ಕಳೆದ 5 ಐಪಿಎಲ್​ ಸೀಸನ್​ಗಳಲ್ಲಿ ಅತಿ ಹೆಚ್ಚು ಸಲ ಪ್ಲೇಆಫ್ ತಲುಪಿದ ತಂಡಗಳಿವು; ಕಪ್ ಗೆಲ್ಲದ ಈ ತಂಡವೇ ಅತ್ಯಂತ ಯಶಸ್ವಿ!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಳೆದ 5 ಐಪಿಎಲ್​ ಸೀಸನ್​ಗಳಲ್ಲಿ ಅತಿ ಹೆಚ್ಚು ಸಲ ಪ್ಲೇಆಫ್ ತಲುಪಿದ ತಂಡಗಳಿವು; ಕಪ್ ಗೆಲ್ಲದ ಈ ತಂಡವೇ ಅತ್ಯಂತ ಯಶಸ್ವಿ!

ಕಳೆದ 5 ಐಪಿಎಲ್​ ಸೀಸನ್​ಗಳಲ್ಲಿ ಅತಿ ಹೆಚ್ಚು ಸಲ ಪ್ಲೇಆಫ್ ತಲುಪಿದ ತಂಡಗಳಿವು; ಕಪ್ ಗೆಲ್ಲದ ಈ ತಂಡವೇ ಅತ್ಯಂತ ಯಶಸ್ವಿ!

ಐಪಿಎಲ್ 2020 ಮತ್ತು 2024ರ ನಡುವೆ ಒಟ್ಟು 9 ವಿಭಿನ್ನ ತಂಡಗಳು ಪ್ಲೇಆಫ್​​ಗೆ ಅರ್ಹತೆ ಪಡೆದಿವೆ. ಈ ಪೈಕಿ 8 ತಂಡಗಳು ಎರಡೆರಡು ಬಾರಿ ಈ ಸಾಧನೆ ಮಾಡಿದ್ದರೆ, ಒಂದು ತಂಡವು ನಾಲ್ಕು ಸಲ ಅಗ್ರ-4ರಲ್ಲಿ ಸ್ಥಾನ ಪಡೆದಿದೆ.

ಐಪಿಎಲ್ 2025 ಮುಕ್ತಾಯದ ಹಂತ ತಲುಪಿದೆ. ಎರಡು ಪ್ಲೇಆಫ್ ರೇಸ್​​ನಿಂದ ಹೊರಬಿದ್ದಿವೆ. ಉಳಿದ 8 ತಂಡಗಳ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಆದರೆ ಕಳೆದ 5 ವರ್ಷಗಳಲ್ಲಿ (2020-2024) ಅತಿ ಹೆಚ್ಚು ಸಲ ಪ್ಲೇಆಫ್ ತಲುಪಿದ ತಂಡಗಳು ಯಾವುವು? ಅದರಲ್ಲೂ ಈ ತಂಡದ ಸಾಧನೆ ನಿಮಗೆ ಅಚ್ಚರಿ ಮೂಡಿಸಬಹುದು.
icon

(1 / 6)

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕಳೆದ ಐದು ಋತುಗಳಲ್ಲಿ 2 ಬಾರಿ ಮಾತ್ರ ನಾಕೌಟ್ ತಲುಪುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ತಂಡವು 2020ರಲ್ಲಿ ಕೊನೆಯ ಬಾರಿಗೆ ಪ್ರಶಸ್ತಿಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.
icon

(2 / 6)

(REUTERS)

2008 ಮತ್ತು 2019ರ ನಡುವೆ ಸತತ 10 ವರ್ಷಗಳ ಕಾಲ (2 ವರ್ಷಗಳ ನಿಷೇಧವನ್ನು ಹೊರತುಪಡಿಸಿ) ನಾಕೌಟ್ ತಲುಪಿದ್ದ ಸಿಎಸ್​​ಕೆ, 2020 ರಿಂದ ಎರಡು ಬಾರಿ ಮಾತ್ರ ಪ್ಲೇಆಫ್ ತಲುಪಿದೆ. ಆದರೆ ಈ ಎರಡು ಬಾರಿಯೂ ತಂಡ ಪ್ರಶಸ್ತಿಯನ್ನು ಗೆದ್ದಿದೆ.
icon

(3 / 6)

(PTI)

2022ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಎರಡೆರಡು ಬಾರಿ ಪ್ಲೇಆಫ್ ತಲುಪಿವೆ. ಜಿಟಿ ತನ್ನ ಮೊದಲ ಋತುವಿನಲ್ಲಿಯೇ ಟ್ರೋಫಿಯನ್ನು ಗೆದ್ದುಕೊಂಡಿತ್ತು. ತಂಡವು 2025ರಲ್ಲೂ ಪ್ಲೇಆಫ್ ಕಡೆಗೆ ಸಾಗುತ್ತಿದೆ. ಆದರೆ ಈ ಋತುವಿನಲ್ಲಿ ಲಕ್ನೋದ ಸ್ಥಿತಿ ಸ್ವಲ್ಪ ದುರ್ಬಲವಾಗಿದೆ.
icon

(4 / 6)

ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಕಳೆದ 5 ಋತುಗಳಲ್ಲಿ 2 ಬಾರಿ ಮಾತ್ರ ಪ್ಲೇಆಫ್ ತಲುಪಿದೆ. ಅವರಲ್ಲದೆ, ಡೆಲ್ಲಿ ಕ್ಯಾಪಿಟಲ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ಕೂಡ ಇದೇ ಸಾಧನೆ ಮಾಡಿದೆ.
icon

(5 / 6)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಮ್ಮೆಯೂ ಟ್ರೋಫಿಯನ್ನು ಗೆದ್ದಿಲ್ಲದಿರಬಹುದು, ಆದರೆ ಕಳೆದ 5 ಐಪಿಎಲ್ ಋತುಗಳಲ್ಲಿ ತಂಡವು ಗರಿಷ್ಠ 4 ಬಾರಿ ಪ್ಲೇಆಫ್ ತಲುಪಿದೆ. 2023ರಲ್ಲಿ, ತಂಡವು 6ನೇ ಸ್ಥಾನದಲ್ಲಿತ್ತು. ಉಳಿದ ನಾಲ್ಕು ಸೀಸನ್​ಗಳಲ್ಲಿ ಅಗ್ರ-4ರಲ್ಲಿ ಸ್ಥಾನ ಪಡೆದಿತ್ತು. ಐಪಿಎಲ್ 2025 ರಲ್ಲೂ ಆರ್‌ಸಿಬಿ ಪ್ಲೇಆಫ್ ತಲುಪುವ ಎಲ್ಲಾ ಸಾಧ್ಯತೆಗಳಿವೆ.
icon

(6 / 6)

(IPL)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು