ಐಪಿಎಲ್ 2024ರಲ್ಲಿ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟ ಟಾಪ್ 10 ಬ್ಯಾಟರ್‌ಗಳು; ಕಿಂಗ್ ಕೊಹ್ಲಿಗೆ ಅಗ್ರಪಟ್ಟ
- ಐಪಿಎಲ್ 2024ರಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 10 ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ. ಪಟ್ಟಿಯಲ್ಲಿ ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದೇ ವೇಳೆ ಅನ್‌ಕ್ಯಾಪ್ಡ್ ಆಟಗಾರರು ಕೂಡಾ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
- ಐಪಿಎಲ್ 2024ರಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 10 ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ. ಪಟ್ಟಿಯಲ್ಲಿ ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದೇ ವೇಳೆ ಅನ್‌ಕ್ಯಾಪ್ಡ್ ಆಟಗಾರರು ಕೂಡಾ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
(1 / 10)
ಐಪಿಎಲ್ 2024ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಇದರೊಂದಿಗೆ ಅವರು ಐಪಿಎಲ್ ಇತಿಹಾಸದಲ್ಲಿ ಎರಡನೇ ಬಾರಿಗೆ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. ಆರ್‌ಸಿಬಿ ಆಟಗಾರ ಆಡಿದ 15 ಪಂದ್ಯಗಳಲ್ಲಿ 741 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 5 ಅರ್ಧಶತಕಗಳನ್ನು ಸಿಡಿಸಿದ್ದಾರೆ.(AFP)
(2 / 10)
ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಋತುರಾಜ್ ಗಾಯಕ್ವಾಡ್ ಎರಡನೇ ಸ್ಥಾನದಲ್ಲಿದ್ದಾರೆ. ಚೆನ್ನೈ ನಾಯಕ 14 ಪಂದ್ಯಗಳಲ್ಲಿ 583 ರನ್ ಗಳಿಸಿದ್ದಾರೆ. ಅವರು 1 ಶತಕ ಮತ್ತು 4 ಅರ್ಧಶತಕ ಗಳಿಸಿದ್ದಾರೆ.(AFP)
(3 / 10)
ರಿಯಾನ್ ಪರಾಗ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ಯುವ ಆಟಗಾರ 14 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ 573 ರನ್ ಗಳಿಸಿದ್ದಾರೆ. ಅವರು 4 ಅರ್ಧಶತಕಗಳನ್ನು ಸಿಡಿಸಿದ್ದಾರೆ.(PTI)
(4 / 10)
ಟ್ರಾವಿಸ್ ಹೆಡ್ ಐಪಿಎಲ್ 2024ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಎಸ್‌ಆರ್‌ಎಚ್ ಆರಂಭಿಕ ಬ್ಯಾಟರ್ 567 ರನ್ ಗಳಿಸಿದ್ದಾರೆ. ಅವರು 1 ಶತಕ ಮತ್ತು 4 ಅರ್ಧಶತಕಗಳನ್ನು ಗಳಿಸಿದ್ದಾರೆ.(AFP)
(5 / 10)
ಸಂಜು ಸ್ಯಾಮ್ಸನ್ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ರಾಜಸ್ಥಾನ್ ನಾಯಕ 15 ಇನ್ನಿಂಗ್ಸ್‌ಗಳಲ್ಲಿ 531 ರನ್ ಗಳಿಸಿದ್ದಾರೆ. ಅವರು 5 ಅರ್ಧಶತಕ ಸಿಡಿಸಿದ್ದಾರೆ.(ANI)
(6 / 10)
ಸಾಯಿ ಸುದರ್ಶನ್ ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದ ಯುವ ಬ್ಯಾಟ್ಸ್ಮನ್ 12 ಇನ್ನಿಂಗ್ಸ್ಗಳಲ್ಲಿ 527 ರನ್ ಗಳಿಸಿದ್ದಾರೆ. ಅವರು 1 ಶತಕ ಮತ್ತು 2 ಅರ್ಧಶತಕಗಳನ್ನು ಗಳಿಸಿದರು. ಫೋಟೋ: AFP.
(7 / 10)
ಕೆಎಲ್ ರಾಹುಲ್ 7ನೇ ಸ್ಥಾನದಲ್ಲಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ನಾಯಕ 14 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ 520 ರನ್ ಗಳಿಸಿದ್ದಾರೆ. ಅವರು 4 ಅರ್ಧಶತಕ ಗಳಿಸಿದ್ದಾರೆ.
(8 / 10)
ಅತ್ಯುತ್ತಮ ಬ್ಯಾಟರ್‌ಗಳ ಪಟ್ಟಿಯಲ್ಲಿ ನಿಕೋಲಸ್ ಪೂರನ್ ಎಂಟನೇ ಸ್ಥಾನ ಪಡೆದಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ದೈತ್ಯ 14 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ 499 ರನ್ ಗಳಿಸಿದ್ದಾರೆ. ಅವರು 3 ಅರ್ಧಶತಕ ಗಳಿಸಿದ್ದಾರೆ.(AFP)
(9 / 10)
ಐಪಿಎಲ್ 2024ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸುನಿಲ್ ನರೈನ್ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಐಪಿಎಲ್ ಚಾಂಪಿಯನ್ಸ್ ನೈಟ್ ರೈಡರ್ಸ್ ತಂಡದಿಂದ ಟಾಪ್ 10ರಲ್ಲಿ ಸ್ಥಾನ ಪಡೆದ ಏಕೈಕ ಆಟಗಾರ ಇವರು. ನರೈನ್ 14 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ 488 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 3 ಅರ್ಧಶತಕ ಸೇರಿವೆ.(PTI)
ಇತರ ಗ್ಯಾಲರಿಗಳು