2 ವರ್ಷಗಳಲ್ಲಿ 4 ಐಸಿಸಿ ಈವೆಂಟ್ ಫೈನಲ್‌ಗಳಲ್ಲಿ ಸೋತ ದಕ್ಷಿಣ ಆಫ್ರಿಕಾ; ಐದನೇಯದ್ದಾದರೂ ಗೆಲ್ಲುತ್ತಾರಾ ಹರಿಣಗಳು
- ವನಿತೆಯರ ಅಂಡರ್-19 ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ಮಣಿಸಿ ಟ್ರೋಫಿ ಗೆದ್ದಿದೆ. ಬಲಿಷ್ಠ ಹರಿಣಗಳಿಗೆ ಐಸಿಸಿ ಟೂರ್ನಿಯಲ್ಲಿ ಮತ್ತೊಂದು ಸೋಲು ಎದುರಾಗಿದೆ. ಅಚ್ಚರಿ ಎಂದರೆ, 2 ವರ್ಷಗಳೊಳಗೆ 4 ಐಸಿಸಿ ಈವೆಂಟ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಸೋಲು ಕಂಡಿದೆ.
- ವನಿತೆಯರ ಅಂಡರ್-19 ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ಮಣಿಸಿ ಟ್ರೋಫಿ ಗೆದ್ದಿದೆ. ಬಲಿಷ್ಠ ಹರಿಣಗಳಿಗೆ ಐಸಿಸಿ ಟೂರ್ನಿಯಲ್ಲಿ ಮತ್ತೊಂದು ಸೋಲು ಎದುರಾಗಿದೆ. ಅಚ್ಚರಿ ಎಂದರೆ, 2 ವರ್ಷಗಳೊಳಗೆ 4 ಐಸಿಸಿ ಈವೆಂಟ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಸೋಲು ಕಂಡಿದೆ.
(1 / 7)
ಕಳೆದ ಎರಡು ವರ್ಷಗಳಲ್ಲಿ, ದಕ್ಷಿಣ ಆಫ್ರಿಕಾ ಒಟ್ಟು 5 ಐಸಿಸಿ ಪಂದ್ಯಾವಳಿಗಳಲ್ಲಿ ಫೈನಲ್ ತಲುಪಿದೆ. ಆದರೆ ಇಲ್ಲಿಯವರೆಗೆ ಐಸಿಸಿ ಟ್ರೋಫಿ ಮಾತ್ರ ಬಂದಿಲ್ಲ. ಐಸಿಸಿ ಫೈನಲ್ ಪ್ರವೇಶಿಸಿರುವ 5 ಪಂದ್ಯಗಳಲ್ಲಿ 4ರಲ್ಲಿ ದಕ್ಷಿಣ ಆಫ್ರಿಕಾ ಸೋತಿದೆ. ಇನ್ನೊಂದು ಫೈನಲ್ ಪಂದ್ಯ ಇನ್ನೂ ನಡೆದಿಲ್ಲ. ದಕ್ಷಿಣ ಆಫ್ರಿಕಾ ತಂಡದ ಚೋಕರ್ಸ್ ಹಣೆಪಟ್ಟಿ ಇನ್ನೂ ಹಾಗೆಯೇ ಇದೆ. (ಗೆಟ್ಟಿ ಫೋಟೋ.)
(2 / 7)
2023ರ ಮಹಿಳಾ ಟಿ20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ಫೈನಲ್ ತಲುಪಿತ್ತು. ಆದರೆ, ಪ್ರಶಸ್ತಿ ಹೋರಾಟದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ಚೇಸಿಂಗ್ ವೇಳೆ ದಕ್ಷಿಣ ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಯಿತು. (ಗೆಟ್ಟಿ ಫೋಟೋ)
(3 / 7)
2024ರ ಪುರುಷರ ಟಿ20 ವಿಶ್ವಕಪ್‌ನಲ್ಲಿಯೂ ದಕ್ಷಿಣ ಆಫ್ರಿಕಾ ಫೈನಲ್ ತಲುಪಿತ್ತು. ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುದ್ಧ ಸೋತಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಲಷ್ಟೇ ಶಕ್ತವಾಯಿತು. (ಗೆಟ್ಟಿ ಫೋಟೋ.)
(4 / 7)
(5 / 7)
2025ರ ಮಹಿಳಾ ಅಂಡರ್-19 ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಫೈನಲ್ ಪ್ರವೇಶಿಸಿತು. ಫೈನಲ್‌ನಲ್ಲಿ ಭಾರತ ಕಿರಿಯರ ತಂಡದ ವಿರುದ್ಧ ಸೋತಿತು. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಕೇವಲ 82 ರನ್‌ಗಳಿಗೆ ಆಲೌಟ್ ಆಯಿತು. ಆದರೆ ಭಾರತ, ಕೇವಲ 1 ವಿಕೆಟ್ ನಷ್ಟಕ್ಕೆ 84 ರನ್ ಸಿಡಿಸಿ ಗೆದ್ದು ಬೀಗಿತು. (ಗೆಟ್ಟಿ ಫೋಟೋ)
(6 / 7)
ದಕ್ಷಿಣ ಆಫ್ರಿಕಾ ತಂಡವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಿದೆ. ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಇದರಲ್ಲಾದರೂ ದಕ್ಷಿಣ ಆಫ್ರಿಕಾ ಗೆಲ್ಲುವ ನಿರೀಕ್ಷೆ ಇದೆ. (AFP)
ಇತರ ಗ್ಯಾಲರಿಗಳು