ಏಕದಿನ ಕ್ರಿಕೆಟ್ನಲ್ಲಿ ಅತಿ ವೇಗದ 2500 ರನ್: ಈ ದಿಗ್ಗಜ ಕ್ರಿಕೆಟಿಗನ ವಿಶ್ವದಾಖಲೆ ಮುರಿದ ಶುಭ್ಮನ್ ಗಿಲ್
- Shubman Gill: ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 25 ರನ್ ಗಳಿಸಿದ ವೇಳೆ ಶುಭ್ಮನ್ ಗಿಲ್ ಹೊಸ ದಾಖಲೆ ನಿರ್ಮಿಸಿದರು. ಆ ಮೂಲಕ ದಿಗ್ಗಜ ಹಾಶೀಮ್ ಆಮ್ಲಾ ದಾಖಲೆ ಪುಡಿಗಟ್ಟಿದರು.
- Shubman Gill: ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 25 ರನ್ ಗಳಿಸಿದ ವೇಳೆ ಶುಭ್ಮನ್ ಗಿಲ್ ಹೊಸ ದಾಖಲೆ ನಿರ್ಮಿಸಿದರು. ಆ ಮೂಲಕ ದಿಗ್ಗಜ ಹಾಶೀಮ್ ಆಮ್ಲಾ ದಾಖಲೆ ಪುಡಿಗಟ್ಟಿದರು.
(1 / 8)
ಅಹ್ಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 112 ರನ್ ಸಿಡಿಸಿದ ಭಾರತದ ಶುಭ್ಮನ್ ಗಿಲ್, ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ.
(AFP)(2 / 8)
ಇಂಗ್ಲೆಂಡ್ ಬೌಲರ್ಗಳ ಮೇಲೆ ದಂಡಯಾತ್ರೆ ನಡೆಸಿದ ಗಿಲ್, ತಾನು ಎದುರಿಸಿದ 102 ಎಸೆತಗಳಲ್ಲಿ ಭರ್ಜರಿ 14 ಬೌಂಡರಿ, 3 ಸಿಕ್ಸರ್ ಸಹಿತ 112 ರನ್ ಬಾರಿಸಿದರು. ಇದು ಅವರ 7ನೇ ಏಕದಿನ ಶತಕ.
(PTI)(3 / 8)
ಇದರೊಂದಿಗೆ ಯುವ ಆಟಗಾರ ಏಕದಿನ ಕ್ರಿಕೆಟ್ನಲ್ಲಿ 2500 ರನ್ (2,587) ಪೂರೈಸಿದ್ದಾರೆ. ಪಂದ್ಯಕ್ಕೂ ಮುನ್ನ 2475 ರನ್ ಗಳಿಸಿದ್ದ ಗಿಲ್, ಈ ಪಂದ್ಯದಲ್ಲಿ 25 ರನ್ ಗಳಿಸಿದಾಗ ಈ ಸಾಧನೆ ಮಾಡಿದರು.
(AP)(4 / 8)
ಕೇವಲ 50 ಇನ್ನಿಂಗ್ಸ್ಗಳಲ್ಲಿ 2500 ರನ್ ಗಳಿಸುವ ಮೂಲಕ ಶತಕವೀರ ಹೊಸ ದಾಖಲೆ ಬರೆದಿದ್ದಾರೆ. ದಕ್ಷಿಣ ಆಫ್ರಿಕಾದ ದಿಗ್ಗಜ ಹಾಶೀಮ್ ಆಮ್ಲಾ ಹೆಸರಿನಲ್ಲಿದ್ದ ಏಕದಿನ ಕ್ರಿಕೆಟ್ನಲ್ಲಿ ವೇಗದ 2,500 ರನ್ಗಳ ದಾಖಲೆಯನ್ನು ಗಿಲ್ ಮುರಿದಿದ್ದಾರೆ.
(REUTERS)(5 / 8)
2019ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಹ್ಯಾಲಿಲ್ಟನ್ನಲ್ಲಿ ಏಕದಿನ ಕ್ರಿಕೆಟ್ಗೆ ಕಾಲಿಟ್ಟಿದ್ದ ಪಂಜಾಬ್ ಕ್ರಿಕೆಟಿಗನಿಗೂ ಮುನ್ನ ಹಾಶೀಮ್ ಆಮ್ಲಾ 53 ಇನ್ನಿಂಗ್ಸ್ಗಳಲ್ಲಿ 2500 ರನ್ ಗಳಿಸಿ ದಾಖಲೆ ಬರೆದಿದ್ದರು.
(Surjeet Yadav)(6 / 8)
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಗಿಲ್ ಎರಡು ಅರ್ಧಶತಕ, 1 ಶತಕ ಸಿಡಿಸಿ ಮಿಂಚಿದರು. ಈ ಸರಣಿಯಲ್ಲಿ ಅವರು 86ರ ಬ್ಯಾಟಿಂಗ್ ಸರಾಸರಿಯಲ್ಲಿ 259 ರನ್ ಬಾರಿಸಿದರು.
(Surjeet Yadav)(7 / 8)
ಪಂದ್ಯದಲ್ಲಿ ಬಾರಿಸಿದ ಸೆಂಚುರಿಯೊಂದಿಗೆ ಗಿಲ್, ಕೇವಲ 50 ಏಕದಿನ ಇನ್ನಿಂಗ್ಸ್ಗಳಲ್ಲಿ 7 ಶತಕ ಪೂರೈಸಿದ ಮತ್ತು 50ನೇ ಪಂದ್ಯದಲ್ಲಿ ಸೆಂಚುರಿ ಸಿಡಿಸಿದ ಭಾರತದ ಮೊದಲ ಆಟಗಾರ.
(Surjeet Yadav)ಇತರ ಗ್ಯಾಲರಿಗಳು