ಕನ್ನಡ ಸುದ್ದಿ  /  Photo Gallery  /  Cricket Shah Rukh Khan Watches Kkr Vs Srh Match In Eden Gardens Kolkata Celebrates Victory Of Kolkata Knight Riders Jra

Photos: ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕೆಕೆಆರ್ ಗೆಲುವನ್ನು ಸಂಭ್ರಮಿಸಿದ ಶಾರುಖ್ ಖಾನ್

  • Shah Rukh Khan: ಕೆಕೆಆರ್ ತಂಡದ ಮೊದಲ ಪಂದ್ಯವನ್ನು ವೀಕ್ಷಿಸಲು ಫ್ರಾಂಚೈಸ್‌ ಮಾಲಕ ಶಾರುಖ್ ಖಾನ್ ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಮೈದಾನಕ್ಕೆ ಆಗಮಿಸಿದ್ದರು. ಬಾಲಿವುಡ್‌ ಬಾದ್‌ಶಾರನ್ನು ನೋಡಿ, ಮೈದಾನದಲ್ಲಿ ಹಾಜರಿದ್ದ ಅಭಿಮಾನಿಗಳು ಖುಷಿಪಟ್ಟರು. ಪ್ರಸಕ್ತ ಆವೃತ್ತಿಯಲ್ಲಿ ತಂಡ ಆಡಿದ ಮೊದಲ ಪಂದ್ಯದಲ್ಲೇ ಎಸ್‌ಆರ್‌ಎಚ್‌ ವಿರುದ್ಧ ಜಯಭೇರಿ ಬಾರಿಸಿದೆ.

ಶಾರುಖ್ ಖಾನ್ ಮಾಲಕತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು, ಮಾರ್ಚ್‌ 23ರ ಶನಿವಾರ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆಡಿದ ಪಂದ್ಯದಲ್ಲಿ 4 ರನ್‌ಗಳ ರೋಚಕ ಜಯ ಸಾಧಿಸಿತು. ತಂಡದ ಪಂದ್ಯ ವೀಕ್ಷಿಸಲು ಶಾರುಖ್ ಖಾನ್ ಕೋಲ್ಕತ್ತಾಗೆ ಆಗಮಿಸಿದ್ದರು. ಸಂಜೆ ವೇಳೆ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಟ, ವಿಮಾನ ನಿಲ್ದಾಣದಿಂದ ನೇರವಾಗಿ ಈಡನ್‌ಗೆ ಹೋಗಿ ಪಂದ್ಯ ವೀಕ್ಷಿಸಿದ್ದಾರೆ. (ಚಿತ್ರ ಕೃಪೆ @pallav_paliwal)
icon

(1 / 5)

ತಮ್ಮ ತಂಡದ ಮೊದಲ ಪಂದ್ಯವನ್ನು ವೀಕ್ಷಿಸಲು ನಿರೀಕ್ಷೆಯಂತೆಯೇ ಶಾರುಖ್ ಖಾನ್ ಕೋಲ್ಕತ್ತಾಗೆ ಬಂದಿದ್ದರು. ಕೋಲ್ಕತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡ ರೋಚಕ ಪೈಪೋಟಿ ನಡೆಸಿತು. ತವರಿನಲ್ಲಿ ಕೆಕೆಆರ್‌ ತಂಡ ಗೆಲುವಿನ ಅಭಿಯಾನ ಆರಂಭಿಸಿತು.
icon

(2 / 5)

ಕೋಲ್ಕತಾ ನೈಟ್ ರೈಡರ್ಸ್ ತಂಡವು 2014ರ ಬಳಿಕ ಐಪಿಎಲ್ ಟ್ರೋಫಿ ಗೆದ್ದಿಲ್ಲ. ತಂಡವನ್ನು ಯಶಸ್ಸಿನ ಹಾದಿಗೆ ಮರಳಿ ತರಲು ಶಾರುಖ್ ಖಾನ್ ಗೌತಮ್ ಗಂಭೀರ್ ಅವರಿಗೆ‌ ಮತ್ತೆ ಕೋಚ್‌ ಹುದ್ದೆಯನ್ನು ಕೊಟ್ಟಿದ್ದಾರೆ. ತಂಡದ ಎಲ್ಲಾ ಜವಾಬ್ದಾರಿಗಳನ್ನು ಗಂಭೀರ್‌ಗೆ ಹಸ್ತಾಂತರಿಸಿದ್ದಾರೆ.  
icon

(3 / 5)

ಬಾಲಿವುಡ್ ಬಾದ್‌ಶಾ ಪಂದ್ಯದ ಪ್ರತಿ ಕ್ಷಣವನ್ನು ಆನಂದಿಸಿದರು. ಈಡನ್ ಮೈದಾನದಲ್ಲಿ ಕೆಕೆಆರ್ ಬೆಂಬಲಿಗರೊಂದಿಗೆ ಪ್ರೀತಿ ಹಂಚಿಕೊಂಡರು.
icon

(4 / 5)

ಈ ಬಾರಿ ಮತ್ತೆ ಶ್ರೇಯಸ್ ಅಯ್ಯರ್ ಕೆಕೆಆರ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಅಲ್ಲದೆ ಗಂಭೀರ್‌ ಕೂಡಾ ತಂಡಕ್ಕೆ ಮರಳಿದ್ದಾರೆ, ಮತ್ತೆ ಹಳೆಯ ಜೋಶ್‌ನೊಂದಿಗೆ ತಂಡ ಮೈದಾನಕ್ಕಿಳಿದಿದೆ. ಶಾರುಖ್ ಅವರನ್ನು ನೋಡಿ, ಈಡನ್ ಮೈದಾನದಲ್ಲಿದ್ದ ಕ್ರಿಕೆಟ್ ಅಭಿಮಾನಿಗಳು ಖುಷಿಪಟ್ಟರು.
icon

(5 / 5)

ಇತರ ಗ್ಯಾಲರಿಗಳು