ಐಪಿಎಲ್ ಇತಿಹಾಸದಲ್ಲಿ ಅದೃಷ್ಟವೇ ಇಲ್ಲದ ಸ್ಟಾರ್ ಆಟಗಾರರಿವರು; ಒಮ್ಮೆಯೂ ಗೆದ್ದಿಲ್ಲ ಪಂದ್ಯಶ್ರೇಷ್ಠ ಪ್ರಶಸ್ತಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್ ಇತಿಹಾಸದಲ್ಲಿ ಅದೃಷ್ಟವೇ ಇಲ್ಲದ ಸ್ಟಾರ್ ಆಟಗಾರರಿವರು; ಒಮ್ಮೆಯೂ ಗೆದ್ದಿಲ್ಲ ಪಂದ್ಯಶ್ರೇಷ್ಠ ಪ್ರಶಸ್ತಿ

ಐಪಿಎಲ್ ಇತಿಹಾಸದಲ್ಲಿ ಅದೃಷ್ಟವೇ ಇಲ್ಲದ ಸ್ಟಾರ್ ಆಟಗಾರರಿವರು; ಒಮ್ಮೆಯೂ ಗೆದ್ದಿಲ್ಲ ಪಂದ್ಯಶ್ರೇಷ್ಠ ಪ್ರಶಸ್ತಿ

ಐಪಿಎಲ್‌ನಲ್ಲಿ ಹಲವು ದುರದೃಷ್ಟಕರ ಆಟಗಾರರಿದ್ದಾರೆ. ಟೂರ್ನಿಯಲ್ಲಿ ಈವರೆಗೆ ಹಲವು ಪಂದ್ಯಗಳನ್ನು ಆಡಿದ್ದಾರೆ. ಆದರೆ ಇದುವರೆಗೆ ಒಮ್ಮೆಯೂ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಇಂತಹ ಅಗ್ರ 5 ಆಟಗಾರರು ಯಾರು ಎಂಬುದನ್ನು ನೋಡೋಣ. ಇವರಲ್ಲಿ ಇಬ್ಬರು 2025ರ ಐಪಿಎಲ್‌ನಲ್ಲಿಯೂ ಆಡುತ್ತಿದ್ದಾರೆ.

ಐಪಿಎಲ್‌ನಲ್ಲಿ ಹೆಚ್ಚು ಪಂದ್ಯಗಳನ್ನು ಆಡಿದ್ದರೂ, ಎಂದಿಗೂ ಪಂದ್ಯಶ್ರೇಷ್ಠ ಪ್ರಶಸ್ತಿ ಗೆಲ್ಲದ ಆಟಗಾರರು: ಐಪಿಎಲ್‌ನಲ್ಲಿ ಅನೇಕ ಪಂದ್ಯಗಳನ್ನು ಆಡಿದ, ಆದರೆ ಎಂದಿಗೂ ಪ್ಲೇಯರ್‌ ಆಫ್‌ ದಿ ಮ್ಯಾಚ್ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗದ ದುರದೃಷ್ಟಕರ ಆಟಗಾರರು ಹಲವರಿದ್ದಾರೆ.
icon

(1 / 6)

(AFP)

ಪಟ್ಟಿಯಲ್ಲಿರುವ ಮೊದಲ ಅಚ್ಚರಿಯ ಹೆಸರು ರವಿ ಬಿಷ್ಣೋಯ್. ಲಕ್ನೋ ಸೂಪರ್ ಜೈಂಟ್ಸ್‌ ತಂಡದ ಸ್ಪಿನ್ನರ್ ರವಿ ಬಿಷ್ಣೋಯ್ ಪ್ರತಿಭಾವಂತ ಬೌಲರ್. ಇವರ ಅದೃಷ್ಟವು ತುಂಬಾ ಕೆಟ್ಟದಾಗಿದೆ.  ಈವರೆಗೆ ರವಿ 77 ಪಂದ್ಯಗಳನ್ನು ಆಡಿದ್ದಾರೆ. ಆದರೆ ಇದುವರೆಗೂ ಐಪಿಎಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿಲ್ಲ.
icon

(2 / 6)

(PTI)

ಐಪಿಎಲ್ 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ವಿಜಯ್ ಶಂಕರ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಈ ವರ್ಣರಂಜಿತ ಲೀಗ್‌ನಲ್ಲಿ ಅವರು ಇಲ್ಲಿಯವರೆಗೆ 78 ಪಂದ್ಯಗಳನ್ನು ಆಡಿದ್ದಾರೆ. ಆದರೆ ಒಮ್ಮೆಯೂ ಪಂದ್ಯಶ್ರೇಷ್ಠ ಪ್ರಶಸ್ತಿ ಗೆಲ್ಲಲಿಲ್ಲ.
icon

(3 / 6)

ಧವಳ್ ಕುಲಕರ್ಣಿ: ಮುಂಬೈ ವೇಗದ ಬೌಲರ್ ಧವಳ್ ಕುಲಕರ್ಣಿ ಐಪಿಎಲ್‌ನಲ್ಲಿ ಒಟ್ಟು 92 ಪಂದ್ಯಗಳನ್ನು ಆಡಿದ್ದಾರೆ. ಆದರೆ ಎಂದಿಗೂ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿಲ್ಲ. 90ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿಯೂ ಈ ಪ್ರಶಸ್ತಿಯನ್ನು ಗೆಲ್ಲದ ಕೆಲವೇ ಆಟಗಾರರಲ್ಲಿ ಕುಲಕರ್ಣಿ ಕೂಡಾ ಒಬ್ಬರು.
icon

(4 / 6)

ಸೌರಭ್ ತಿವಾರಿ: ಸೌರಭ್ ತಿವಾರಿ ಅವರನ್ನು ಒಮ್ಮೆ ಭವಿಷ್ಯದ ಧೋನಿ ಎಂದು ಕರೆಯಲಾಗುತ್ತಿತ್ತು, ಅವರು ಮುಂಬೈ ಇಂಡಿಯನ್ಸ್ ಪರ ಆಡುವಾಗ ಅನೇಕ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್‌ಗಳನ್ನು ಆಡಿದ್ದರು.‌  ಐಪಿಎಲ್‌ನಲ್ಲಿ ಈವರೆಗೆ ಅವರು ಒಟ್ಟು 93 ಪಂದ್ಯಗಳನ್ನು ಆಡಿದ್ದಾರೆ. ಆದರೆ ಒಮ್ಮೆಯೂ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿಲ್ಲ.
icon

(5 / 6)

ಸ್ಟುವರ್ಟ್ ಬಿನ್ನಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ್ದರೂ ಪಂದ್ಯಶ್ರೇಷ್ಠ ಪ್ರಶಸ್ತಿ ಗೆಲ್ಲದ ದಾಖಲೆ ಹೊಂದಿದ್ದಾರೆ. ಅವರು ಆರ್‌ಸಿಬಿ, ಆರ್‌ಆರ್‌ ಸೇರಿದಂತೆ ಹಲವು ತಂಡಗಳ ಪರ ಒಟ್ಟು 95 ಪಂದ್ಯಗಳನ್ನು ಆಡಿದ್ದಾರೆ, ಆದರೆ ಎಂದಿಗೂ ಪಂದ್ಯಶ್ರೇಷ್ಠರಾಗಿಲ್ಲ.
icon

(6 / 6)

ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

ಇತರ ಗ್ಯಾಲರಿಗಳು