10.75 ಕೋಟಿ ಪಡೆದ ಬೌಲರ್ ಆಡಿದ್ದು ಒಂದೇ ಪಂದ್ಯ, ಹಾಕಿದ್ದು ಮೂರೇ ಓವರ್; ಕಳೆದ ವರ್ಷ ಹೀರೋ-ಈಗ ಝೀರೋ!
2024ರ ಐಪಿಎಲ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ನಟರಾಜನ್, ಈ ಸಲ ಡೆಲ್ಲಿ ಕ್ಯಾಪಿಟಲ್ಸ್ ಪರ ಒಂದೇ ಒಂದು ಪಂದ್ಯವನ್ನಾಡಿದ್ದಾರೆ.
(1 / 5)
2024ರ ಐಪಿಎಲ್ನ ರನ್ನರ್ಅಪ್ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಸ್ಥಾನ ಪಡೆದಿದ್ದ ವೇಗಿ ಟಿ ನಟರಾಜನ್ ಈ ಸಲ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಿದರು. ಕಳೆದ ವರ್ಷ ಹೀರೋ ಆಗಿದ್ದ ನಟ್ಟು ಈ ಬಾರಿ ಆಗಿದ್ದು ಝೀರೋ!
(Surjeet Yadav)(2 / 5)
2025ರ ಮೆಗಾ ಹರಾಜಿನಲ್ಲಿ ಟಿ ನಜರಾನ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 10.75 ಕೋಟಿ ರೂಪಾಯಿಗೆ ಖರೀದಿಸಿತು. ನಟರಾಜನ್ ಈ ಸೀಸನ್ನಲ್ಲಿ ಖರೀದಿಯಾದ ದುಬಾರಿ ಬೌಲರ್ಗಳಲ್ಲಿ ಒಬ್ಬರು.
(3 / 5)
ದುಬಾರಿ ಬೌಲರ್ ನಟರಾಜನ್ ಅವರು ಪ್ರಸಕ್ತ ಆವೃತ್ತಿಯಲ್ಲಿ ಆಡಿದ್ದು ಒಂದು ಪಂದ್ಯವನ್ನಷ್ಟೆ. ಅದರಲ್ಲೂ ಮೂರು ಓವರ್ಗಳನ್ನಷ್ಟೇ ಎಸೆದರು. ಆದರೆ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ.
(4 / 5)
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ನಟರಾಜನ್ 3 ಓವರ್ಗಳಲ್ಲಿ 1 ವಿಕೆಟ್ ಪಡೆಯದೆ 49 ರನ್ ನೀಡಿದರು. ತಮ್ಮ ನಾಲ್ಕು ಓವರ್ಗಳ ಕೋಟಾ ಪೂರ್ಣಗೊಳಿಸಲು ಅವಕಾಶ ನೀಡಿಲ್ಲ. ಕಳೆದ ವರ್ಷ 14 ಪಂದ್ಯಗಳಲ್ಲಿ 19 ವಿಕೆಟ್ ಉರುಳಿಸಿದ್ದರು.
ಇತರ ಗ್ಯಾಲರಿಗಳು