ಕಪಾಳ ಮೋಕ್ಷ, ಫಿಕ್ಸಿಂಗ್​ನಿಂದ ಹಿಡಿದು ಸಿಎಸ್​ಕೆ ಬ್ಯಾನ್​ ಆಗುವ ತನಕ; ಐಪಿಎಲ್​ನ 10 ದೊಡ್ಡ ವಿವಾದಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಪಾಳ ಮೋಕ್ಷ, ಫಿಕ್ಸಿಂಗ್​ನಿಂದ ಹಿಡಿದು ಸಿಎಸ್​ಕೆ ಬ್ಯಾನ್​ ಆಗುವ ತನಕ; ಐಪಿಎಲ್​ನ 10 ದೊಡ್ಡ ವಿವಾದಗಳು

ಕಪಾಳ ಮೋಕ್ಷ, ಫಿಕ್ಸಿಂಗ್​ನಿಂದ ಹಿಡಿದು ಸಿಎಸ್​ಕೆ ಬ್ಯಾನ್​ ಆಗುವ ತನಕ; ಐಪಿಎಲ್​ನ 10 ದೊಡ್ಡ ವಿವಾದಗಳು

  • ಇಂಡಿಯನ್ ಪ್ರೀಮಿಯರ್ ಲೀಗ್ 18ನೇ ಆವೃತ್ತಿ​​ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಐಪಿಎಲ್ ಹೊಸ ಸೀಸನ್​ಗೂ ಮುನ್ನ ಮೊದಲು, ಟಾಪ್ 10 ವಿವಾದಗಳ ಬಗ್ಗೆ ತಿಳಿದುಕೊಳ್ಳೋಣ.

ಸ್ಲ್ಯಾಪ್‌ಗೇಟ್ ಹಗರಣ (2008): ಈ ಘಟನೆ ಐಪಿಎಲ್‌ನ ಮೊದಲ ಸೀಸನ್‌ನಲ್ಲಿ ಕಂಡುಬಂತು. ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ಇಲೆವೆನ್ ನಡುವಿನ ಪಂದ್ಯದ ನಂತರ ಶ್ರೀಶಾಂತ್ ಅತ್ತಿದ್ದರು. ಇಬ್ಬರ ನಡುವಿನ ವಾಗ್ವಾದದಲ್ಲಿ ಶ್ರೀಶಾಂತ್​ಗೆ ಹರ್ಭಜನ್ ಸಿಂಗ್ ಕಪಾಳಮೋಕ್ಷ ಮಾಡಿದ್ದರು. ಹೀಗಾಗಿ, ಹರ್ಭಜನ್ ಅವರನ್ನು ಆ ವರ್ಷದ ಸಂಪೂರ್ಣ ಆವೃತ್ತಿಗೆ ಸಸ್ಪೆಂಡ್ ಮಾಡಲಾಗಿತ್ತು. ಇದು ಐಪಿಎಲ್‌ನ ಅತ್ಯಂತ ವಿವಾದಾತ್ಮಕ ಘಟನೆಗಳಲ್ಲಿ ಒಂದಾಗಿದೆ.
icon

(1 / 10)

ಲಲಿತ್ ಮೋದಿ ಅಮಾನತು (2010): ಐಪಿಎಲ್‌ ಸ್ಥಾಪನೆಯ ಲಲಿತ್ ಮೋದಿ ಅವರೇ ಕಾರಣ. ಅದರ ಯಶಸ್ಸು ಸಾಕಷ್ಟು ಶ್ರಮಿಸಿದ್ದರು. ಐಪಿಎಲ್​​ ಫಂಡ್​​ಗಳ ರವಾನೆ, ಅಸಮ್ಮತವಾಗಿ ಐಪಿಎಲ್​ ಗುತ್ತಿಗೆ ನೀಡುವುದು ಸೇರಿದಂತೆ ಹಲವು ಹಣಕಾಸು ಅಕ್ರಮಗಳನ್ನು ಎಸಗಿದ ಆರೋಪ ಹೊಂದಿದ್ದಾರೆ. ನಂತರ, ಲಲಿತ್ ಮೋದಿ ಮೇಲೆ ಜೀವಮಾನ ನಿಷೇಧ ಹೇರಲಾಯಿತು. ಪ್ರಸ್ತುತ ಲಲಿತ್ ಮೋದಿ ಭಾರತದಿಂದ ಪರಾರಿಯಾಗಿದ್ದಾರೆ.
icon

(2 / 10)

ಸ್ಪಾಟ್ ಫಿಕ್ಸಿಂಗ್ ಬಿರುಗಾಳಿ (2013): 2013ರಲ್ಲಿ ಐಪಿಎಲ್​ಗೆ ಸ್ಪಾಟ್ ಫಿಕ್ಸಿಂಗ್ ಬಿರುಗಾಳಿ ಅಪ್ಪಳಿಸಿತು. ಈ ಪ್ರಕರಣದಲ್ಲಿ ಶ್ರೀಶಾಂತ್, ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚವಾಣ್ ಆರೋಪಿಗಳಾಗಿದ್ದರು. ಇದರಲ್ಲಿ ಬೆಟ್ಟಿಂಗ್ ವಿಷಯಗಳು ಸಹ ಬೆಳಕಿಗೆ ಬಂದವು. ಇದಾದ ನಂತರ, ಆರೋಪಿ ಆಟಗಾರರನ್ನು ಜೀವಮಾನವಿಡೀ ನಿಷೇಧಿಸಲಾಯಿತು. ಇದಲ್ಲದೆ, ಲೀಗ್‌ಗೆ ಸಂಬಂಧಿಸಿದ ನಿಯಮಗಳನ್ನು ಸಹ ಕಠಿಣಗೊಳಿಸಲಾಯಿತು.
icon

(3 / 10)

ಸಿಎಸ್‌ಕೆ ಮತ್ತು ರಾಜಸ್ಥಾನ ತಂಡಗಳ ಅಮಾನತು (2015): ಇದು ಐಪಿಎಲ್ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳನ್ನು ಐಪಿಎಲ್‌ನಿಂದ 2 ವರ್ಷಗಳ ಕಾಲ ಅಮಾನತುಗೊಳಿಸಲಾಗಿತ್ತು. ಫಿಕ್ಸಿಂಗ್ ಮಾಡಿಕೊಂಡ ಮತ್ತು ಬೆಟ್ಟಿಂಗ್ ಆರೋಪದ ತನಿಖೆಯ ನಂತರ ಅಮಾನತುಗೊಳಿಸಲಾಗಿದೆ. ಇದು ಅಭಿಮಾನಿಗಳು ಮತ್ತು ಫ್ರಾಂಚೈಸಿ ಇಬ್ಬರಿಗೂ ದೊಡ್ಡ ಆಘಾತವಾಗಿತ್ತು.
icon

(4 / 10)

ಶಾರುಖ್ ಖಾನ್ ನಿಷೇಧ (2012): ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸಹ-ಮಾಲೀಕ ಶಾರುಖ್ ಖಾನ್ ಅವರಿಗೆ ಮುಂಬೈನ ವಾಂಖೆಡೆ ಕ್ರೀಡಾಂಗಣ ಪ್ರವೇಶಿಸುವುದನ್ನು ನಿಷೇಧಿಸಲಾಗಿತ್ತು. ಭದ್ರತಾ ಸಿಬ್ಬಂದಿಯೊಂದಿಗೆ ಶಾರುಖ್ ಜಗಳ ಮಾಡಿದ್ದ ಕಾರಣ 5 ವರ್ಷಗಳ ಕಾಲ ಈ ನಿಷೇಧ ಹೇರಲಾಗಿತ್ತು.  
icon

(5 / 10)

ಗೌತಮ್ ಗಂಭೀರ್ vs ವಿರಾಟ್ ಕೊಹ್ಲಿ: ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವಿನ ಹೋರಾಟವಿಲ್ಲದೆ ಐಪಿಎಲ್ ವಿವಾದಗಳ ಪಟ್ಟಿ ಅಪೂರ್ಣವಾಗುತ್ತದೆ. 2013ರಲ್ಲಿ ಕೆಕೆಆರ್ ಮತ್ತು ಆರ್‌ಸಿಬಿ ನಡುವಿನ ಪಂದ್ಯದ ಸಮಯದಲ್ಲಿ ಇವರಿಬ್ಬರ ನಡುವಿನ ಕಿತ್ತಾಟ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ನಂತರ 2024ರಲ್ಲಿ ಇದೇ ರೀತಿಯ ಘಟನೆ ಮತ್ತೆ ಸಂಭವಿಸಿತ್ತು. ಆಗ ಗಂಭೀರ್ ಲಕ್ನೋ ತಂಡದ ಕೋಚ್ ಆಗಿದ್ದರು ಮತ್ತು ಕೊಹ್ಲಿ ಆರ್‌ಸಿಬಿ ಪರ ಆಡುತ್ತಿದ್ದರು.
icon

(6 / 10)

ಸೌರವ್ ಗಂಗೂಲಿ ಅನ್​ಸೋಲ್ಡ್ (2011): 2011ರ ಐಪಿಎಲ್ ಹರಾಜಿನಲ್ಲಿ ತವರು ತಂಡ ಕೆಕೆಆರ್​ ಜೊತೆಗೆ ಯಾವ ತಂಡವೂ ಸೌರವ್ ಗಂಗೂಲಿ ಅವರನ್ನು ಖರೀದಿಸಿರಲಿಲ್ಲ. ಮಾರಾಟವಾಗದೆ ಉಳಿದ ಕಾರಣ ಅಭಿಮಾನಿಗಳ ಆಕ್ರೋಶ ಭುಗಿಲೆದ್ದಿತ್ತು. ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆದಿತ್ತು. ಶಾರುಖ್ ಖಾನ್ ಪ್ರತಿಕೃತಿಗಳನ್ನು ಸುಟ್ಟುಹಾಕಿದ್ದರು. ಸೌರವ್ ಇಲ್ಲದೆ ಕ್ರಿಕೆಟ್ ಇಲ್ಲ ಎಂದು ಬರೆದಿರುವ ಫಲಕಗಳನ್ನು ಹಿಡಿದಿದ್ದರು. ಭಾರತೀಯ ಕ್ರಿಕೆಟ್‌ನಲ್ಲಿ ಗಂಗೂಲಿ ಅವರ ಸ್ಥಾನವನ್ನು ಪರಿಗಣಿಸಿ, ಇದನ್ನು ತಪ್ಪು ಎಂದು ಪರಿಗಣಿಸಲಾಗಿತ್ತು. ನಂತರ ಗಂಗೂಲಿ ಪುಣೆ ವಾರಿಯರ್ಸ್‌ನ ಭಾಗವಾದರು. 
icon

(7 / 10)

ರವೀಂದ್ರ ಜಡೇಜಾ ನಿಷೇಧ (2010): 2010ರ ಐಪಿಎಲ್ ಋತುವಿನಲ್ಲಿ ಜಡೇಜಾ ಅವರನ್ನು ನಿಷೇಧಿಸಲಾಗಿತ್ತು. ರಾಜಸ್ಥಾನ ರಾಯಲ್ಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದರೂ ಜಡೇಜಾ ಬೇರೆ ಐಪಿಎಲ್ ತಂಡದೊಂದಿಗೆ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದನ್ನು ಐಪಿಎಲ್ ಒಪ್ಪಂದ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗಿತ್ತು.
icon

(8 / 10)

ಕೊಚ್ಚಿ ಟಸ್ಕರ್ಸ್ ಕೇರಳ ತಂಡದಿಂದ ಉಚ್ಚಾಟನೆ (2011): ಕೊಚ್ಚಿ ಟಸ್ಕರ್ಸ್ ಕೇರಳ ಫ್ರಾಂಚೈಸಿ ಕೇವಲ ಒಂದು ಋತುವಿಗೆ ಮಾತ್ರ ಐಪಿಎಲ್‌ನ ಭಾಗವಾಗಲು ಸಾಧ್ಯವಾಯಿತು. ಬಿಸಿಸಿಐ ಜೊತೆಗಿನ ಹಣಕಾಸಿನ ವಿವಾದದ ನಂತರ ಕೊಚ್ಚಿ ವಜಾಗೊಳಿಸಲಾಯಿತು. 
icon

(9 / 10)

ಐಪಿಎಲ್ ಸ್ಥಳ ಬದಲಾವಣೆ (2020): ಕೊರೊನಾ ಮಹಾಮಾರಿ ಅಪ್ಪಳಿಸಿದ ಹಿನ್ನೆಲೆ ಐಪಿಎಲ್ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಯಿತು. ಕೋವಿಡ್ ನಡುವೆಯೂ ಐಪಿಎಲ್ ನಡೆಸಿದ್ದ ಕಾರಣ ಬಿಸಿಸಿಐ ಟೀಕೆಗೆ ಗುರಿಯಾಗಿತ್ತು. ಪ್ರಪಂಚದಾದ್ಯಂತ ಜನರು ಕೋವಿಡ್‌ನಿಂದ ಸಾಯುತ್ತಿರುವಾಗ ಕ್ರಿಕೆಟ್ ಪಂದ್ಯವನ್ನು ನಡೆಸುವುದು ಸರಿಯೇ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು.
icon

(10 / 10)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು