ಟೀಮ್ ಇಂಡಿಯಾ ದಾಖಲೆಯನ್ನೇ ಪುಡಿಗಟ್ಟಿದ ಎಸ್ಆರ್ಹೆಚ್; 286 ರನ್ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ ಸನ್ರೈಸರ್ಸ್
- Sunrisers Hyderabad: ರಾಜಸ್ಥಾನ್ ರಾಯಲ್ಸ್ ವಿರುದ್ಧ 286 ರನ್ ಚಚ್ಚಿದ ಸನ್ರೈಸರ್ಸ್ ಹೈದರಾಬಾದ್ ತಂಡವು ಭಾರತೀಯ ಕ್ರಿಕೆಟ್ ತಂಡದ ವಿಶ್ವದಾಖಲೆಯನ್ನು ಮುರಿದಿದೆ.
- Sunrisers Hyderabad: ರಾಜಸ್ಥಾನ್ ರಾಯಲ್ಸ್ ವಿರುದ್ಧ 286 ರನ್ ಚಚ್ಚಿದ ಸನ್ರೈಸರ್ಸ್ ಹೈದರಾಬಾದ್ ತಂಡವು ಭಾರತೀಯ ಕ್ರಿಕೆಟ್ ತಂಡದ ವಿಶ್ವದಾಖಲೆಯನ್ನು ಮುರಿದಿದೆ.
(1 / 9)
ಇಂಡಿಯನ್ ಪ್ರೀಮಿಯರ್ ಲೀಗ್ನ 2ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 286 ರನ್ ಸಿಡಿಸಿದ ಸನ್ರೈಸರ್ಸ್ ಹೈದರಾಬಾದ್ ತಂಡವು ಭಾರತೀಯ ಕ್ರಿಕೆಟ್ ತಂಡದ ದಾಖಲೆಯನ್ನು ಪುಡಿಗಟ್ಟಿ ವಿಶ್ವದಾಖಲೆ ನಿರ್ಮಿಸಿದೆ.
(SunRisers Hyderabad-X)(2 / 9)
ಹೈದರಾಬಾದ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹೈದರಾಬಾದ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 286 ರನ್ ಚಚ್ಚುವುದರೊಂದಿಗೆ ಐಪಿಎಲ್ನಲ್ಲಿ ಎರಡನೇ ಗರಿಷ್ಠ ಸ್ಕೋರ್ ದಾಖಲಿಸಿತು.
(PTI)(3 / 9)
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ 250 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಟಿ20 ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಟಿ20 ಕ್ರಿಕೆಟ್ ಚರಿತ್ರೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್, ದೇಶೀಯ ಕ್ರಿಕೆಟ್ ಹಾಗೂ ಫ್ರಾಂಚೈಸಿ ಲೀಗ್ನಲ್ಲಿ ಯಾವೊಂದು ತಂಡವೂ ಈ ದಾಖಲೆ ಮಾಡಿಲ್ಲ.
(AP)(4 / 9)
ಕಳೆದ ವರ್ಷ ಮೂರು ಸಲ 250 ಪ್ಲಸ್ ಸ್ಕೋರ್ ಮಾಡಿದ್ದ ಎಸ್ಆರ್ಹೆಚ್, 2025ರ ಐಪಿಎಲ್ನ ಆರಂಭಿಕ ಐಪಿಎಲ್ನಲ್ಲಿ ಮತ್ತೊಮ್ಮೆ ಈ ಸಾಧನೆ ಮಾಡಿದೆ. ಇದರೊಂದಿಗೆ ತಲಾ ಮೂರು ಬಾರಿ 250 ಪ್ಲಸ್ ರನ್ ಗಳಿಸಿರುವ ಭಾರತ ತಂಡ ಮತ್ತು ಸರ್ರೆ ತಂಡದ ದಾಖಲೆ ಮುರಿದಿದೆ.
(PTI)(5 / 9)
ಸನ್ರೈಸರ್ಸ್ ಹೈದರಾಬಾದ್ 287/3, 286/6, 277/3, 263/5 ಸ್ಕೋರ್ ಮಾಡಿದೆ. ಭಾರತ ತಂಡ 297/6, 260/5, 283/1 ಮತ್ತು ಸರ್ರೆ ತಂಡ 258/6, 252/7, 250/6 ರನ್ ಗಳಿಸಿದೆ.
(AP)(6 / 9)
ಆರ್ಸಿಬಿ ದಾಖಲೆಯನ್ನು ಹೈದರಾಬಾದ್ 4ನೇ ಸಲ ಬ್ರೇಕ್ ಮಾಡಿದೆ. ಕಳೆದ ವರ್ಷ ಮೂರು ಬಾರಿ, ಈ ಸಲ ಒಂದು ಬಾರಿ ಆರ್ಸಿಬಿಯ 263 ರನ್ಗಳ ದಾಖಲೆಯನ್ನು ಹಿಂದಿಕ್ಕಿದೆ. 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ 5 ವಿಕೆಟ್ ನಷ್ಟಕ್ಕೆ 263 ರನ್ ಬಾರಿಸಿತ್ತು.
(PTI)(7 / 9)
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಎರಡನೇ ಗರಿಷ್ಠ ಸ್ಕೋರ್ ದಾಖಲಿಸಿದೆ. 2024ರಲ್ಲಿ 287 ರನ್ ಗಳಿಸಿದ್ದ ಹೈದರಾಬಾದ್ ಇದೀಗ ಆರ್ಆರ್ ವಿರುದ್ಧ 286 ರನ್ ಬಾರಿಸಿ ಎರಡೇ ರನ್ನಿಂದ ತನ್ನದೇ ದಾಖಲೆ ಮುರಿದು ಅಗ್ರಸ್ಥಾನಕ್ಕೇರುವ ಅವಕಾಶ ತಪ್ಪಿಸಿಕೊಂಡಿತು.
(AFP)(8 / 9)
ಪಂದ್ಯದಲ್ಲಿ ಅಬ್ಬರಿಸಿದ ಇಶಾನ್ ಕಿಶನ್ ಚೊಚ್ಚಲ ಐಪಿಎಲ್ ಶತಕ ಸಿಡಿಸಿದರು. 47 ಎಸೆತಗಳಲ್ಲಿ 11 ಬೌಂಡರಿ, 6 ಸಿಕ್ಸರ್ ಸಹಿತ 106 ರನ್ ಗಳಿಸಿದರು. ಪರಿಣಾಮ ಎಸ್ಆರ್ಹೆಚ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 286 ರನ್ ಗಳಿಸಿತು.
(AP)ಇತರ ಗ್ಯಾಲರಿಗಳು