1 ರನ್ ಗಳಿಸಿ ವಿಶ್ವದಾಖಲೆ ಬರೆದ ಸ್ಟೀವ್ ಸ್ಮಿತ್; ಈ ಮೈಲಿಗಲ್ಲು ತಲುಪಿದ ಆಸೀಸ್​ನ 4ನೇ, ವಿಶ್ವದ 15ನೇ ಬ್ಯಾಟರ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  1 ರನ್ ಗಳಿಸಿ ವಿಶ್ವದಾಖಲೆ ಬರೆದ ಸ್ಟೀವ್ ಸ್ಮಿತ್; ಈ ಮೈಲಿಗಲ್ಲು ತಲುಪಿದ ಆಸೀಸ್​ನ 4ನೇ, ವಿಶ್ವದ 15ನೇ ಬ್ಯಾಟರ್

1 ರನ್ ಗಳಿಸಿ ವಿಶ್ವದಾಖಲೆ ಬರೆದ ಸ್ಟೀವ್ ಸ್ಮಿತ್; ಈ ಮೈಲಿಗಲ್ಲು ತಲುಪಿದ ಆಸೀಸ್​ನ 4ನೇ, ವಿಶ್ವದ 15ನೇ ಬ್ಯಾಟರ್

  • Sri Lanka vs Australia 1st Test: ಪ್ಯಾಟ್ ಕಮಿನ್ಸ್ ಅಲಭ್ಯತೆಯಲ್ಲಿ ಆಸ್ಟ್ರೇಲಿಯಾ ತಂಡದ ಜವಾಬ್ದಾರಿ ಹೊತ್ತಿರುವ ಸ್ಟೀವ್ ಸ್ಮಿತ್, ಬ್ಯಾಟಿಂಗ್ ನಡೆಸುವ ವೇಳೆ 1 ರನ್ ಗಳಿಸಿ ವಿಶ್ವದಾಖಲೆ ಬರೆದಿದ್ದಾರೆ.

ಗಾಲೆಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ತಂಡದ ಹಂಗಾಮಿ ನಾಯಕ ಸ್ಟೀವ್ ಸ್ಮಿತ್ ವೈಯಕ್ತಿಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. 
icon

(1 / 8)

(AFP)

ಟೆಸ್ಟ್ ಕ್ರಿಕೆಟ್​ನಲ್ಲಿ ಈ ಮೈಲಿಗಲ್ಲನ್ನು ತಲುಪಿದ ಆಸ್ಟ್ರೇಲಿಯಾದ 4ನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ಈ ಸಾಧನೆ ಮಾಡಿದ ವಿಶ್ವದ 15ನೇ ಕ್ರಿಕೆಟಿಗನೂ ಆಗಿದ್ದಾರೆ. ಅಲ್ಲದೆ ವೇಗವಾಗಿ 10 ಸಾವಿರ ರನ್ ಪೂರೈಸಿದ ಆಸ್ಟ್ರೇಲಿಯಾದ ಎರಡನೇ ಆಟಗಾರನೂ ಹೌದು. ರಿಕಿ ಪಾಂಟಿಂಗ್ 196 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದರೆ, ಸ್ಮಿತ್​ 205 ರನ್​ಗಳಲ್ಲಿ 10 ಸಾವಿರ ರನ್ ಪೂರ್ಣಗೊಳಿಸಿದ್ದಾರೆ.
icon

(2 / 8)

ಗಾಲೆ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್​​ ವೃತ್ತಿಜೀವನದಲ್ಲಿ 10,000 ರನ್​ಗಳ ಮೈಲಿಗಲ್ಲನ್ನು ತಲುಪಿದ್ದಾರೆ. ಈ ಮೈಲಿಗಲ್ಲನ್ನು ತಲುಪಲು ಆಸೀಸ್ ತಾರೆಗೆ ಕೇವಲ 1 ರನ್ ಬೇಕಿತ್ತು. ಈ ರನ್ ಗಳಿಸಿದ ಬಳಿಕ ಅದ್ಭುತ ಸಾಧನೆ ಮಾಡಿದರು.
icon

(3 / 8)

ಟೆಸ್ಟ್ ಕ್ರಿಕೆಟ್​ನಲ್ಲಿ 10,000 ರನ್ ಪೂರೈಸಿದ ಆಸ್ಟ್ರೇಲಿಯಾದ 4ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸ್ಟೀವ್​ ಸ್ಮಿತ್ ಅವರು, ದಿಗ್ಗಜರಾದ ರಿಕಿ ಪಾಂಟಿಂಗ್, ಅಲನ್ ಬಾರ್ಡರ್, ಸ್ಟೀವ್ ವೇಡ್​ ನಂತರ ಈ ದಾಖಲೆ ನಿರ್ಮಿಸಿದ್ದಾರೆ.
icon

(4 / 8)

(AP)

ಸ್ಟೀವ್ ಸ್ಮಿತ್ 115 ಟೆಸ್ಟ್ ಪಂದ್ಯಗಳಲ್ಲಿ 205 ಇನ್ನಿಂಗ್ಸ್​​ಗಳಲ್ಲಿ 10,000 ರನ್ ಗಡಿ ದಾಟಿದ್ದಾರೆ. ಶ್ರೀಲಂಕಾ ವಿರುದ್ಧ ಕಣಕ್ಕೆ ಇಳಿಯುವುದಕ್ಕೂ ಮುನ್ನ ಸ್ಮಿತ್ ಅವರು 55.86 ಬ್ಯಾಟಿಂಗ್ ಸರಾಸರಿ ಹೊಂದಿದ್ದರು. 31 ಶತಕ, 41 ಅರ್ಧಶತಕಗಳು ಅವರ ಬ್ಯಾಟ್​ನಿಂದ ಬಂದಿವೆ.
icon

(5 / 8)

ಸ್ಟೀವ್ ಸ್ಮಿತ್​ಗೂ ಮುನ್ನ ಆಸೀಸ್​ ಪರ 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿದವರ ಪೈಕಿ ಪಾಂಟಿಂಗ್ 13378 ರನ್ (41 ಶತಕ, 62 ಅರ್ಧಶತಕ), ಅಲನ್ ಬಾರ್ಡರ್ 11174 ರನ್ (27 ಶತಕ, 63 ಅರ್ಧಶತಕ). ಸ್ಟೀವ್ ವಾ 10927 ರನ್ (32 ಶತಕ, 50 ಅರ್ಧಶತಕ) ಸಿಡಿಸಿದ್ದಾರೆ.
icon

(6 / 8)

ಟೆಸ್ಟ್ ಕ್ರಿಕೆಟ್​​ನಲ್ಲಿ 10,000 ರನ್ ಪೂರೈಸಿದ ವಿಶ್ವದ 15ನೇ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಸ್ಟೀವ್ ಸ್ಮಿತ್ ಪಾತ್ರರಾಗಿದ್ದಾರೆ. ಸಚಿನ್ (15921), ಕಾಲಿಸ್ (13289), ದ್ರಾವಿಡ್ (13288), ರೂಟ್ (12972), ಅಲೆಸ್ಟರ್ ಕುಕ್ (12472), ಸಂಗಕ್ಕಾರ (12400), ಲಾರಾ (11953), ಶಿವನಾರಾಯಣ್ ಚಂದ್ರಪಾಲ್ (11867), ಜಯವರ್ಧನೆ (11814), ಸುನಿಲ್ ಗವಾಸ್ಕರ್ (10) ನಂತರದ ಸ್ಥಾನದಲ್ಲಿದ್ದಾರೆ.
icon

(7 / 8)

ಪ್ರಸ್ತುತ ಸಕ್ರಿಯ ಆಟಗಾರರ ಪೈಕಿ ಸ್ಮಿತ್ ಹೊರತುಪಡಿಸಿದರೆ ಜೋ ರೂಟ್ ಮಾತ್ರ ಟೆಸ್ಟ್ ಕ್ರಿಕೆಟ್​ನಲ್ಲಿ 10,000 ರನ್ ಗಡಿ ದಾಟಿದ್ದಾರೆ. ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್ ಇನ್ನೂ ಈ ಮೈಲಿಗಲ್ಲು ಮುಟ್ಟಲು ಇನ್ನೂ ಕಾಯಬೇಕಿದೆ. ವಿಲಿಯಮ್ಸನ್ 9276 ರನ್, ಕೊಹ್ಲಿ 9230 ರನ್ ಗಳಿಸಿದ್ದಾರೆ.
icon

(8 / 8)

ಇತರ ಗ್ಯಾಲರಿಗಳು