ನಿಜ, ದಾಖಲೆಗಳಿರುವುದೇ ಮುರಿಯಲು; ಆದರೆ ಡಾನ್​ ಬ್ರಾಡ್ಮನ್​ರ 5 ದಾಖಲೆಗಳು ಬ್ರೇಕ್ ಮಾಡುವುದು ಅಸಾಧ್ಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಿಜ, ದಾಖಲೆಗಳಿರುವುದೇ ಮುರಿಯಲು; ಆದರೆ ಡಾನ್​ ಬ್ರಾಡ್ಮನ್​ರ 5 ದಾಖಲೆಗಳು ಬ್ರೇಕ್ ಮಾಡುವುದು ಅಸಾಧ್ಯ

ನಿಜ, ದಾಖಲೆಗಳಿರುವುದೇ ಮುರಿಯಲು; ಆದರೆ ಡಾನ್​ ಬ್ರಾಡ್ಮನ್​ರ 5 ದಾಖಲೆಗಳು ಬ್ರೇಕ್ ಮಾಡುವುದು ಅಸಾಧ್ಯ

  • Cricket Records: ಇಲ್ಲಿಯವರೆಗೆ ಕ್ರಿಕೆಟ್​​ ಇತಿಹಾಸದಲ್ಲಿ ಡಾನ್ ಬ್ರಾಡ್ಮನ್​ಗಿಂತ ಉತ್ತಮ ಆಟಗಾರನೇ ಇಲ್ಲ. ಆಸ್ಟ್ರೇಲಿಯಾದ ಈ ದಿಗ್ಗಜ ನಿರ್ಮಿಸಿದ ಈ ಐದು ದಾಖಲೆಗಳನ್ನು ಯಾರಿಂದಲೂ ಮುಟ್ಟೋಕೆ ಸಾಧ್ಯವೇ ಇಲ್ಲ. ಅವುಗಳು ಇಂತಿವೆ.

ಆಡಿರುವ 52 ಟೆಸ್ಟ್​​​ಗಳಲ್ಲಿ​ ಡಾನ್ ಬ್ರಾಡ್ಮನ್ ಹೊಂದಿರುವ ಬ್ಯಾಟಿಂಗ್ ಸರಾಸರಿ ಬರೋಬ್ಬರಿ 99.94. ಈ ಸರಾಸರಿಯ ಸಮೀಪಕ್ಕೆ ಬರಲು ಯಾರಿಗೂ ಸಾಧ್ಯವಾಗಿಲ್ಲ.
icon

(1 / 5)

(ICC)

ಒಂದೇ ತಂಡದ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆ ಡಾನ್ ಬ್ರಾಡ್ಮನ್ ಹೆಸರಿನಲ್ಲಿದೆ. ಇಂಗ್ಲೆಂಡ್ ವಿರುದ್ಧ ಅವರು 19 ಶತಕ ಬಾರಿಸಿದ್ದಾರೆ. ಇದು ಕೂಡ ಅಸಾಧ್ಯವಾದ ದಾಖಲೆಗಳಲ್ಲಿ ಒಂದು. ಭಾರತದ ವಿರುದ್ಧ 4, ದಕ್ಷಿಣ ಆಫ್ರಿಕಾ ವಿರುದ್ಧ 4, ವೆಸ್ಟ್ ಇಂಡೀಸ್ ವಿರುದ್ಧ 2 ಶತಕ ಗಳಿಸಿದ್ದಾರೆ.
icon

(2 / 5)

ನಾಯಕನಾಗಿಯೂ ಡಾನ್ ಬ್ರಾಡ್ಮನ್ ಅತ್ಯಧಿಕ ಸರಾಸರಿ ಹೊಂದಿದ್ದಾರೆ. ಆಸ್ಟ್ರೇಲಿಯಾದ ನಾಯಕನಾಗಿ ಬ್ರಾಡ್ಮನ್ ಅವರು ಟೆಸ್ಟ್​​​ನಲ್ಲಿ 101.51ರ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಇದು ಕೂಡ ಕಬ್ಭಿಣದ ಕಡಲೆಯಾಗಿದೆ.
icon

(3 / 5)

ಡಾನ್ ಬ್ರಾಡ್ಮನ್ ಟೆಸ್ಟ್ ಕ್ರಿಕೆಟ್​​ನಲ್ಲಿ ಒಂದೇ ದಿನದಲ್ಲಿ ವೈಯಕ್ತಿಕ 309 ರನ್ ಗಳಿಸಿದ್ದಾರೆ. ಇಲ್ಲಿಯವರೆಗೆ ಯಾರೂ ಆ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.
icon

(4 / 5)

ಡಾನ್ ಬ್ರಾಡ್ಮನ್ ಟೆಸ್ಟ್ ಪಂದ್ಯಗಳಲ್ಲಿ 12 ದ್ವಿಶತ ಗಳಿಸಿದ್ದು ಕೂಡ ವಿಶಿಷ್ಟ ದಾಖಲೆಯಾಗಿದೆ. ಶ್ರೀಲಂಕಾದ ಬ್ಯಾಟರ್ ಕುಮಾರ್​ ಸಂಗಕ್ಕಾರ ಮಾತ್ರ 11 ದ್ವಿಶತಕಗಳೊಂದಿಗೆ ಅವರ ಸಮೀಪಕ್ಕೆ ಬಂದಿದ್ದಾರೆ. ಆದರೆ ಬ್ರೇಕ್ ಮಾಡಲು ಸಾಧ್ಯವಾಗಿಲ್ಲ.
icon

(5 / 5)

Prasanna Kumar P N

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು