಟ್‌ನಿಂದ ಬಂದವು.
icon

(3 / 8)

ವಿಶೇಷವೆಂದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರ ಒಂದೇ ಓವರ್‌ನಲ್ಲಿ ಬೇರೆ ಯಾವುದೇ ಬ್ಯಾಟರ್‌ ಕೂಡಾ ಈವರೆಗೆ 18 ರನ್ ಗಳಿಸಿಲ್ಲ. ಆದರೆ, ಅದನ್ನು ಸಾಧ್ಯವಾಗಿಸಿ ಕಾನ್ಸ್ಟಾಸ್ ಇತಿಹಾಸ ನಿರ್ಮಿಸಿದರು. ಅಂದರೆ, ಬುಮ್ರಾ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಒಂದು ಓವರ್‌ನಲ್ಲಿ ಅತಿ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟ ನಿರಾಶಾದಾಯಕ, ಅನಗತ್ಯ ದಾಖಲೆ ಮಾಡಿದರು.
icon

(4 / 8)

ಟೆಸ್ಟ್ ಕ್ರಿಕೆಟ್‌ನಲ್ಲಿ ಬುಮ್ರಾ ಈವರೆಗೆ ಒಂದೇ ಓವರ್‌ನಲ್ಲಿ 16 ರನ್ ಬಿಟ್ಟುಕೊಟ್ಟಿದ್ದರು. 2020ರಲ್ಲಿ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಒಂದು ಓವರ್‌ನಲ್ಲಿ ಅವರು 16 ರನ್ ಬಿಟ್ಟುಕೊಟ್ಟರು. ನಂತರ 2024ರಲ್ಲಿ ವಿಶಾಖಪಟ್ಟಣದಲ್ಲಿ ಇಂಗ್ಲೆಂಡ್ ವಿರುದ್ಧ ಜಸ್ಪ್ರೀತ್ ಒಂದು ಓವರ್‌ನಲ್ಲಿ 16 ರನ್ ಬಿಟ್ಟುಕೊಟ್ಟಿದ್ದರು.
icon

(5 / 8)

ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಬುಮ್ರಾ ವಿರುದ್ಧ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸ್ಯಾಮ್ ಕಾನ್ಸ್ಟಾಸ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮೆಲ್ಬೋರ್ನ್‌ನಲ್ಲಿ ನಡೆದ ಈ ಇನ್ನಿಂಗ್ಸ್‌ನಲ್ಲಿ ಬುಮ್ರಾ ಅವರ 33 ಎಸೆತಗಳಲ್ಲಿ ಸ್ಯಾಮ್‌ ಒಟ್ಟು 34 ರನ್ ಗಳಿಸಿದರು.
icon

(6 / 8)

2021ರ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಬುಮ್ರಾ ಎಸೆತಕ್ಕೆ ಸಿಕ್ಸರ್ ಬಾರಿಸಿದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಕಾನ್ಸ್ಟಾಸ್ ಪಾತ್ರರಾಗಿದ್ದಾರೆ. ಅಂದರೆ ಟೆಸ್ಟ್‌ನಲ್ಲಿ ಬರೋಬ್ಬರಿ 4484 ಎಸೆತಗಳ ನಂತರ ಇದೇ ಮೊದಲ ಬಾರಿಗೆ ಬುಮ್ರಾ ಸಿಕ್ಸರ್‌ ಬಿಟ್ಟುಕೊಟ್ಟಿದ್ದಾರೆ.
icon

(7 / 8)

(AP)

ಪಂದ್ಯದಲ್ಲಿ‌ ಸ್ಯಾಮ್‌ ಕೊನೆಗೆ 65 ಎಸೆತಗಳಲ್ಲಿ 60 ರನ್‌ ಗಳಿಸಿ ಜಡೇಜಾಗೆ ವಿಕೆಟ್‌ ಒಪ್ಪಿಸಿದರು.
icon

(8 / 8)

ಇತರ ಗ್ಯಾಲರಿಗಳು