ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್‌ ಟ್ರೋಫಿ ಎತ್ತಿ ಹಿಡಿದು ಕೆಕೆಆರ್‌ ಆಟಗಾರರ ಸಂಭ್ರಮಾಚರಣೆ; ಮೆಸ್ಸಿ ಸ್ಟೈಲ್‌ ಕಾಪಿ ಮಾಡಿದ ಶ್ರೇಯಸ್‌ ಅಯ್ಯರ್ -Photos

ಐಪಿಎಲ್‌ ಟ್ರೋಫಿ ಎತ್ತಿ ಹಿಡಿದು ಕೆಕೆಆರ್‌ ಆಟಗಾರರ ಸಂಭ್ರಮಾಚರಣೆ; ಮೆಸ್ಸಿ ಸ್ಟೈಲ್‌ ಕಾಪಿ ಮಾಡಿದ ಶ್ರೇಯಸ್‌ ಅಯ್ಯರ್ -Photos

  • ಚೆಪಾಕ್‌ನಲ್ಲಿ ಎಸ್‌ಆರ್‌ಎಚ್ ತಂಡವನ್ನು ಸುಲಭವಾಗಿ ಮಣಿಸಿದ ಕೋಲ್ಕತ್ತಾ ನೈಟ್ ರೈಡರ್ಸ್‌, ಐಪಿಎಲ್‌ 2024ರ ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿತು. ಐಪಿಎಲ್‌ ಇತಿಹಾಸದಲ್ಲಿ ಮೂರನೇ ಟ್ರೋಫಿಗೆ ಮುತ್ತಿಕ್ಕಿ ಕೆಕೆಆರ್‌ ಆಟಗಾರರು ಸಂಭ್ರಮಿಸಿದರು. ಶ್ರೇಯಸ್‌ ಅಯ್ಯರ್‌ ನಾಯಕತ್ವ ಹಾಗೂ ಗೌತಮ್‌ ಗಂಭೀರ್‌ ಮಾರ್ಗದರ್ಶನದಲ್ಲಿ ಅಬ್ಬರಿಸಿದ ತಂಡವು, ಅರ್ಹ ಟ್ರೋಫಿ ಜಯಿಸಿತು.

ಎಸ್‌ಆರ್‌ಎಚ್‌ ಬ್ಯಾಟರ್‌ಗಳು ಹಾಗೂ ಬೌಲರ್‌ಗಳನ್ನು ಸುಲಭವಾಗಿ ಕಟಟ್ಟಿಹಾಕಿದ ಕೆಕೆಆರ್‌, 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಮಿಚೆಲ್‌ ಸ್ಟಾರ್ಕ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
icon

(1 / 8)

ಎಸ್‌ಆರ್‌ಎಚ್‌ ಬ್ಯಾಟರ್‌ಗಳು ಹಾಗೂ ಬೌಲರ್‌ಗಳನ್ನು ಸುಲಭವಾಗಿ ಕಟಟ್ಟಿಹಾಕಿದ ಕೆಕೆಆರ್‌, 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಮಿಚೆಲ್‌ ಸ್ಟಾರ್ಕ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.(ANI)

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಸನ್‌ರೈಸರ್ಸ್, ಕೆಕೆಆರ್‌ ಬೌಲರ್‌ಗಳ ದಾಳಿಗೆ ತತ್ತರಿಸಿತು. ಮಿಚೆಲ್ ಸ್ಟಾರ್ಕ್ ಮತ್ತು ವೈಭವ್ ಅರೋರಾ ಪವರ್‌ಪ್ಲೇನಲ್ಲಿ ಅಬ್ಬರಿಸಿದರೆ, ಹರ್ಷಿತ್ ರಾಣಾ, ಆಂಡ್ರೆ ರಸೆಲ್ ಹಾಗೂ ವರುಣ್‌ ಚಕ್ರವರ್ತಿ ಕೂಡಾ ಮಿಂಚಿದರು. ಹೀಗಾಗಿ ನಿರ್ಣಾಯಕ ಫೈನಲ್‌ನಲ್ಲಿ 18.3 ಓವರ್‌ಗಳಲ್ಲಿ ಹೈದರಾಬಾದ್‌ ಆಲೌಟ್‌ ಆಯ್ತು.‌
icon

(2 / 8)

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಸನ್‌ರೈಸರ್ಸ್, ಕೆಕೆಆರ್‌ ಬೌಲರ್‌ಗಳ ದಾಳಿಗೆ ತತ್ತರಿಸಿತು. ಮಿಚೆಲ್ ಸ್ಟಾರ್ಕ್ ಮತ್ತು ವೈಭವ್ ಅರೋರಾ ಪವರ್‌ಪ್ಲೇನಲ್ಲಿ ಅಬ್ಬರಿಸಿದರೆ, ಹರ್ಷಿತ್ ರಾಣಾ, ಆಂಡ್ರೆ ರಸೆಲ್ ಹಾಗೂ ವರುಣ್‌ ಚಕ್ರವರ್ತಿ ಕೂಡಾ ಮಿಂಚಿದರು. ಹೀಗಾಗಿ ನಿರ್ಣಾಯಕ ಫೈನಲ್‌ನಲ್ಲಿ 18.3 ಓವರ್‌ಗಳಲ್ಲಿ ಹೈದರಾಬಾದ್‌ ಆಲೌಟ್‌ ಆಯ್ತು.‌(PTI)

114 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಕೆಕೆಆರ್‌ ಕೇವಲ 10.3 ಓವರ್‌ಗಳಲ್ಲಿ ಗುರಿ ತಲುಪಿತು. ಇದರೊಂದಿಗೆ ಮೂರನೇ ಬಾರಿ ಐಪಿಎಲ್‌ ಟ್ರೋಫಿ ಗೆದ್ದು ಚೆಪಾಕ್‌ ಅಂಗಳದಲ್ಲಿ ಸಂಭ್ರಮಿಸಿತು.
icon

(3 / 8)

114 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಕೆಕೆಆರ್‌ ಕೇವಲ 10.3 ಓವರ್‌ಗಳಲ್ಲಿ ಗುರಿ ತಲುಪಿತು. ಇದರೊಂದಿಗೆ ಮೂರನೇ ಬಾರಿ ಐಪಿಎಲ್‌ ಟ್ರೋಫಿ ಗೆದ್ದು ಚೆಪಾಕ್‌ ಅಂಗಳದಲ್ಲಿ ಸಂಭ್ರಮಿಸಿತು.(PTI)

ಪಂದ್ಯದ ನಂತರ ಕೆಕೆಆರ್‌ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿ ಜಯ್ ಶಾ ಟ್ರೋಫಿ ಹಸ್ತಾಂತರಿಸಿದರು. ಈ ವೇಳೆ ಶುರುವಾಯ್ತು ಕೆಕೆಆರ್‌ ಸಂಭ್ರಮಾಚರಣೆ.
icon

(4 / 8)

ಪಂದ್ಯದ ನಂತರ ಕೆಕೆಆರ್‌ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿ ಜಯ್ ಶಾ ಟ್ರೋಫಿ ಹಸ್ತಾಂತರಿಸಿದರು. ಈ ವೇಳೆ ಶುರುವಾಯ್ತು ಕೆಕೆಆರ್‌ ಸಂಭ್ರಮಾಚರಣೆ.(PTI)

2022ರಲ್ಲಿ ನಡೆದ ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಗೆದ್ದ ಅರ್ಜೆಂಟೀನಾ ತಂಡ ಕೂಡಾ ಅದ್ಧೂರಿ ಸಂಭ್ರಮಾಚರಣೆ ನಡೆಸಿತ್ತು. ನಾಯಕ ಲಿಯೋನೆಲ್ ಮೆಸ್ಸಿ ಸಂಭ್ರಮಾಚರಣೆ ನಡೆಸಿ ಶೈಲಿಯಲ್ಲೇ ಶ್ರೇಯಸ್‌ ಅಯ್ಯರ್‌ ಕೂಡಾ ಸಂಭ್ರಮ ಶುರುಮಾಡಿದರು. 
icon

(5 / 8)

2022ರಲ್ಲಿ ನಡೆದ ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಗೆದ್ದ ಅರ್ಜೆಂಟೀನಾ ತಂಡ ಕೂಡಾ ಅದ್ಧೂರಿ ಸಂಭ್ರಮಾಚರಣೆ ನಡೆಸಿತ್ತು. ನಾಯಕ ಲಿಯೋನೆಲ್ ಮೆಸ್ಸಿ ಸಂಭ್ರಮಾಚರಣೆ ನಡೆಸಿ ಶೈಲಿಯಲ್ಲೇ ಶ್ರೇಯಸ್‌ ಅಯ್ಯರ್‌ ಕೂಡಾ ಸಂಭ್ರಮ ಶುರುಮಾಡಿದರು. 

ಮೆಸ್ಸಿ ನಡೆಯುತ್ತಾ ತಂಡದ ಬಳಿ ಸಾಗಿದಂತೆ ಶ್ರೇಯಸ್‌ ಕೂಡಾ ತಮ್ಮ ತಂಡವನ್ನು ಸೇರಿಕೊಂಡರು. ಬಳಿಕ ಟ್ರೋಫಿ ಎತ್ತಿ ಹಿಡಿಯುತ್ತಾ ಫೋಟೋಗಳಿಗೆ ಪೋಸ್‌ ನೀಡಿದರು.
icon

(6 / 8)

ಮೆಸ್ಸಿ ನಡೆಯುತ್ತಾ ತಂಡದ ಬಳಿ ಸಾಗಿದಂತೆ ಶ್ರೇಯಸ್‌ ಕೂಡಾ ತಮ್ಮ ತಂಡವನ್ನು ಸೇರಿಕೊಂಡರು. ಬಳಿಕ ಟ್ರೋಫಿ ಎತ್ತಿ ಹಿಡಿಯುತ್ತಾ ಫೋಟೋಗಳಿಗೆ ಪೋಸ್‌ ನೀಡಿದರು.(IPL)

ಈ ಹಿಂದೆ 2012 ಹಾಗೂ 2014ರಲ್ಲಿ ಕೆಕೆಆರ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಆಗ ಗೌತಮ್‌ ಗಂಭೀರ್‌ ತಂಡದ ನಾಯಕರಾಗಿದ್ದರು. ಇದೀಗ ಅವರದ್ದೇ ಮಾರ್ಗದರ್ಶನದಲ್ಲಿ ತಂಡ ಮತ್ತೆ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. 
icon

(7 / 8)

ಈ ಹಿಂದೆ 2012 ಹಾಗೂ 2014ರಲ್ಲಿ ಕೆಕೆಆರ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಆಗ ಗೌತಮ್‌ ಗಂಭೀರ್‌ ತಂಡದ ನಾಯಕರಾಗಿದ್ದರು. ಇದೀಗ ಅವರದ್ದೇ ಮಾರ್ಗದರ್ಶನದಲ್ಲಿ ತಂಡ ಮತ್ತೆ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. (ANI)

ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡಗಳ ಪಟ್ಟಿಯಲ್ಲಿ ಕೆಕೆಆರ್‌ ತಂಡ ಮೂರನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್‌ ಹಾಗೂ ಸಿಎಸ್‌ಕೆ ತಂಡಗಳು ತಲಾ ಐದು ಟ್ರೋಫಿ ಗೆದ್ದಿವೆ.
icon

(8 / 8)

ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡಗಳ ಪಟ್ಟಿಯಲ್ಲಿ ಕೆಕೆಆರ್‌ ತಂಡ ಮೂರನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್‌ ಹಾಗೂ ಸಿಎಸ್‌ಕೆ ತಂಡಗಳು ತಲಾ ಐದು ಟ್ರೋಫಿ ಗೆದ್ದಿವೆ.(ANI)


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು