ಐಪಿಎಲ್‌ನಲ್ಲಿ ಇಂದು ಡಬಲ್ ಮನರಂಜನೆ; ಶನಿವಾರದ 2 ಪಂದ್ಯಗಳ 10 ಸ್ವಾರಸ್ಯಕರ ಅಂಶಗಳು
- ಐಪಿಎಲ್ 18ನೇ ಆವೃತ್ತಿಯಲ್ಲಿ ಇಂದು (ಏಪ್ರಿಲ್ 12, ಶನಿವಾರ) ಎರಡು ಪಂದ್ಯಗಳು ನಡೆಯುತ್ತಿವೆ. ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ಗೆ ಪಂಜಾಬ್ ಕಿಂಗ್ಸ್ ತಂಡ ಸವಾಲು ಹಾಕುತ್ತಿದೆ. ಇಂದಿನ ಪಂದ್ಯಗಳ 10 ಪ್ರಮುಖ ಅಂಶಗಳನ್ನು ನೋಡೋಣ.
- ಐಪಿಎಲ್ 18ನೇ ಆವೃತ್ತಿಯಲ್ಲಿ ಇಂದು (ಏಪ್ರಿಲ್ 12, ಶನಿವಾರ) ಎರಡು ಪಂದ್ಯಗಳು ನಡೆಯುತ್ತಿವೆ. ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ಗೆ ಪಂಜಾಬ್ ಕಿಂಗ್ಸ್ ತಂಡ ಸವಾಲು ಹಾಕುತ್ತಿದೆ. ಇಂದಿನ ಪಂದ್ಯಗಳ 10 ಪ್ರಮುಖ ಅಂಶಗಳನ್ನು ನೋಡೋಣ.
(1 / 10)
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವೆ ಈವರೆಗೆ ನಡೆದ ಪಂದ್ಯಗಳ ಲೆಕ್ಕಾಚಾರದಲ್ಲಿ ಜಿಟಿ ಮೇಲುಗೈ ಸಾಧಿಸಿದೆ. ಎರಡೂ ತಂಡಗಳು ಉತ್ತಮ ಫಾರ್ಮ್‌ನಲ್ಲಿವೆ. ನಿಧಾನಗತಿಯ ಆರಂಭದ ನಂತರ ಜಿಟಿ ಸತತ 4 ಪಂದ್ಯಗಳನ್ನು ಗೆದ್ದಿದೆ. ಅತ್ತ ಎಲ್‌ಎಸ್‌ಜಿ ಕೂಡ ಸತತ 2 ಗೆಲುವುಗಳೊಂದಿಗೆ ಫಾರ್ಮ್‌ಗೆ ಮರಳಿದೆ. ಇದೀಗ ತವರಿನಲ್ಲಿ ಲಕ್ನೋ ಅಬ್ಬರಿಸುವ ನಿರೀಕ್ಷೆಯಲ್ಲಿದೆ.
(AFP)(2 / 10)
ಉಭಯ ತಂಡಗಳು ಈವರೆಗೆ ಐದು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಅದರಲ್ಲಿ ಜಿಟಿ ನಾಲ್ಕರಲ್ಲಿ ಗೆದ್ದಿದೆ. ಈ ತಂಡಗಳು ಕಳೆದ ಬಾರಿ ಲಕ್ನೋದಲ್ಲಿ ಮುಖಾಮುಖಿಯಾದಾಗ, ಎಲ್‌ಎಸ್‌ಜಿ ಗೆದ್ದಿತ್ತು.
(3 / 10)
ಲಕ್ನೋ ಪರ ನಿಕೋಲಸ್ ಪೂರನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಈವರೆಗೆ ಆಡಿದ ಐದು ಇನ್ನಿಂಗ್ಸ್‌ಗಳಲ್ಲಿ 288 ರನ್‌ಗಳೊಂದಿಗೆ ಪಂದ್ಯಾವಳಿಯ ಟಾಪ್ ಸ್ಕೋರರ್ ಆಗಿದ್ದಾರೆ. 225ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ ಇಲ್ಲಿಯವರೆಗೆ 24 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
(Surjeet Yadav)(4 / 10)
ಎರಡೂ ತಂಡಗಳು ಅಗ್ರ ಕ್ರಮಾಂಕದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಎಲ್‌ಎಸ್‌ಜಿಯ ಅಗ್ರ ಮೂವರು ಬ್ಯಾಟರ್‌ಗಳಾದ ಮಿಚೆಲ್ ಮಾರ್ಷ್ (265 ರನ್), ಐಡೆನ್ ಮಾರ್ಕ್ರಾಮ್ (144 ರನ್) ಮತ್ತು ಪೂರನ್ (288 ರನ್) ಅಬ್ಬರಿಸಿದ್ದಾರೆ. ಅತ್ತ ಜಿಟಿ ಅಗ್ರ ಕ್ರಮಾಂಕದಲ್ಲಿ, ನಾಯಕ ಶುಭ್ಮನ್ ಗಿಲ್ (148 ರನ್), ಸಾಯಿ ಸುದರ್ಶನ್ (273 ರನ್) ಮತ್ತು ಜೋಸ್ ಬಟ್ಲರ್ (202 ರನ್) ಗಳಿಸಿದ್ದಾರೆ.
(AFP)(5 / 10)
ಜಿಟಿ ಪರ ಮೊಹಮ್ಮದ್ ಸಿರಾಜ್ ಪವರ್‌ಪ್ಲೇನಲ್ಲಿ ಅತ್ಯಂತ ಅಪಾಯಕಾರಿ ಬೌಲರ್ ಎನಿಸಿಕೊಂಡಿದ್ದಾರೆ. ಇದುವರೆಗೆ ಐದು ಇನ್ನಿಂಗ್ಸ್‌ಗಳಲ್ಲಿ 7.7ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿ 10 ವಿಕೆಟ್ ಪಡೆದಿದ್ದಾರೆ. ಪ್ರಸಕ್ತ ಋತುವಿನಲ್ಲಿ ಪವರ್‌ಪ್ಲೇ ಓವರ್‌ಗಳಲ್ಲಿ ಅವರು ಪಡೆದ ಏಳು ವಿಕೆಟ್‌ಗಳು ಇದುವರೆಗಿನ ಅತಿ ಹೆಚ್ಚು. ಸತತ ಎರಡು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಆರ್‌ಸಿಬಿ ಮಾಜಿ ಬೌಲರ್, ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
(Surjeet Yadav/ANI)(6 / 10)
ಪಂಜಾಬ್ ತಂಡವು ಈ ಬಾರಿ ಭರ್ಜರಿ ಫಾರ್ಮ್‌ನಲ್ಲಿದೆ. 3 ಪಂದ್ಯಗಳನ್ನು ಗೆದ್ದು ಸದ್ಯ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಅತ್ತ ಎಸ್‌ಆರ್‌ಎಚ್ ತಂಡ ಹಲ್ಲಿಲ್ಲದ ಹುಲಿಯಂತಿದೆ. ಬಲಿಷ್ಠ ತಂಡವೇ ಇದ್ದರೂ ಗೆಲುವು ಒಲಿಯುತ್ತಿಲ್ಲ. ತಂಡವು ಮೇಲಿಂದ ಮೇಲೆ ನಾಲ್ಕು ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
(Surjeet)(7 / 10)
ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಸನ್‌ರೈಸರ್ಸ್ ತಂಡದ ಶಕ್ತಿ. ಆದರೆ ಈ ಬಾರಿ ಅಗ್ರಕ್ರಮಾಂಕ ಸಿಡಿಯುತ್ತಿಲ್ಲ. ಟ್ರಾವಿಸ್ ಹೆಡ್ ಕೆಲವು ಪಂದ್ಯ ಬಿಟ್ಟರೆ ಆಮೇಲೆ ಅಬ್ಬರಿಸಿಲ್ಲ. ಅಭಿಷೇಕ್ ಶರ್ಮಾ ಎಲ್ಲಾ ಪಂದ್ಯಗಳಲ್ಲೂ ವಿಫಲವಾಗಿದ್ದಾರೆ. ಆರಂಭಿಕ ಪಂದ್ಯದಲ್ಲಿ ಶತಕ ಸಿಡಿಸಿದ್ದ ಇಶಾನ್ ಕಿಶನ್, ಆ ನಂತರ ಬ್ಯಾಟಿಂಗ್ ಮರೆತಿದ್ದಾರೆ. ಹೀಗಾಗಿ ತಂಡ ಬ್ಯಾಟಿಂಗ್ ಫಾರ್ಮ್‌ಗೆ ಮರಳಬೇಕಿದೆ.
(PTI)(8 / 10)
ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಈವರೆಗೆ 23 ಪಂದ್ಯಗಳನ್ನು ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಹೈದರಾಬಾದ್ 16 ಪಂದ್ಯಗಳಲ್ಲಿ ಗೆದ್ದರೆ, ಪಂಜಾಬ್ ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
(PTI)(9 / 10)
ಪಂಜಾಬ್ ತಂಡಕ್ಕೆ ಬ್ಯಾಟಿಂಗ್ ದೊಡ್ಡ ಶಕ್ತಿ. ಒಬ್ಬರಲ್ಲದಿದ್ದರೆ ಇನ್ನೊಬ್ಬರು ಅಬ್ಬರಿಸಿ ಆಸರೆಯಾಗುತ್ತಿದ್ದಾರೆ. ವಿಕೆಟ್‌ಗಳು ಪತನವಾಗುತ್ತಿದ್ದರೂ, ರನ್ ಹರಿವು ನಿಲ್ಲುತ್ತಿಲ್ಲ. ಅನ್‌ಕ್ಯಾಪ್ಡ್ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ಕೊನೆಯ ಪಂದ್ಯದಲ್ಲಿ ಅಬ್ಬರಿಸಿ ಶತಕ ಸಿಡಿಸಿದ್ದರು. ಸಿಎಸ್‌ಕೆ ತಂಡದ ವಿರುದ್ಧ ಒಂದೆಡೆ ವಿಕೆಟ್‌ಗಳು ಪತನವಾದರೂ, ಮತ್ತೊಂದೆಡೆ ರನ್ ಬರುತ್ತಲೇ ಇತ್ತು. ಇದಕ್ಕೆ ಸರಿಯಾಗಿ ಎಸ್‌ಆರ್‌ಎಚ್ ಗೆಮ್‌ಪ್ಲಾನ್ ರೂಪಿಸಬೇಕಿದೆ.
(PTI)ಇತರ ಗ್ಯಾಲರಿಗಳು