ಟಿ20 ಕ್ರಿಕೆಟ್‌ನಲ್ಲಿ ಸುನಿಲ್ ನರೈನ್ ವಿಶ್ವದಾಖಲೆ; ಬುಮ್ರಾ, ಮಾಲಿಂಗ ದಾಖಲೆ ಬ್ರೇಕ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿ20 ಕ್ರಿಕೆಟ್‌ನಲ್ಲಿ ಸುನಿಲ್ ನರೈನ್ ವಿಶ್ವದಾಖಲೆ; ಬುಮ್ರಾ, ಮಾಲಿಂಗ ದಾಖಲೆ ಬ್ರೇಕ್

ಟಿ20 ಕ್ರಿಕೆಟ್‌ನಲ್ಲಿ ಸುನಿಲ್ ನರೈನ್ ವಿಶ್ವದಾಖಲೆ; ಬುಮ್ರಾ, ಮಾಲಿಂಗ ದಾಖಲೆ ಬ್ರೇಕ್

ಕೋಲ್ಕತ್ತಾ ನೈಟ್‌ ರೈಡರ್ಸ್‌ ಪರ ಸುನಿಲ್‌ ನರೈನ್‌ ದಾಖಲೆ ನಿರ್ಮಿಸಿದ್ದಾರೆ. ಟಿ 20 ಕ್ರಿಕೆಟ್‌ನಲ್ಲಿ ಒಂದೇ ತಂಡದ ಪರ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿರುವ ಟಾಪ್ 6 ಬೌಲರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ ಕೂಡ ಸೇರಿದ್ದಾರೆ. ಸುನಿಲ್ ನರೈನ್ ವಿಶ್ವ ದಾಖಲೆ ಮಾಡಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಸುನಿಲ್ ನರೈನ್ ಪಾತ್ರರಾಗಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ಪರ ಅವರು 209 ವಿಕೆಟ್ ಕಬಳಿಸಿದ್ದಾರೆ. ವೆಸ್ಟ್ ಇಂಡೀಸ್ ಸ್ಪಿನ್ ಆಲ್ರೌಂಡರ್ ನರೈನ್ ಐಪಿಎಲ್ 2025ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎರಡು ವಿಕೆಟ್ ಪಡೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
icon

(1 / 6)

(ANI)

ಸಮಿತ್ ಪಟೇಲ್: ಸುನಿಲ್‌ ನರೈನ್ನ್‌ ಅವರು ಆಲ್ ರೌಂಡರ್ ಸಮಿತ್ ಪಟೇಲ್ ಅವರನ್ನು ಹಿಂದಿಕ್ಕಿದ್ದಾರೆ. ನಾಟಿಂಗ್ಹ್ಯಾಮ್ಶೈರ್ ಪರ ಆಡಿ ಸಮಿತ್ 208 ವಿಕೆಟ್‌ ಪಡೆದಿದ್ದಾರೆ. ಲೀಸೆಸ್ಟರ್‌ನಲ್ಲಿ ಜನಿಸಿದ ಸಮಿತ್, ಇಂಗ್ಲೆಂಡ್ ಪರ 60 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
icon

(2 / 6)

(X)

ಕ್ರಿಸ್ ವುಡ್ ಮೂರನೇ ಸ್ಥಾನದಲ್ಲಿದ್ದಾರೆ. ಹ್ಯಾಂಪ್ಶೈರ್ ಪರ ಇವರು 199 ವಿಕೆಟ್ ಕಬಳಿಸಿದ್ದಾರೆ. 34ರ ಹರೆಯದ ಕ್ರಿಸ್ ವುಡ್ ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿಲ್ಲ.
icon

(3 / 6)

ಲಸಿತ್ ಮಾಲಿಂಗ ಮುಂಬೈ ಇಂಡಿಯನ್ಸ್ ಪರ 195 ವಿಕೆಟ್ ಕಬಳಿಸಿದ್ದಾರೆ. ಮಾಲಿಂಗ ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಆಗಿದ್ದಾರೆ.
icon

(4 / 6)

(PTI)

ಡೇವಿಡ್ ಪೈನ್ ಐದನೇ ಸ್ಥಾನದಲ್ಲಿದ್ದಾರೆ. ಗ್ಲೌಸೆಸ್ಟರ್ಶೈರ್ ಪರ ಆಡುವಾಗ ಅವರು 193 ವಿಕೆಟ್‌ಗಳನ್ನು ಪಡೆದಿದ್ದಾರೆ. ಪೈನ್ 2022ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆದರೆ ಇಂಗ್ಲೆಂಡ್ ಪರ ಕೇವಲ ಒಂದು ಏಕದಿನ ಪಂದ್ಯವನ್ನು ಮಾತ್ರ ಆಡಲು ಸಾಧ್ಯವಾಯಿತು.
icon

(5 / 6)

ಜಸ್ಪ್ರೀತ್ ಬುಮ್ರಾ: ಭಾರತದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಇವರು 184 ವಿಕೆಟ್ ಕಬಳಿಸಿದ್ದಾರೆ. ಅವರು 2013ರಲ್ಲಿ ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ ಪದಾರ್ಪಣೆ ಮಾಡಿದರು. ಈಗಲೂ ಅದೇ ತಂಡದಲ್ಲಿ ಆಡುತ್ತಿದ್ದಾರೆ.
icon

(6 / 6)

(AFP)

ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

ಇತರ ಗ್ಯಾಲರಿಗಳು