ಐಪಿಎಲ್ 2025: ಇದುವರೆಗೆ ಹೆಚ್ಚು ಸಿಕ್ಸರ್ ಸಿಡಿಸಿದ ತಂಡಗಳಿವು; ಟೂರ್ನಿಯಿಂದ ಹೊರಬಿದ್ದ ತಂಡ ನಂಬರ್ 1
ಐಪಿಎಲ್ 2025ರ ಆವೃತ್ತಿಯಲ್ಲಿ ಈವರೆಗೆ 55 ಪಂದ್ಯಗಳು ನಡೆದಿವೆ. ಈವರೆಗಿನ ಅಂಕಿ-ಅಂಶಗಳು ಕುತೂಹಲಕಾರಿಯಾಗಿವೆ. ಈ ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ತಂಡವು ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ. ಅದುವೇ ರಾಜಸ್ಥಾನ್ ರಾಯಲ್ಸ್. ಟೂರ್ನಿಯಲ್ಲಿ ಈವರೆಗೆ ಅತಿ ಹೆಚ್ಚು ಸಿಕ್ಸ್ ಸಿಡಿಸಿದ ತಂಡಗಳ ಪಟ್ಟಿ ಇಲ್ಲಿದೆ.
(1 / 11)
ಐಪಿಎಲ್ 2025ರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ತಂಡಗಳು: ಐಪಿಎಲ್ 2025ರಲ್ಲಿ 55ನೇ ಪಂದ್ಯದವರೆಗಿನ ಅಂಕಿ-ಅಂಶಗಳನ್ನು ನೋಡಿದರೆ, ಈ ಋತುವಿನಲ್ಲಿ ಹೆಚ್ಚು ಸಿಕ್ಸರ್‌ಗಳನ್ನು ಹೊಡೆದ ತಂಡವು ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಗುಳಿದಿದೆ ಎಂಬುದೇ ಅಚ್ಚರಿಯ ಅಂಶ. ಟೂರ್ನಿಯಲ್ಲಿ ಈವರೆಗೆ ಮೂರು ತಂಡಗಳು 100ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಹೊಡೆದಿವೆ. ಯಾವ ತಂಡ ಎಷ್ಟು ಸಿಕ್ಸರ್‌ಗಳನ್ನು ಹೊಡೆದಿದೆ ಎಂಬುದನ್ನು ತಿಳಿಯೋಣ.
(2 / 11)
ರಾಜಸ್ಥಾನ್ ರಾಯಲ್ಸ್ ನಂ.1: ರಾಜಸ್ಥಾನ ರಾಯಲ್ಸ್ ಅತಿ ಹೆಚ್ಚು ಸಿಕ್ಸರ್‌ಗಳನ್ನು ಹೊಡೆದಿದೆ. ಆರ್‌ಆರ್ ಇದುವರೆಗೆ ಆಡಿದ 12 ಪಂದ್ಯಗಳಲ್ಲಿ 123 ಸಿಕ್ಸರ್‌ಗಳನ್ನು ಬಾರಿಸಿದೆ.
(Hindustan Times)(3 / 11)
ಪಂಜಾಬ್ ಎರಡನೇ ಸ್ಥಾನ: ಐಪಿಎಲ್ 18ನೇ ಸೀಸನ್‌ನಲ್ಲಿ ಇದುವರೆಗೆ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ ಎರಡನೇ ಸ್ಥಾನದಲ್ಲಿದೆ. ಪಿಬಿಕೆಎಸ್ ಆಡಿದ 11 ಪಂದ್ಯಗಳಲ್ಲಿ 114 ಸಿಕ್ಸರ್‌ಗಳನ್ನು ಬಾರಿಸಿದೆ.
(Surjeet Yadav)(4 / 11)
ಎಲ್ಎಸ್‌ಜಿ 3ನೇ ಸ್ಥಾನ: ಈ ಋತುವಿನಲ್ಲಿ ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 111 ಸಿಕ್ಸರ್‌ಗಳನ್ನು ಬಾರಿಸಿರುವ ಲಕ್ನೋ ಸೂಪರ್ ಜೈಂಟ್ಸ್ ಅಗ್ರ 3ರಲ್ಲಿದೆ.
(Surjeet Yadav)(5 / 11)
ಆರ್‌ಸಿಬಿ 4ನೇ ಸ್ಥಾನ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪಾಯಿಂಟ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಸಿಕ್ಸರ್‌ಗಳನ್ನು ಹೊಡೆಯುವ ವಿಷಯದಲ್ಲಿ ತಂಡ ನಾಲ್ಕನೇ ಸ್ಥಾನದಲ್ಲಿದೆ. ಆರ್‌ಸಿಬಿ ಇದುವರೆಗೆ 96 ಸಿಕ್ಸರ್‌ಗಳನ್ನು ಬಾರಿಸಿದೆ.
(PTI)(6 / 11)
ಎಂಐ ಟಾಪ್ 5: ಮುಂಬೈ ಇಂಡಿಯನ್ಸ್ ಐಪಿಎಲ್ 2025ರಲ್ಲಿ ಈವರೆಗೆ ಆಡಿದ 11 ಪಂದ್ಯಗಳಲ್ಲಿ 95 ಸಿಕ್ಸರ್‌ಗಳನ್ನು ಬಾರಿಸಿದೆ.
(HT_PRINT AFP)(7 / 11)
ಗುಜರಾತ್ ಟೈಟಾನ್ಸ್ 6ನೇ ಸ್ಥಾನ: ಗುಜರಾತ್ ತಂಡ ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇದುವರೆಗೆ 10 ಪಂದ್ಯಗಳಲ್ಲಿ 85 ಸಿಕ್ಸರ್‌ಗಳನ್ನು ಬಾರಿಸಿದೆ.
(Surjeet Yadav)(8 / 11)
7ನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್: ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಡಿಸಿ ಬ್ಯಾಟರ್‌ಗಳು 11 ಪಂದ್ಯಗಳಲ್ಲಿ ಒಟ್ಟು 85 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
(AFP)(9 / 11)
ಕೆಕೆಆರ್ 8ನೇ ಸ್ಥಾನ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಹಲವು ಪವರ್ ಹಿಟ್ಟರ್‌ಗಳಿದ್ದರೂ. ಇಲ್ಲಿಯವರೆಗೆ ಕೆಕೆಆರ್ ಆಡಿದ 11 ಪಂದ್ಯಗಳಲ್ಲಿ ಕೇವಲ 81 ಸಿಕ್ಸರ್‌ಗಳನ್ನು ಮಾತ್ರ ಬಾರಿಸಿದೆ.
(PTI)(10 / 11)
ಎಸ್ಆರ್‌ಎಚ್: ಸನ್‌ರೈಸರ್ಸ್ ಹೈದರಾಬಾದ್ ತಂಡವು ಇತರ ತಂಡಗಳಿಗಿಂತ ಹೆಚ್ಚಿನ ಪವರ್ ಹಿಟ್ಟರ್‌ಗಳನ್ನು ಹೊಂದಿದೆ, ಆದರೆ ತಂಡವು 11 ಪಂದ್ಯಗಳಲ್ಲಿ 10 ಇನ್ನಿಂಗ್ಸ್‌ಗಳಲ್ಲಿ ಕೇವಲ 77 ಸಿಕ್ಸರ್‌ಗಳನ್ನು ಮಾತ್ರ ಬಾರಿಸಲು ಸಾಧ್ಯವಾಗಿದೆ.
(Hindustan Times)ಇತರ ಗ್ಯಾಲರಿಗಳು