ಇಂಗ್ಲೆಂಡ್ ವಿರುದ್ಧದ 3ನೇ ಟಿ20ಯಲ್ಲಿ 5 ವಿಕೆಟ್ ಕಬಳಿಸಿ ಹಲವು ದಾಖಲೆ ನಿರ್ಮಿಸಿದ ವರುಣ್ ಚಕ್ರವರ್ತಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇಂಗ್ಲೆಂಡ್ ವಿರುದ್ಧದ 3ನೇ ಟಿ20ಯಲ್ಲಿ 5 ವಿಕೆಟ್ ಕಬಳಿಸಿ ಹಲವು ದಾಖಲೆ ನಿರ್ಮಿಸಿದ ವರುಣ್ ಚಕ್ರವರ್ತಿ

ಇಂಗ್ಲೆಂಡ್ ವಿರುದ್ಧದ 3ನೇ ಟಿ20ಯಲ್ಲಿ 5 ವಿಕೆಟ್ ಕಬಳಿಸಿ ಹಲವು ದಾಖಲೆ ನಿರ್ಮಿಸಿದ ವರುಣ್ ಚಕ್ರವರ್ತಿ

  • ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯಲ್ಲಿ ಸ್ಪಿನ್ನರ್‌ ವರುಣ್ ಚಕ್ರವರ್ತಿ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಅಮೋಘ ಬೌಲಿಂಗ್‌ ಪ್ರದರ್ಶನ ನೀಡಿದ್ದ ಅವರು, ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಮೂರನೇ ಟಿ20 ಪಂದ್ಯದಲ್ಲಿಯೂ ಅಬ್ಬರಿಸಿದ್ದಾರೆ. 24 ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಪಡೆದು ಮಿಂಚಿದ್ದಾರೆ.

ವರುಣ್‌ ಬೌಲಿಂಗ್‌ ಆರ್ಭಟಕ್ಕೆ ಇಂಗ್ಲೆಂಡ್ ಬ್ಯಾಟರ್‌ಗಳ ಬಳಿ ಉತ್ತರವಿರಲಿಲ್ಲ. ಐದು ವಿಕೆಟ್ ಗೊಂಚಲು ಪಡೆದ ಚಕ್ರವರ್ತಿ ಹಲವು ದಾಖಲೆ ನಿರ್ಮಿಸಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಮಾಡಿದಂತೆಯೇ, ಚಕ್ರವರ್ತಿ ರಾಜ್‌ಕೋಟ್‌ನಲ್ಲೂ ಸ್ಪಿನ್‌ ಮ್ಯಾಜಿಕ್ ಪ್ರದರ್ಶಿಸಿದ್ದಾರೆ.
icon

(1 / 8)

(REUTERS)

ಚಕ್ರವರ್ತಿ ಈಗ ಭಾರತದ ಪರ ಒಂದಕ್ಕಿಂತ ಹೆಚ್ಚು ಬಾರಿ ಐದು ವಿಕೆಟ್‌ಗಳನ್ನು ಪಡೆದ ಕೇವಲ ಮೂರನೇ ಬೌಲರ್‌ ಎನಿಸಿಕೊಂಡಿದ್ದಾರೆ. ಕೆಕೆಆರ್ ಸ್ಪಿನ್ನರ್ ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಕೊನೆಯ ಟಿ20 ಸರಣಿಯ ಪಂದ್ಯದಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ್ದರು. ಇದೀಗ ಎರಡನೇ ಟಿ20 ಫೈಫರ್ ಪಡೆದಿದ್ದಾರೆ.
icon

(2 / 8)

ಈ ಹಿಂದೆ ಭುವನೇಶ್ವರ್ ಕುಮಾರ್ ಮತ್ತು ಕುಲ್ದೀಪ್ ಯಾದವ್ ಮಾತ್ರ ಒಂದಕ್ಕಿಂತ ಹೆಚ್ಚು ಬಾರಿ ಈ ಸಾಧನೆ ಮಾಡಿದ್ದಾರೆ.
icon

(3 / 8)

(AP)

ಕಳೆದ ವರ್ಷ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ವರುಣ್‌ 10+ ವಿಕೆಟ್ ಪಡೆದಿದ್ದರು. ಇದೀಗ ಆಂಗ್ಲರ ವಿರುದ್ಧವೂ ಮೂರು ಪಂದ್ಯಗಳಲ್ಲಿ 10 ವಿಕೆಟ್‌ ಕಬಳಿಸಿದ್ದಾರೆ.
icon

(4 / 8)

(PTI)

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 12 ವಿಕೆಟ್‌ ಕಬಳಿಸಿದ್ದ ವರುಣ್‌, ಭಾರತದ ಪರ ಟಿ20 ದ್ವಿಪಕ್ಷೀಯ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಿದ್ದರು. ಇದೀಗ ಇಂಗ್ಲೆಂಡ್‌ ವಿರುದ್ಧ 10 ವಿಕೆಟ್‌ ಪಡೆದಿದ್ದಾರೆ.
icon

(5 / 8)

ಸರಣಿಯಲ್ಲಿ ಇನ್ನೂ 2 ಪಂದ್ಯಗಳು ಬಾಕಿ ಉಳಿದಿದ್ದು, 3 ವಿಕೆಟ್‌ ಪಡೆದರೆ ತಮ್ಮ ದಾಖಲೆಯನ್ನು ತಾವೇ ಬ್ರೇಕ್‌ ಮಾಡಲಿದ್ದಾರೆ.
icon

(6 / 8)

ಭಾರತ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ತಂಡ 9 ವಿಕೆಟ್‌ ಕಳೆದುಕೊಂಡು 171 ರನ್‌ ಗಳಿಸಿತು.
icon

(7 / 8)

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಎಚ್‌ಟಿ ಕನ್ನಡ ಸುದ್ದಿತಾಣಕ್ಕೆ ಭೇಟಿ ನೀಡಿ
icon

(8 / 8)

ಇತರ ಗ್ಯಾಲರಿಗಳು