ವಿಶ್ವ ಕ್ರಿಕೆಟ್​ನಲ್ಲಿ ಅತ್ಯಂತ ಯಶಸ್ವಿ ನಾಯಕರಿವರು; ಅಗ್ರ-10ರ ಪಟ್ಟಿಯಲ್ಲಿ ಭಾರತೀಯರಿಬ್ಬರಿಗೆ ಸ್ಥಾನ!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿಶ್ವ ಕ್ರಿಕೆಟ್​ನಲ್ಲಿ ಅತ್ಯಂತ ಯಶಸ್ವಿ ನಾಯಕರಿವರು; ಅಗ್ರ-10ರ ಪಟ್ಟಿಯಲ್ಲಿ ಭಾರತೀಯರಿಬ್ಬರಿಗೆ ಸ್ಥಾನ!

ವಿಶ್ವ ಕ್ರಿಕೆಟ್​ನಲ್ಲಿ ಅತ್ಯಂತ ಯಶಸ್ವಿ ನಾಯಕರಿವರು; ಅಗ್ರ-10ರ ಪಟ್ಟಿಯಲ್ಲಿ ಭಾರತೀಯರಿಬ್ಬರಿಗೆ ಸ್ಥಾನ!

  • Most successful captains in cricket: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ನಾಯಕನಾಗಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ಆಟಗಾರ ಯಾರು? ಅತ್ಯಂತ ಯಶಸ್ವಿ ನಾಯಕರ ಪಟ್ಟ ದಕ್ಕಿಸಿಕೊಂಡಿರುವ ವಿಶ್ವದ ಅಗ್ರ-10 ಕ್ರಿಕೆಟಿಗರ ಪಟ್ಟಿ ಇಂತಿದೆ ನೋಡಿ.

ಅಂತಾರಾಷ್ಟ್ರೀಯ ಕ್ರಿಕೆಟ್​ನ ಮೂರು ಸ್ವರೂಪಗಳಲ್ಲಿ (ಟೆಸ್ಟ್, ಏಕದಿನ, ಟಿ20ಐ) ತಮ್ಮ ತಂಡಗಳನ್ನು ಮುನ್ನಡೆಸಿ ಯಶಸ್ವಿಯಾಗಿರುವ ಅಗ್ರ-10 ಕ್ಯಾಪ್ಟನ್​​ಗಳ ಪಟ್ಟಿಯನ್ನು ಮುಂದೆ ನೋಡೋಣ. ಈ ಲಿಸ್ಟ್​ನಲ್ಲಿ ಭಾರತದ ಇಬ್ಬರು ಸ್ಥಾನ ಪಡೆದಿರುವುದು ವಿಶೇಷ.
icon

(1 / 11)

1. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ): 2002ರಿಂದ 2012ರ ತನಕ ಆಸ್ಟ್ರೇಲಿಯಾ ನಾಯಕನಾಗಿದ್ದ ರಿಕಿ ಪಾಂಟಿಂಗ್, ಒಟ್ಟು 324 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಈ ಪೈಕಿ ಗೆದ್ದಿರುವ ಪಂದ್ಯಗಳ ಸಂಖ್ಯೆ 220. ಸೋತ ಪಂದ್ಯಗಳು 77. ಇವರ ನಾಯಕತ್ವದಲ್ಲಿ ಆಸೀಸ್ 13 ಪಂದ್ಯ ಡ್ರಾ, 2 ಪಂದ್ಯ ಟೈ ಆಗಿದೆ. ಗೆಲುವಿನ ಶೇಕಡವಾರು 67.90. 
icon

(2 / 11)

(X)

2. ಎಂಎಸ್ ಧೋನಿ (ಭಾರತ): 2007 ರಿಂದ 2018ರ ತನಕ ಭಾರತ ತಂಡದ ಜವಾಬ್ದಾರಿ ಹೊಂದಿದ್ದ ಧೋನಿ, 332    ಪಂದ್ಯಗಳು ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಪಂದ್ಯಗಳಿಗೆ ನಾಯಕತ್ವ ವಹಿಸಿದ್ದ ಹೆಗ್ಗಳಿಕೆ ಹೊಂದಿದ್ದಾರೆ. ಇವರ ಸಾರಥ್ಯದಲ್ಲಿ ಭಾರತ 178 ಗೆಲುವು, 120 ಸೋಲು, 15 ಡ್ರಾ, 6 ಟೈ ಆಗಿದೆ. ಗೆಲುವಿನ ಶೇಕಡವಾರು 53.61
icon

(3 / 11)

(ICC)

3. ಗ್ರೇಮ್ ಸ್ಮಿತ್ (ಸೌತ್ ಆಫ್ರಿಕಾ): ಅತ್ಯಂತ ಯಶಸ್ವಿ ನಾಯಕರ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿರುವ ಸೌತ್ ಆಫ್ರಿಕಾದ ಗ್ರೇಮ್ ಸ್ಮಿತ್, 2003-2014ರ ತನಕ ತಂಡದ ಮುಂದಾಳತ್ವ ವಹಿಸಿದ್ದರು. ಇವರ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ, 286 ಪಂದ್ಯಗಳನ್ನಾಡಿದೆ. ಈ ಪೈಕಿ 163 ಗೆಲುವು, 89 ಸೋಲು, 27 ಡ್ರಾ, 1 ಪಂದ್ಯ ಟೈ ಆಗಿದೆ. ಗೆಲುವಿನ ಶೇಕಡವಾರು 56.99. 
icon

(4 / 11)

4. ಅಲನ್ ಬಾರ್ಡರ್​ (ಆಸ್ಟ್ರೇಲಿಯಾ): ಯಶಸ್ವಿ ನಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದ ಆಸೀಸ್​ನ ಎರಡನೇ ಆಟಗಾರ, ವಿಶ್ವದ ನಾಲ್ಕನೇ ಆಟಗಾರ ಅಲನ್ ಬಾರ್ಡರ್. ಇವರು 1984-1994ರಲ್ಲಿ ಆಸ್ಟ್ರೇಲಿಯಾ ಕ್ಯಾಪ್ಟನ್ ಆಗಿದ್ದು, 271 ಪಂದ್ಯಗಳಲ್ಲಿ ಮುನ್ನಡೆಸಿದ್ದರು. 139 ಗೆಲುವು, 89 ಸೋಲು, 38 ಡ್ರಾ, 2 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಟೈ ಆಗಿದೆ. ಗೆಲುವಿನ ಶೇಕಡವಾರು 51.29. 
icon

(5 / 11)

5. ವಿರಾಟ್ ಕೊಹ್ಲಿ (ಭಾರತ): ಭಾರತದ ಎರಡನೇ ಹಾಗೂ ವಿಶ್ವದ ಐದನೇ ಅತ್ಯಂತ ಯಶಸ್ವಿ ನಾಯಕ ವಿರಾಟ್ ಕೊಹ್ಲಿ. 2013-2022ರಲ್ಲಿ ಒಟ್ಟು 213 ಪಂದ್ಯಗಳಿಗೆ ಭಾರತ ತಂಡದ ಕ್ಯಾಪ್ಟನ್ ಆಗಿದ್ದರು. ಈ ಅವಧಿಯಲ್ಲಿ ಅವರ ನಾಯಕತ್ವದಲ್ಲಿ ಭಾರತ 135 ಗೆಲುವು, 60 ಸೋಲು, 11 ಡ್ರಾ, 3 ಪಂದ್ಯಗಳಲ್ಲಿ ಟೈ ಸಾಧಿಸಿತ್ತು. ಗೆಲುವಿನ ಶೇಕಡವಾರು 63.38.
icon

(6 / 11)

(REUTERS)

6. ಸ್ಟೀಫನ್ ಫ್ಲೆಮಿಂಗ್ (ನ್ಯೂಜಿಲೆಂಡ್): 1997 ರಿಂದ 2007ರ ತನಕ ಕಿವೀಸ್ ನಾಯಕನಾಗಿದ್ದ ಫ್ಲೆಮಿಂಗ್ 303 ಪಂದ್ಯಗಳಲ್ಲಿ ತಂಡದ ಮುಂದಾಳತ್ವ ವಹಿಸಿಕೊಂಡಿದ್ದರು. ಈ ಪೈಕಿ ಗೆದ್ದಿರುವುವು 128 ಪಂದ್ಯಗಳಲ್ಲಿ. ಆದರೆ ಗೆದ್ದಿದ್ದಕ್ಕಿಂತ ಸೋಲೇ ಹೆಚ್ಚಾಗಿದೆ. 135 ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. 25 ಡ್ರಾ, 2 ಟೈ ಆಗಿತ್ತು. ಗೆಲುವಿನ ಶೇಕಡವಾರು 42.24.
icon

(7 / 11)

7. ಹ್ಯಾನ್ಸಿ ಕ್ರೋನಿಯೆ (ದಕ್ಷಿಣ ಆಫ್ರಿಕಾ): 1994-2000ರ ಅವಧಿಯಲ್ಲಿ 191 ಪಂದ್ಯಗಳಿಗೆ ಸೌತ್ ಆಫ್ರಿಕಾ ನಾಯಕನಾಗಿದ್ದ ಇವರು, ಗೆದ್ದಿರುವುದು 126 ಪಂದ್ಯಗಳಲ್ಲಿ. ಸೋಲು 46 ಪಂದ್ಯಗಳಲ್ಲಿ. 15 ಡ್ರಾ, 1 ಟೈ ಕೂಡ ಇವರ ನಾಯಕತ್ವದಲ್ಲಿ ಆಗಿದೆ. ಗೆಲುವಿನ ಶೇಕಡವಾರು 65.96.
icon

(8 / 11)

8. ಇಯಾನ್ ಮಾರ್ಗನ್ (ಇಂಗ್ಲೆಂಡ್): 2011-2022ರ ಸಮಯದಲ್ಲಿ 198 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದ ಮಾರ್ಗನ್, 118ರಲ್ಲಿ ಗೆಲುವು ಕಂಡಿದ್ದಾರೆ. ಇವರು ಇಂಗ್ಲೆಂಡ್​ನ ಅತ್ಯಂತ ಯಶಸ್ವಿ ನಾಯಕನೂ ಹೌದು. 67 ಸೋಲು, 4 ಪಂದ್ಯಗಳು ಟೈ ಕೂಡ ಆಗಿವೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಇಂಗ್ಲೆಂಡ್​ನ ಮೊದಲ ನಾಯಕನೂ ಹೌದು. ಗೆಲುವಿನ ಶೇಕಡವಾರು 59.59.
icon

(9 / 11)

9. ಸ್ಟೀವ್ ವಾ (ಆಸ್ಟ್ರೇಲಿಯಾ): 1997-2004ರ ಅವಧಿಯಲ್ಲಿ ಆಸ್ಟ್ರೇಲಿಯಾ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದ ವಾ, ಮುನ್ನಡೆಸಿದ 163 ಪಂದ್ಯಗಳ ಪೈಕಿ 108    ಗೆಲುವು ಕಂಡಿದ್ದಾರೆ. ಅವರ ಸಾರಥ್ಯದಲ್ಲಿ 44 ಸೋಲು, 7 ಡ್ರಾ, 3 ಪಂದ್ಯಗಳು ಟೈ ಆಗಿವೆ. ಗೆಲುವಿನ ಶೇಕಡವಾರು 66.25.
icon

(10 / 11)

10. ಕೇನ್​ ವಿಲಿಯಮ್ಸನ್ (ನ್ಯೂಜಿಲೆಂಡ್): ಅನುಭವಿ ಆಟಗಾರ ಕೇನ್  2012-2024ರ ಅವಧಿಯಲ್ಲಿ 206 ಪಂದ್ಯಗಳಿಗೆ ಕಿವೀಸ್ ಕಪ್ತಾನನಾಗಿದ್ದರು. 107     ಗೆಲುವುಗಳ ಜೊತೆಗೆ 84 ಸೋಲುಗಳನ್ನೂ ಕಂಡಿದ್ದಾರೆ. ಅವರ ನಾಯಕತ್ವದಲ್ಲಿ 8 ಡ್ರಾ, 2 ಪಂದ್ಯಗಳು ಟೈ ಆಗಿವೆ. ಗೆಲುವಿನ ಶೇಕಡವಾರು 51.94. 
icon

(11 / 11)

(AP)

ಇತರ ಗ್ಯಾಲರಿಗಳು