ಯುಜ್ವೇಂದ್ರ ಚಹಲ್-ಧನಶ್ರೀ ವರ್ಮಾ ಡಿವೋರ್ಸ್ ವದಂತಿ: ಸಂಸಾರದಲ್ಲಿ ಹುಳಿ ಹಿಂಡಿದ್ಯಾರು? ಶ್ರೇಯಸ್ ಅಯ್ಯರ್ ಹೆಸರು ಹೇಳ್ತಿದ್ದಾರೆ ನೆಟ್ಟಿಗರು
- Chahal and Dhanashree Divorce: 4 ವರ್ಷಗಳ ದಾಂಪತ್ಯದ ನಂತರ ಯುಜ್ವೇಂದ್ರ ಚಹಲ್-ಧನಶ್ರೀ ವರ್ಮಾ ಅವರು ಬೇರ್ಪಡಲಿದ್ದಾರೆಯೇ? ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡುವ ಮೂಲಕ ಈ ವದಂತಿಗೆ ಪುಷ್ಠಿ ನೀಡಿದ್ದಾರೆ. ಹಾಗಾದರೆ ಈ ಇದಕ್ಕೆ ಕಾರಣ ಯಾರಿರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
- Chahal and Dhanashree Divorce: 4 ವರ್ಷಗಳ ದಾಂಪತ್ಯದ ನಂತರ ಯುಜ್ವೇಂದ್ರ ಚಹಲ್-ಧನಶ್ರೀ ವರ್ಮಾ ಅವರು ಬೇರ್ಪಡಲಿದ್ದಾರೆಯೇ? ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡುವ ಮೂಲಕ ಈ ವದಂತಿಗೆ ಪುಷ್ಠಿ ನೀಡಿದ್ದಾರೆ. ಹಾಗಾದರೆ ಈ ಇದಕ್ಕೆ ಕಾರಣ ಯಾರಿರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
(1 / 10)
ಟೀಮ್ ಇಂಡಿಯಾ ಜೊತೆಗಿನ ಸಂಬಂಧ ಬಹುತೇಕ ಕೊನೆಗೊಳಿಸಿರುವ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಈಗ ತಮ್ಮ ವೈಯಕ್ತಿಕ ಜೀವನದಲ್ಲೂ ದೊಡ್ಡ ಹೊಡೆತ ಅನುಭವಿಸಿದ್ದಾರೆ. ತಮ್ಮ ಪತ್ನಿ ಧನಶ್ರೀ ವರ್ಮಾ ಅವರೊಂದಿಗೆ ದಾಂಪತ್ಯ ಜೀವನ ಕೊನೆಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ. ಹೌದು, ಚಹಲ್ ಮತ್ತು ಧನಶ್ರೀ ಡಿವೋರ್ಸ್ ಪಡೆಯಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
(2 / 10)
ಧನಶ್ರೀ ಮತ್ತು ಚಹಲ್ ನಡುವೆ ಎಲ್ಲವೂ ಸರಿಯಿಲ್ಲ. ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದೆ. ಇಬ್ಬರು ವಿಚ್ಛೇದನ ಪಡೆಯುತ್ತಾರೆ ಎಂಬ ವದಂತಿ 2023ರಿಂದಲೇ ಆರಂಭವಾಗಿತ್ತು. ಧನಶ್ರೀ ಅವರು ತಮ್ಮ ಹೆಸರಿನ ಮುಂದೆ ಚಹಲ್ ಹೆಸರು ತೆಗೆದು ಹಾಕಿದ್ದರ ನಂತರ NEW LIFE LOADING ಎಂದು ಚಹಲ್ ಹಾಕಿದ್ದ ಇನ್ಸ್ಟಾಗ್ರಾಂ ಸ್ಟೋರಿ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿತ್ತು. ಇದೀಗ ಇದು ನಿಜ ಎನ್ನುವಂತಾಗಿದೆ.
(3 / 10)
ಯುಜ್ವೇಂದ್ರ ಚಹಲ್ ಮತ್ತು ಡ್ಯಾನ್ಸ್ ಕೊರಿಯಾಗ್ರಾಫರ್ ಧನಶ್ರೀ ವರ್ಮಾ ಅವರು ತಮ್ಮ ನಾಲ್ಕು ವರ್ಷಗಳ ವೈವಾಹಿಕ ಜೀವನವನ್ನು ಕೊನೆಗೊಳಿಸಲು ಸಜ್ಜಾಗಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ಸಾಕ್ಷಿ ಮತ್ತಷ್ಟು ಪುಷ್ಠಿ ನೀಡುತ್ತಿದೆ ಇಬ್ಬರು ಪರಸ್ಪರ ಅನ್ಫಾಲೋ ಮಾಡಿಕೊಂಡಿರುವುದು ಮತ್ತು ಚಹಲ್, ತನ್ನ ಪತ್ನಿಯ ಜೊತೆಗಿನ ಫೋಟೋಗಳನ್ನು ಡಿಲೀಟ್ ಮಾಡಿರುವುದು.
(4 / 10)
ಇಬ್ಬರ ಹತ್ತಿರದ ಮೂಲವೊಂದು ಟೈಮ್ಸ್ ಆಫ್ ಇಂಡಿಯಾಗೆ ಡಿವೋರ್ಸ್ ಪಡೆಯುವುದನ್ನು ಖಚಿತಪಡಿಸಿದೆ. ಅವರ ವಿಚ್ಛೇದನ ಖಚಿತ. ಇಬ್ಬರು ಪರಸ್ಪರ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ ಅಧಿಕೃತವಾಗಿ ಈಗಲೇ ಪ್ರಕಟಿಸುವುದಿಲ್ಲ. ಅದಕ್ಕೆ ಸಮಯ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಪ್ರತ್ಯೇಕವಾಗಲು ಕಾರಣ ಏನೆಂಬುದು ಬಹಿರಂಗಗೊಂಡಿಲ್ಲ.
(5 / 10)
ವಿಚ್ಛೇದನ ವದಂತಿಯ ಬೆನ್ನಲ್ಲೇ ಚಹಲ್ ಅವರ ಸ್ನೇಹಿತ, ಸಹ ಆಟಗಾರ ಶ್ರೇಯಸ್ ಅಯ್ಯರ್ ಹೆಸರು ತೇಲಿ ಬಂದಿದೆ. ಧನಶ್ರೀ ವರ್ಮಾ ಅವರೊಂದಿಗೆ ಹೆಚ್ಚು ಆಪ್ತತತೆ ಹೊಂದಿದ್ದ ಶ್ರೇಯಸ್ ಅಯ್ಯರ್ ಅವರಿಬ್ಬರ ದಾಂಪತ್ಯ ಜೀವನದಲ್ಲಿ ಹುಳಿ ಹಿಂಡಿದ್ದಾರಾ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ. ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲು ಅಯ್ಯರ್ ಕಾರಣ ಇರಬಹುದೆಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
(6 / 10)
ನೆಟ್ಟಿಗರಿಗೆ ಈ ಅನುಮಾನ ಹುಟ್ಟಲು ಕಾರಣ ಇದೆ. ಏಕೆಂದರೆ ಚಹಲ್ಗಿಂತ ಹೆಚ್ಚಾಗಿ ಅಯ್ಯರ್ ಜೊತೆಗೆ ಧನಶ್ರೀ ಕಾಣಿಸಿಕೊಂಡಿದ್ದಾರೆ. ಅಯ್ಯರ್-ಧನಶ್ರೀ ಒಟ್ಟಿಗೆ ರೀಲ್ಸ್ ಮಾಡಿದ್ದಾರೆ, ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋಗಳು ಈಗಲೂ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
(7 / 10)
ಚಹಲ್ ಅಲಭ್ಯತೆಯಲ್ಲಿ ಅಯ್ಯರ್-ಧನಶ್ರೀ ಇಬ್ಬರು ಒಟ್ಟಿಗೆ ಅನೇಕ ಬಾರಿ ಕಾಣಿಸಿಕೊಂಡ ಫೋಟೋಗಳು ವೈರಲ್ ಆಗಿದ್ದವು. ಅದು ಕೂಡ ತುಂಬಾ ಕ್ಲೋಸ್ ಆಗಿ ಕಾಣಿಸಿದ್ದೂ ಇದೆ. ಇದೇ ಕಾರಣಕ್ಕೆ ಅಯ್ಯರ್ ಹೆಸರು ವದಂತಿಗೆ ತಳುಕು ಹಾಕಿಕೊಂಡಿದೆ. ಆದರೆ ಇದೆಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ.
(X)(8 / 10)
ಶ್ರೇಯಸ್ ಅಯ್ಯರ್ ಮಾತ್ರವಲ್ಲ, ಜನಪ್ರಿಯ ನೃತ್ಯ ಸಂಯೋಜಕ ಪ್ರತೀಕ್ ಉತ್ತೇಕರ್ ಅವರನ್ನೂ ಇಲ್ಲಿಗೆ ಎಳೆದು ತರಲಾಗಿದೆ. ಏಕೆಂದರೆ ಝಲಕ್ ದಿಖ್ ಲಾಜ ಸೀಸನ್ 11ರ ಫೈನಲ್ ವೇಳೆ ಪ್ರತೀಕ್ ಜತೆಗೆ ಧನಶ್ರೀ ತೆಗೆಸಿಕೊಂಡ ಫೋಟೋ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಧನಶ್ರೀ ತುಂಬಾ ಆಪ್ತವಾಗಿ ಕಾಣಿಸಿಕೊಂಡಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಇವರೂ ವಿಚ್ಛೇದನಕ್ಕೆ ಕಾರಣ ಇರಬಹುದೇ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ.
(9 / 10)
ಯುಜ್ವೇಂದ್ರ ಚಹಲ್ ಅವರಿಗೆ ಪ್ರಸ್ತುತ ಭಾರತ ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ. ಇನ್ಮುಂದೆ ಅವರನ್ನು ಆಯ್ಕೆ ಮಾಡುವುದು ಬಹುತೇಕ ಅನುಮಾನ ಎಂದೂ ಹೇಳಲಾಗುತ್ತಿದೆ. ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ನಲ್ಲೂ ಅವರನ್ನು ಕೈಬಿಡಲಾಗಿದೆ. ಶ್ರೇಯಸ್ ಅಯ್ಯರ್ ಮತ್ತು ಚಹಲ್ ಅವರು ಐಪಿಎಲ್ನಲ್ಲಿ ಒಂದೇ ತಂಡದ ಪರ ಕಣಕ್ಕಿಳಿಯಲಿದ್ದಾರೆ. 2025ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಲಿದ್ದಾರೆ.
ಇತರ ಗ್ಯಾಲರಿಗಳು