ಸತತ 12 ಪಂದ್ಯಗಳಲ್ಲಿ 25ಕ್ಕೂ ಹೆಚ್ಚು ರನ್; ವಿಶೇಷ ದಾಖಲೆ ಬರೆದ ಸೂರ್ಯಕುಮಾರ್ ಯಾದವ್, ಸಚಿನ್ ರೆಕಾರ್ಡ್ ಬ್ರೇಕ್
ಐಪಿಎಲ್ 18ನೇ ಆವೃತ್ತಿಯಲ್ಲಿ ಸೂರ್ಯಕುಮಾರ್ ಯಾದವ್ ಅಮೋಘ ಫಾರ್ಮ್‌ನಲ್ಲಿದ್ದಾರೆ. ಮೇ 6ರ ಮಂಗಳವಾರ ನಡೆದ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿಯೂ ಸೂರ್ಯ ಅಬ್ಬರಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಸದಾ ಸಿಡಿಯುವ ಅವರು, ಮುಂಬೈ ಇಂಡಿಯನ್ಸ್ ಪರ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.
(1 / 8)
ಗುಜರಾತ್ ವಿರುದ್ಧದ ಪಂದ್ಯದಲ್ಲಿ ಸೂರ್ಯ 24 ಎಸೆತಗಳಲ್ಲಿ 35 ರನ್ ಗಳಿಸಿದರು. ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಇದು ಸೂರ್ಯಕುಮಾರ್ ಆಡಿದ 12ನೇ ಪಂದ್ಯ. ಈ ಎಲ್ಲಾ 12 ಪಂದ್ಯಗಳಲ್ಲಿಯೂ ಅವರು 25ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಯಾವುದೇ ಪಂದ್ಯದಲ್ಲೂ ಒಂದಂಕಿಗೆ ಔಟ್ ಆಗಿಲ್ಲ.
(REUTERS)(2 / 8)
ಐಪಿಎಲ್‌ನಲ್ಲಿ ಇದು ದಾಖಲೆ. ಇಷ್ಟು ಸುದೀರ್ಘ ಅವಧಿಗೆ ಸತತವಾಗಿ ಯಾರೂ 25ಕ್ಕೂ ಹೆಚ್ಚು ರನ್ ಗಳಿಸಿಲ್ಲ. ಪುರುಷರ ಟಿ20 ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾದ ಟೆಂಬಾ ಬವುಮಾ ಸತತ 13 ಇನ್ನಿಂಗ್ಸ್‌ಗಳಲ್ಲಿ 25ಕ್ಕೂ ಅಧಿಕ ರನ್ ಗಳಿಸಿರುವುದು ದಾಖಲೆಯಾಗಿದೆ.
(REUTERS)(3 / 8)
ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್ ಮುಗಿಯುವ ವೇಳೆಗೆ, ಸೂರ್ಯಕುಮಾರ್ ಪ್ರಸಕ್ತ ಆವೃತ್ತಿಯಲ್ಲಿ ಒಟ್ಟು 510 ರನ್ ಗಳಿಸಿದ್ದಾರೆ. ಇದರೊಂದಿಗೆ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.
(Hindustan Times)(4 / 8)
ವಾಂಖೆಡೆಯಲ್ಲಿ ನಡೆದ ಜಿಟಿ ವಿರುದ್ಧದ ಪಂದ್ಯದಲ್ಲಿ 35 ರನ್ ಗಳಿಸುವ ಮೂಲಕ ಐಪಿಎಲ್ 2025ರ ಆವೃತ್ತಿಯಲ್ಲಿ 500 ರನ್ ಗಡಿ ದಾಟಿದ್ದಾರೆ. ಸ್ಕೈ ಒಂದೇ ಋತುವಿನಲ್ಲಿ 500ಕ್ಕೂ ಅಧಿಕ ರನ್‌ಗಳನ್ನು ದಾಟಿದ್ದು ಇದು ಮೂರನೇ ಬಾರಿ. ಆ ಮೂಲಕ ಮುಂಬೈ ಇಂಡಿಯನ್ಸ್ ಪರ ಅತಿ ಹೆಚ್ಚು ಬಾರಿ 500ಕ್ಕೂ ಹೆಚ್ಚು ರನ್ ಕಲೆ ಹಾಕಿದ ಸಾಧನೆ ಮಾಡಿದ್ದಾರೆ.
(AP)(7 / 8)
ಅತ್ತ ಸಚಿನ್ ತೆಂಡೂಲ್ಕರ್ 2010 ಮತ್ತು 2011ರಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದರೆ, ಕ್ವಿಂಟನ್ ಡಿ ಕಾಕ್ 2019 ಮತ್ತು 2020 ರಲ್ಲಿ ಎಂಐ ಪರ 500ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದರು.
(PTI)ಇತರ ಗ್ಯಾಲರಿಗಳು