ಬಾಕ್ಸಿಂಗ್ ಡೇ ಟೆಸ್ಟ್‌ಗೆ ಆಸ್ಟ್ರೇಲಿಯಾ ಸಿಡಿಗುಂಡು ಪದಾರ್ಪಣೆ; 19ರ ಹರೆಯದ ಸ್ಯಾಮ್ ಕಾನ್ಸ್ಟಾಸ್ ಯಾರು?
- Sam Konstas: ಭಾರತ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಪರ ಪದಾರ್ಪಣೆ ಮಾಡಲು ಸ್ಯಾಮ್ ಕಾನ್ಸ್ಟಾಸ್ ಸಜ್ಜಾಗಿದ್ದಾರೆ. ಮೆಲ್ಬೋರ್ನ್‌ನ ಐತಿಹಾಸಿಕ ಎಂಸಿಜಿಯಲ್ಲಿ ಡಿಸೆಂಬರ್ 26ರ ಮಂಗಳವಾರ ನಾಲ್ಕನೇ ಟೆಸ್ಟ್ ನಡೆಯುತ್ತಿದ್ದು, 19 ವರ್ಷದ ಆಟಗಾರ ಹೊಸ ಹಿರಿಮೆಗೆ ಪಾತ್ರರಾಗಲಿದ್ದಾರೆ.
- Sam Konstas: ಭಾರತ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಪರ ಪದಾರ್ಪಣೆ ಮಾಡಲು ಸ್ಯಾಮ್ ಕಾನ್ಸ್ಟಾಸ್ ಸಜ್ಜಾಗಿದ್ದಾರೆ. ಮೆಲ್ಬೋರ್ನ್‌ನ ಐತಿಹಾಸಿಕ ಎಂಸಿಜಿಯಲ್ಲಿ ಡಿಸೆಂಬರ್ 26ರ ಮಂಗಳವಾರ ನಾಲ್ಕನೇ ಟೆಸ್ಟ್ ನಡೆಯುತ್ತಿದ್ದು, 19 ವರ್ಷದ ಆಟಗಾರ ಹೊಸ ಹಿರಿಮೆಗೆ ಪಾತ್ರರಾಗಲಿದ್ದಾರೆ.
(1 / 7)
ಸ್ಯಾಮ್ ಕಾನ್ಸ್ಟಾಸ್, ಆಸ್ಟ್ರೇಲಿಯಾ ಪರ ಟೆಸ್ಟ್ ಪದಾರ್ಪಣೆ ಮಾಡುತ್ತಿರುವ ನಾಲ್ಕನೇ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
(AFP)(2 / 7)
ಈವರೆಗೆ ನಡೆದ ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ನಾಥನ್ ಮೆಕ್‌ಸ್ವೀನಿ ಆಡಿದ್ದರು. ಅವರ ಬದಲಿಗೆ ಕಾನ್ಸ್ಟಾಸ್ ಆರಂಭಿಕರಾಗಿ ಆಡಲಿದ್ದಾರೆ.
(AFP)(3 / 7)
ಸ್ಯಾಮ್ ಕಾನ್ಸ್ಟಾಸ್, ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಇರುವ ವಿಶೇಷ ಪಟ್ಟಿಗೆ ಸೇರಿಕೊಳ್ಳಲಿದ್ದಾರೆ. ಕಮಿನ್ಸ್ 2011ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಪದಾರ್ಪಣೆ ಮಾಡಿದ್ದರು. ಅದಾದ ನಂತರ 13 ವರ್ಷಗಳ ನಂತರ ಆಸೀಸ್ ಪರ ಟೆಸ್ಟ್ ಪದಾರ್ಪಣೆ ಮಾಡುತ್ತಿರುವ ಕಿರಿಯ ಆಟಗಾರ ಎಂಬ ಹಿರಿಮೆಗೆ ಕಾನ್ಸ್ಟಾಸ್ ಪಾತ್ರರಾಗಲಿದ್ದಾರೆ.
(AFP)(4 / 7)
ಭಾರತ ಎ ಮತ್ತು ಆಸ್ಟ್ರೇಲಿಯಾ ಎ ನಡುವಿನ ಪಂದ್ಯದ ವೇಳೆ ಕಾನ್ಸ್ಟಾಸ್ ಭಾರತೀಯ ಬೌಲರ್‌ಗಳನ್ನು ಎದುರಿಸಿದ್ದರು. ಯುವ ಆಟಗಾರ ಮೆಲ್ಬೋರ್ನ್ ಪಿಚ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರಂಥ ಅನುಭವಿ ವೇಗಿಗಳನ್ನು ಎದುರಿಸಲಿದ್ದಾರೆ.
(AFP)(5 / 7)
ಆರಂಭಿಕ ಆಟಗಾರ ಕಾನ್ಸ್ಟಾಸ್, ಅಂಡರ್ 19 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಪರ ಆಡಿದ್ದರು. ಈ ವರ್ಷದ ಆರಂಭದಲ್ಲಿ ತಂಡವು ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
(AFP)(6 / 7)
ಅವರು ಕ್ಯಾನ್‌ಬೆರಾದ ಮನುಕಾ ಓವಲ್‌ನಲ್ಲಿ ನಡೆದ ಪಿಂಕ್-ಬಾಲ್ ಅಭ್ಯಾಸ ಪಂದ್ಯದಲ್ಲಿ ಭಾರತದ ವಿರುದ್ಧ ಪ್ರೈಮ್ ಮಿನಿಸ್ಟರ್ಸ್ XI ಪರ ಆಡಿದ್ದರು. ಇವರು 97 ಎಸೆತಗಳಲ್ಲಿ 14 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 107 ರನ್ ಗಳಿಸಿದ್ದರು.
(AFP)ಇತರ ಗ್ಯಾಲರಿಗಳು