ಐಪಿಎಲ್ 2025: 10 ಯುವ ತಾರೆಯರ ಮೇಲೆಯೇ ಎಲ್ಲರ ಕಣ್ಣು
- ಮಾರ್ಚ್ 22ರಿಂದ ಐಪಿಎಲ್ 2025 ಆರಂಭವಾಗಲಿದ್ದು, ಹೊಡಿಬಡಿ ಆಟದ ಕಾಯುವಿಕೆ ಮುಕ್ತಾಯಗೊಳ್ಳಲಿದೆ. ಆದರೆ ಈ ಐಪಿಎಲ್ನಲ್ಲಿ ನಿರೀಕ್ಷೆ ಹುಟ್ಟಿಸಿದ ಅನ್ಕ್ಯಾಪ್ಡ್ ಪ್ಲೇಯರ್ಗಳಲ್ಲಿ ಈ 10 ಆಟಗಾರರು ಮುಂಚೂಣಿಯಲ್ಲಿದ್ದಾರೆ.
- ಮಾರ್ಚ್ 22ರಿಂದ ಐಪಿಎಲ್ 2025 ಆರಂಭವಾಗಲಿದ್ದು, ಹೊಡಿಬಡಿ ಆಟದ ಕಾಯುವಿಕೆ ಮುಕ್ತಾಯಗೊಳ್ಳಲಿದೆ. ಆದರೆ ಈ ಐಪಿಎಲ್ನಲ್ಲಿ ನಿರೀಕ್ಷೆ ಹುಟ್ಟಿಸಿದ ಅನ್ಕ್ಯಾಪ್ಡ್ ಪ್ಲೇಯರ್ಗಳಲ್ಲಿ ಈ 10 ಆಟಗಾರರು ಮುಂಚೂಣಿಯಲ್ಲಿದ್ದಾರೆ.
(1 / 11)
ಪ್ರಸಕ್ತ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಪರ ಅಬ್ಬರಿಸಿದ್ದ ಅಶುತೋಷ್ ಶರ್ಮಾ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. 2024ರ ಆವೃತ್ತಿಯಲ್ಲಿ 11 ಪಂದ್ಯಗಳಲ್ಲಿ 27ರ ಸರಾಸರಿಯಲ್ಲಿ 167.26ರ ಸ್ಟ್ರೈಕ್ ರೇಟ್ನಲ್ಲಿ 189 ರನ್ ಗಳಿಸಿದ್ದರು. 6 ಅಥವಾ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಮಿಂಚಿದ್ದರು.
(2 / 11)
2020ರಿಂದ ಐಪಿಎಲ್ ಆಡುತ್ತಿರುವ ಅಬ್ದುಲ್ ಸಮದ್, ಇಲ್ಲಿಯ ತನಕ ಸನ್ರೈಸರ್ಸ್ ಹೈದರಾಬಾದ್ ಭಾಗವಾಗಿದ್ದರು. ಜಮ್ಮು ಮತ್ತು ಕಾಶ್ಮೀರ ಪರ ಆಡುವ ಸಮದ್ ಪ್ರಸ್ತುತ ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗವಾಗಿದ್ದಾರೆ. ಇವರು ಕ್ಲೀನ್ ಹಿಟ್ಗೆ ಹೆಸರುವಾಸಿ. ಇಷ್ಟು ವರ್ಷಗಳ ಐಪಿಎಲ್ ವೃತ್ತಿಜೀವನದಲ್ಲಿ ಆಡಿರುವ 50 ಪಂದ್ಯಗಳಲ್ಲಿ 577 ರನ್ ಗಳಿಸಿದ್ದಾರೆ.
(3 / 11)
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನ್ಶುಲ್ ಕಾಂಬೋಜ್ ಬಲಗೈ ವೇಗದ ಬೌಲರ್. ಈ ವರ್ಷ ರಣಜಿಯಲ್ಲಿ ಮಿಂಚಿದ್ದ ಅನ್ಶುಲ್ ಅವರು ಒಂದೇ ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ್ದರು. 2024ರ ಋತುವಿನಲ್ಲಿ ಮುಂಬೈ ತಂಡದ ಭಾಗವಾಗಿದ್ದರು. ಆದರೆ ಈ ವರ್ಷ ಹಳದಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
(4 / 11)
ವೈಭವ್ ಸೂರ್ಯವಂಶಿ ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿ. ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ವೈಭವ್ ಅವರನ್ನು 1.10 ಕೋಟಿ ರೂ.ಗೆ ಖರೀದಿಸಿತ್ತು. ಬಿಹಾರದ ನಿವಾಸಿಯಾದ ವೈಭವ್ ಕೇವಲ 13 ವರ್ಷ ವಯಸ್ಸಿ ಆಟಗಾರ. ಅಂತಾರಾಷ್ಟ್ರೀಯ ಯುವ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ್ದಾರೆ.
(5 / 11)
ಕಳೆದ ಋತುವಿನಲ್ಲೂ ಮುಂಬೈ ಇಂಡಿಯನ್ಸ್ ಪರವೇ ಕಾಣಿಸಿಕೊಂಡಿದ್ದ ನಮನ್ ಧೀರ್ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿ. 2024ರಲ್ಲಿ ನಮನ್ ಅವರ ಬೆಲೆ 20 ಲಕ್ಷ ಇತ್ತು. ಆದರೆ, ಈ ವರ್ಷ ಅವರ ಬೆಲೆ 5.5 ಕೋಟಿ ರೂಪಾಯಿ.
(6 / 11)
ಮುಂಬೈ ಇಂಡಿಯನ್ಸ್ ಪರ ಮಿಂಚಿದ್ದ ನೇಹಾಲ್ ವದೇರಾ ಈ ವರ್ಷ ಎಡಗೈ ಬ್ಯಾಟ್ಸ್‌ಮನ್ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿಯಲಿದ್ದಾರೆ. ಪಂಜಾಬ್ ಅವರನ್ನು 4.20 ಕೋಟಿ ರೂ.ಗೆ ಖರೀದಿಸಿದೆ.
(7 / 11)
ರಾಬಿನ್ ಮಿಂಜ್ ಎಡಗೈ ಆಕ್ರಮಣಕಾರಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್. ಕಳೆದ ವರ್ಷ ಐಪಿಎಲ್ ಆರಂಭವಾಗುವ ಮುನ್ನ ಅವರು ಅಪಘಾತದಲ್ಲಿ ಗಾಯಗೊಂಡಿದ್ದರು. ಈ ವರ್ಷ ಅವರು ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಾರೆ. ಅವರು ನೆಟ್ ಸೆಷನ್‌ನಲ್ಲಿ ಲಾಂಗ್ ಸಿಕ್ಸರ್‌ಗಳನ್ನು ಬಾರಿಸಿರುವ ವಿಡಿಯೋಗಳು ವೈರಲ್ ಆಗುತ್ತಿವೆ.
(8 / 11)
ಕಳೆದ ಋತುವಿನಲ್ಲಿ ತಮ್ಮ ಬ್ಯಾಟಿಂಗ್‌ನಲ್ಲಿ ಅದ್ಭುತಗಳನ್ನು ಸೃಷ್ಟಿಸಿದ್ದ ಅಂಗ್ಕ್ರಿಶ್ ರಘುವಂಶಿ, ಈ ಮೆಗಾ ಹರಾಜಿನಲ್ಲಿ ಮತ್ತೆ ಕೆಕೆಆರ್ ತಂಡವನ್ನು ಸೇರಿದ್ದಾರೆ.
(9 / 11)
ಬಲಗೈ ಆಲ್‌ರೌಂಡರ್ ಸೂರ್ಯಾಂಶ್ ಶೆಡ್ಜ್ ಪಂಜಾಬ್ ಕಿಂಗ್ಸ್ ಪರ ಆಡಲಿದ್ದಾರೆ. 22 ವರ್ಷದ ಈತ ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
(10 / 11)
ಸಮೀರ್ ರಿಜ್ವಿ ಕಳೆದ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದರು. ತಮ್ಮ ಐಪಿಎಲ್ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದರು. ಈ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸಮೀರ್ ರಿಜ್ವಿ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.
ಇತರ ಗ್ಯಾಲರಿಗಳು