ರೋಹಿತ್ ಶರ್ಮಾ ಮಗಳು ಓದುವ ಶಾಲೆ ಯಾವುದು; ಸಮೈರಾ ವಿದ್ಯಾಭ್ಯಾಸಕ್ಕೆ ವರ್ಷಕ್ಕೆ ಲಕ್ಷಾಂತರ ರೂ ಖರ್ಚು ಮಾಡ್ತಾರೆ ಹಿಟ್‌ಮ್ಯಾನ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರೋಹಿತ್ ಶರ್ಮಾ ಮಗಳು ಓದುವ ಶಾಲೆ ಯಾವುದು; ಸಮೈರಾ ವಿದ್ಯಾಭ್ಯಾಸಕ್ಕೆ ವರ್ಷಕ್ಕೆ ಲಕ್ಷಾಂತರ ರೂ ಖರ್ಚು ಮಾಡ್ತಾರೆ ಹಿಟ್‌ಮ್ಯಾನ್

ರೋಹಿತ್ ಶರ್ಮಾ ಮಗಳು ಓದುವ ಶಾಲೆ ಯಾವುದು; ಸಮೈರಾ ವಿದ್ಯಾಭ್ಯಾಸಕ್ಕೆ ವರ್ಷಕ್ಕೆ ಲಕ್ಷಾಂತರ ರೂ ಖರ್ಚು ಮಾಡ್ತಾರೆ ಹಿಟ್‌ಮ್ಯಾನ್

  • ಟೀಮ್‌ ಇಂಡಿಯಾ ಅನುಭವಿ ಆಟಗಾರ ರೋಹಿತ್ ಶರ್ಮಾ ಅವರ 6 ವರ್ಷದ ಮಗಳು ಸಮೈರಾ, ಮುಂಬೈನ ಪ್ರತಿಷ್ಠಿತ ಶಾಲೆಯೊಂದರಲ್ಲಿ ಓದುತ್ತಿದ್ದಾಳೆ. ಮಗಳ ಪ್ರಾಥಮಿಕ ಹಂತದ ವಿದ್ಯಾಭ್ಯಾಸಕ್ಕಾಗಿಯೇ ರೋಹಿತ್‌ ಲಕ್ಷಾಂತರ ರೂ. ಖರ್ಚು ಮಾಡಬೇಕಾಗುತ್ತದೆ.

‌ಸದ್ಯ ಐಪಿಎಲ್ ನಡೆಯುತ್ತಿದ್ದು, ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಮಗಳು ಸಮೈರಾ ಕೂಡ ತಮ್ಮ ತಂದೆಯನ್ನು ಬೆಂಬಲಿಸಲು ಮೈದಾನಕ್ಕೆ ಬರುತ್ತಾರೆ. ಸಮೈರಾ ಯಾವ ಶಾಲೆಯಲ್ಲಿ ಓದುತ್ತಿದ್ದಾರೆ ಎಂಬ ಮಾಹಿತಿ ಹಾಗೂ ಅಲ್ಲಿನ ಫೀಸ್‌ ವಿವರ ಇಲ್ಲಿದೆ.
icon

(1 / 7)

ರೋಹಿತ್ ಅವರು 2015ರ ಡಿಸೆಂಬರ್‌ನಲ್ಲಿ ರಿತಿಕಾ ಅವರನ್ನು ವಿವಾಹವಾದರು. ಅವರಿಗೆ 2018ರಲ್ಲಿ ಜನಿಸಿದ ಮಗಳು ಸಮೈರಾ. ಆ ನಂತರ 2024 ರ ನವೆಂಬರ್‌ ತಿಂಗಳಲ್ಲಿ ಅಹಾನ್ ಎಂಬ ಮಗ ಜನಿಸಿದ್ದಾನೆ.
icon

(2 / 7)

ರೋಹಿತ್ ಅವರ ಮಗಳು ಸಮೈರಾ ಮುಂಬೈನ ಪ್ರಸಿದ್ಧ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ (ಡಿಎಐಎಸ್) ವಿದ್ಯಾರ್ಥಿನಿ. ವಾಣಿಜ್ಯ ನಗರಿಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ಮಕ್ಕಳೂ ಓದುತ್ತಾರೆ. 2003ರಲ್ಲಿ ನೀತಾ ಮುಖೇಶ್ ಅಂಬಾನಿ ಸ್ಥಾಪಿಸಿದ ಈ ಶಾಲೆ ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ.
icon

(3 / 7)

ಸಿಐಎಸ್ಸಿಇ (ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್), ಸಿಎಐಇ (ಕೇಂಬ್ರಿಡ್ಜ್ ಇಂಟರ್ನ್ಯಾಷನಲ್ ಎಜುಕೇಶನ್) ಮತ್ತು ಇಂಟರ್ನ್ಯಾಷನಲ್ ಬ್ಯಾಕಲೌರೇಟ್ (ಐಬಿ) ಅನ್ನು ಈ ಮೂರು ಮಂಡಳಿಗಳ ಅಡಿಯಲ್ಲಿ ಕಲಿಸಲಾಗುತ್ತದೆ.
icon

(4 / 7)

ವರದಿಯ ಪ್ರಕಾರ, ಡಿಎಐಎಸ್‌ನ ಶುಲ್ಕ ರಚನೆಯು ಹೀಗಿದೆ. ಇಲ್ಲಿ ನರ್ಸರಿ ಮಕ್ಕಳಿಗೆ 14 ಲಕ್ಷ ರೂ. ಫೀಸ್‌ ಇದೆ. ಮಾಧ್ಯಮಿಕ ಶಾಲೆಗೆ 18ರಿಂದ 20 ಲಕ್ಷ ರೂ., 11-12ನೇ ತರಗತಿಗಳಿಗೆ ವಾರ್ಷಿಕವಾಗಿ ಇನ್ನೂ ಹೆಚ್ಚಿನ ಶುಲ್ಕಗಳಿವೆ. ಈ ಶಾಲೆಯಲ್ಲಿ ಸಮೈರಾ ಅವರ ಸಹಪಾಠಿಗಳು ಕೂಡಾ ಸೆಲೆಬ್ರಿಟಿಗಳ ಮಕ್ಕಳೇ. ಆರಾಧ್ಯ ಬಚ್ಚನ್ (ಅಭಿಷೇಕ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಮಗಳು), ಅಬ್ರಾಮ್ ಖಾನ್ (ಶಾರುಖ್ ಮತ್ತು ಗೌರಿ ಖಾನ್ ಅವರ ಮಗ), ಮತ್ತು ತೈಮೂರ್ ಮತ್ತು ಜೆಹ್ ಅಲಿ ಖಾನ್ (ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಮಗ) ಓದುತ್ತಿದ್ದಾರೆ.
icon

(5 / 7)

ಏಳು ವರ್ಷದ ಸಮೈರಾ ಪಂದ್ಯದ ನಂತರ ತನ್ನ ತಂದೆಯನ್ನು ಅಪ್ಪಿಕೊಳ್ಳುವುದು, ಅವರೊಂದಿಗೆ ಖುಷಿಯಿಂದ ಮಾತನಾಡುವುದನ್ನು ಕಾಣಬಹುದು. ಈಗ ಸಮೈರಾ ದೊಡ್ಡ ಸಹೋದರಿ ಆಗಿದ್ದಾಳೆ. ಅವಳಿಗೆ ಸಹೋದರ ಬಂದಿದ್ದಾರೆ.
icon

(6 / 7)

ರೋಹಿತ್ ಮತ್ತು ರಿತಿಕಾ ತಮ್ಮ 5 ತಿಂಗಳ ಮಗ ಅಹಾನ್ ಅವರನ್ನು ಇನ್ನೂ ಪರಿಚಯಿಸಿಲ್ಲ. ಮಗುವಿನ ಮುಖ ಬಹಿರಂಗಪಡಿಸಿಲ್ಲ.
icon

(7 / 7)

ರೋಹಿತ್ ಮತ್ತು ರಿತಿಕಾ ತಮ್ಮ 5 ತಿಂಗಳ ಮಗ ಅಹಾನ್ ಅವರನ್ನು ಇನ್ನೂ ಪರಿಚಯಿಸಿಲ್ಲ. ಮಗುವಿನ ಮುಖ ಬಹಿರಂಗಪಡಿಸಿಲ್ಲ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

ಇತರ ಗ್ಯಾಲರಿಗಳು