ಡಬ್ಲ್ಯುಟಿಸಿ 2025-27ರಲ್ಲಿ 18 ಪಂದ್ಯ ಆಡಲಿದೆ ಭಾರತ; ಮುಂದಿನ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿ ಹೀಗಿದೆ
- 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯು ಅಂತಿಮ ಹಂತಕ್ಕೆ ಬಂದಿದ್ದು, ಭಾರತ ತಂಡವು ಫೈನಲ್ ಪ್ರವೇಶಿಸುವಲ್ಲಿ ವಿಫಲವಾಯ್ತು. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ವಿರುದ್ಧ 3-1 ಅಂತರದಿಂದ ಗೆದ್ದ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ತಂಡದೊಂದಿಗೆ ಫೈನಲ್ ಪಂದ್ಯ ಆಡಲು ಸಜ್ಜಾಯ್ತು.
- 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯು ಅಂತಿಮ ಹಂತಕ್ಕೆ ಬಂದಿದ್ದು, ಭಾರತ ತಂಡವು ಫೈನಲ್ ಪ್ರವೇಶಿಸುವಲ್ಲಿ ವಿಫಲವಾಯ್ತು. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ವಿರುದ್ಧ 3-1 ಅಂತರದಿಂದ ಗೆದ್ದ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ತಂಡದೊಂದಿಗೆ ಫೈನಲ್ ಪಂದ್ಯ ಆಡಲು ಸಜ್ಜಾಯ್ತು.
(1 / 12)
ಪ್ರಸಕ್ತ ಋತುವಿನಲ್ಲಿ ಆಡಿದ ಕೊನೆಯ 8 ಟೆಸ್ಟ್ ಪಂದ್ಯಗಳಲ್ಲಿ 6ರಲ್ಲಿ ಸೋಲುವ ಮೂಲಕ ಭಾರತ ತಂಡ ಭಾರಿ ನಿರಾಶೆ ಅನುಭವಿಸಿತು. ಕೇವಲ ಒಂದು ಪಂದ್ಯ ಮಾತ್ರ ಗೆದ್ದು ಕಳಪೆ ಪ್ರದರ್ಶನ ನೀಡಿತು. ಈ ಆವೃತ್ತಿಯ ಪಂದ್ಯಗಳು ಮುಕ್ತಾಯವಾಗಿದ್ದು, ಭಾರತವು ಮುಂದೆ ಈ ವರ್ಷದ ಕೊನೆಯಲ್ಲಿ 2025-27ರ ಡಬ್ಲ್ಯುಟಿಸಿ ಚಕ್ರದ ಪಂದ್ಯಗಳನ್ನು ಆಡಲಿದೆ.
(AFP)(2 / 12)
ನೂತನ ಡಬ್ಲ್ಯುಟಿಸಿ ಅಭಿಯಾನದಲ್ಲಿ ಭಾರತವು ಒಟ್ಟು 18 ಟೆಸ್ಟ್ ಪಂದ್ಯಗಳಲ್ಲಿ ಆಡಲಿದೆ. ಮುಂದಿನ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಲು ಆರಂಭದಿಂದಲೇ ಶ್ರಮ ಹಾಕಬೇಕಾಗಿದೆ. 2025ರಲ್ಲಿ ಇಂಗ್ಲೆಂಡ್‌ನಲ್ಲಿ ಐದು ಪಂದ್ಯಗಳ ಸರಣಿಯೊಂದಿಗೆ ಭಾರತ ಮುಂದಿನ ಆವೃತ್ತಿಯ ಅಭಿಯಾನ ಆರಂಭಿಸಲಿದೆ.
(HT_PRINT)(3 / 12)
2025ರ ಅಕ್ಟೋಬರ್-ನವೆಂಬರ್‌ಲ್ಲಿ ಎರಡು ಪಂದ್ಯಗಳ ತವರು ಟೆಸ್ಟ್ ಸರಣಿ ನಡೆಯಲಿದ್ದು, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ಭಾರತಕ್ಕೆ ಪ್ರಯಾಣಿಸಲಿವೆ.
(AFP)(4 / 12)
2026ರ ಆಗಸ್ಟ್ ತಿಂಗಳಲ್ಲಿ ಎರಡು ಟೆಸ್ಟ್ ಪಂದ್ಯಗಳಿಗಾಗಿ ಶ್ರೀಲಂಕಾ ಪ್ರವಾಸ ಮಾಡಲಿದೆ. ಅಕ್ಟೋಬರ್ ಮತ್ತು ಡಿಸೆಂಬರ್ ತಿಂಗಳ ನಡುವೆ ಕಿವೀಸ್ ಪ್ರವಾಸ ಇರಲಿದ್ದು, ಎರಡು ಪಂದ್ಯಗಳ ಸರಣಿ ನಡೆಯಲಿದೆ.
(BCCI- X)(5 / 12)
2027ರಲ್ಲಿ ತವರು ನೆಲದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ ನಡೆಯಲಿದ್ದು, ಆಸ್ಟ್ರೇಲಿಯಾವನ್ನು ಎದುರಿಸಲಿದೆ. ದಶಕದಲ್ಲಿ ಇದೇ ಮೊದಲ ಬಾರಿಗೆ ಬಿಜಿಟಿ ಕಳೆದುಕೊಂಡ ನಂತರ, ಅದನ್ನು ಮರಳಿ ಪಡೆಯಲು ಟೀಮ್ ಇಂಡಿಯಾ ಹೋರಾಡಲಿದೆ.
(AFP)ಇತರ ಗ್ಯಾಲರಿಗಳು