ಐಪಿಎಲ್ ಇತಿಹಾಸದಲ್ಲಿ ನಡೆದ ಸೂಪರ್​ ಓವರ್​ಗಳೆಷ್ಟು; ಯಾರ್ಯಾರ ವಿರುದ್ಧ ನಡೆದಿತ್ತು, ಗೆದ್ದೋರು ಯಾರು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್ ಇತಿಹಾಸದಲ್ಲಿ ನಡೆದ ಸೂಪರ್​ ಓವರ್​ಗಳೆಷ್ಟು; ಯಾರ್ಯಾರ ವಿರುದ್ಧ ನಡೆದಿತ್ತು, ಗೆದ್ದೋರು ಯಾರು?

ಐಪಿಎಲ್ ಇತಿಹಾಸದಲ್ಲಿ ನಡೆದ ಸೂಪರ್​ ಓವರ್​ಗಳೆಷ್ಟು; ಯಾರ್ಯಾರ ವಿರುದ್ಧ ನಡೆದಿತ್ತು, ಗೆದ್ದೋರು ಯಾರು?

  • ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಎಷ್ಟೆಲ್ಲಾ ಸೂಪರ್ ಓವರ್​ಗಳು ನಡೆದಿವೆ, ಯಾವ ತಂಡಗಳ ನಡುವೆ ನಡೆದಿವೆ, ಯಾವ ತಂಡಗಳು ಅತಿ ಹೆಚ್ಚು ಸೂಪರ್​ ಓವರ್ ಆಡಿವೆ? ಇಲ್ಲಿದೆ ವಿವರ.

ಐಪಿಎಲ್ ಇತಿಹಾಸದಲ್ಲಿ ಮೊದಲ ಸೂಪರ್ ಓವರ್ ನಡೆದಿದ್ದು 2009ರಲ್ಲಿ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಎರಡೂ ತಂಡಗಳು ತಲಾ 150 ರನ್ ಗಳಿಸಿದ್ದ ಪರಿಣಾಮ ಸೂಪರ್​ ಓವರ್ ಆಡಲಾಯಿತು. ಈ ಓವರ್ ಅನ್ನು ಕಮ್ರಾನ್ ಖಾನ್ ಬೌಲಿಂಗ್ ಮಾಡಿದ್ದರು. ಕೆಕೆಆರ್ ಸೂಪರ್ ಓವರ್‌ನಲ್ಲಿ ಕ್ರಿಸ್ ಗೇಲ್ ಮೂರು ಬೌಂಡರಿ ಸಹಿತ 15 ರನ್ ಗಳಿಸಿತು. ನಂತರ, ರಾಜಸ್ಥಾನದ ಯೂಸುಫ್ ಪಠಾಣ್ ಮತ್ತು ಅಜಂತಾ ಮೆಂಡಿಸ್ ಅವರು ನಾಲ್ಕು ಎಸೆತಗಳಲ್ಲೇ 16 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
icon

(1 / 15)

2010ರಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಸೂಪರ್ ಓವರ್​ ನಡೆದಿತ್ತು. ಎರಡೂ ತಂಡಗಳು ತಲಾ 136 ರನ್ ಗಳಿಸಿದ್ದವು. ಮುತ್ತಯ್ಯ ಮುರಳೀಧರನ್ ಅವರ ಸೂಪರ್ ಓವರ್‌ನಲ್ಲಿ ಪಂಜಾಬ್ 10 ರನ್ ಗಳಿಸುವ ಮೂಲಕ ಪಂದ್ಯ ಗೆದ್ದುಕೊಂಡಿತ್ತು.
icon

(2 / 15)

ಇದು ಐಪಿಎಲ್-2013ರ 21ನೇ ಪಂದ್ಯವಾಗಿತ್ತು. ಡೆಲ್ಲಿ ಮತ್ತು ಆರ್‌ಸಿಬಿ ಮುಖಾಮುಖಿಯಾಗಿದ್ದವು. ಎರಡೂ ತಂಡಗಳು ತಲಾ 152 ರನ್ ಗಳಿಸಿದ್ದವು. ಸೂಪರ್ ಓವರ್‌ನಲ್ಲಿ ಆರ್‌ಸಿಬಿಗೆ 12 ರನ್‌ ಬೇಕಿತ್ತು. ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಮೊದಲ 3 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿದ್ದರು. ಆದರೆ ಎಬಿ ಡಿವಿಲಿಯರ್ಸ್ ಕೊನೆಯ 2 ಎಸೆತಗಳಲ್ಲಿ 2 ಸಿಕ್ಸರ್‌ ಬಾರಿಸಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟರು.
icon

(3 / 15)

ಐಪಿಎಲ್ 2013ರಲ್ಲಿ ಆರ್‌ಸಿಬಿ ಮತ್ತೊಂದು ಸೂಪರ್ ಓವರ್ ಆಡಿತು. ಈ ಪಂದ್ಯ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧವಾಗಿತ್ತು. ಆದರೆ, ಈ ಬಾರಿ ಆರ್‌ಸಿಬಿ ಈ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಕೊನೆಯ ಓವರ್‌ನಲ್ಲಿ ಅದು 20 ರನ್ ಗಳಿಸಬೇಕಾಗಿತ್ತು.
icon

(4 / 15)

2014ರ ಐಪಿಎಲ್‌ನಲ್ಲಿ, ರಾಜಸ್ಥಾನ ರಾಯಲ್ಸ್ ತಂಡವು ಕೋಲ್ಕತ್ತಾ ವಿರುದ್ಧ ಸೂಪರ್ ಓವರ್‌ನಲ್ಲಿ ಸೂಪರ್ ಗೆಲುವು ಸಾಧಿಸಿತು. ಎರಡೂ ತಂಡಗಳು ತಲಾ 152 ರನ್ ಗಳಿಸಿದ್ದವು. ಸ್ಟೀವ್ ಸ್ಮಿತ್ ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ ತಮ್ಮ ತಂಡಕ್ಕೆ ಪಂದ್ಯವನ್ನು ಗೆದ್ದುಕೊಟ್ಟರು.
icon

(5 / 15)

ರಾಜಸ್ಥಾನ ರಾಯಲ್ಸ್ ತಂಡವು ಐಪಿಎಲ್‌ನಲ್ಲಿ 3ನೇ ಸೂಪರ್ ಓವರ್ ಆಡಿದೆ. 20 ಓವರ್‌ಗಳ ಅಂತ್ಯದಲ್ಲಿ ಎರಡೂ ತಂಡಗಳ ಸ್ಕೋರ್ 191 ರನ್‌ಗಳಾಗಿತ್ತು. ಸೂಪರ್ ಓವರ್‌ನಲ್ಲಿ ಶಾನ್ ಮಾರ್ಷ್ ಅವರ ಅದ್ಭುತ ಬ್ಯಾಟಿಂಗ್‌ನಿಂದ ಪಂಜಾಬ್ ತಂಡ 15 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ರಾಜಸ್ಥಾನ ತಂಡ ಕೇವಲ ಆರು ರನ್ ಗಳಿಸಲಷ್ಟೇ ಶಕ್ತವಾಯಿತು.
icon

(6 / 15)

ಐಪಿಎಲ್ 2017 ರಲ್ಲಿ ಗುಜರಾತ್ ಲಯನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಸೂಪರ್ ಓವರ್​ ನಡೆದಿತ್ತು. ಎರಡೂ ತಂಡಗಳು 153 ರನ್ ಗಳಿಸಿದ್ದವು. ಸೂಪರ್ ಓವರ್‌ನಲ್ಲಿ ಮುಂಬೈ ತಂಡ 11 ರನ್ ಗಳಿಸಿತು. ನಂತರ ಗುಜರಾತ್ ಬ್ಯಾಟ್ಸ್‌ಮನ್‌ಗಳು ಬುಮ್ರಾ ಬೌಲಿಂಗ್ ಎದುರು ಅಸಹಾಯಕಾದರು.
icon

(7 / 15)

ಐಪಿಎಲ್ 2019ರಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೆಕೆಆರ್ ವಿರುದ್ಧ ಸೂಪರ್ ಓವರ್‌ನಲ್ಲಿ ಜಯಗಳಿಸಿತು. ಎರಡೂ ತಂಡಗಳು ತಲಾ 185 ರನ್ ಗಳಿಸಿದ್ದವು. ಸೂಪರ್ ಓವರ್‌ನಲ್ಲಿ ಡೆಲ್ಲಿ ತಂಡ 10 ರನ್ ಗಳಿಸಿತ್ತು. ಆದರೆ ರಬಾಡ ಬೌಲಿಂಗ್​ನಲ್ಲಿ ಕೆಕೆಆರ್ ಗೆಲ್ಲಲು ವಿಫಲವಾಯಿತು.
icon

(8 / 15)

ಮೊದಲ 20 ಓವರ್‌ಗಳಲ್ಲಿ ಎರಡೂ ತಂಡಗಳು 162 ರನ್ ಗಳಿಸಿದ್ದವು. ಸೂಪರ್ ಓವರ್‌ನಲ್ಲಿ ಮುಂಬೈ ಮೊದಲು ಬ್ಯಾಟಿಂಗ್ ಮಾಡಿತು. ಹಾರ್ದಿಕ್ ಮತ್ತು ಪೊಲಾರ್ಡ್ ಅವರ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ತಂಡವು 9 ರನ್‌ಗಳನ್ನು ಗಳಿಸಿತು. ಆದರೆ ಎಸ್​ಆರ್​ಹೆಚ್​ 8 ರನ್ ಗಳಿಸಲಷ್ಟೇ ಶಕ್ತವಾಯಿತು.
icon

(9 / 15)

2020ರ ಐಪಿಎಲ್​ನಲ್ಲಿ ಡೆಲ್ಲಿ ಮತ್ತು ಪಂಜಾಬ್ ಎರಡೂ ತಂಡಗಳು 20 ಓವರ್‌ಗಳಲ್ಲಿ 157 ರನ್ ಗಳಿಸಿದವು. ಸೂಪರ್ ಓವರ್‌ನಲ್ಲಿ ರಬಾಡ ಅವರ ಮ್ಯಾಜಿಕ್ ಕೆಲಸ ಮಾಡಿತು. ಪಂಜಾಬ್ ತಂಡವು ಕೇವಲ 2 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಬಳಿಕ ಡೆಲ್ಲಿ ಸುಲಭ ಗೆಲುವು ಸಾಧಿಸಿತು.
icon

(10 / 15)

2020ರಲ್ಲಿ ಆರ್​ಸಿಬಿ ಮತ್ತು ಮುಂಬೈ ನಡುವೆ ಸೂಪರ್ ಓವರ್ ನಡೆದಿತ್ತು. ಎರಡೂ ತಂಡಗಳು 201 ರನ್ ಗಳಿಸಿದ್ದವು. ಸೂಪರ್ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೇವಲ ಏಳು ರನ್ ಗಳಿಸಿತು. ಬಳಿಕ ಆರ್​​ಸಿಬಿ ಚೇಸ್ ಮಾಡಿತು.
icon

(11 / 15)

2020ರ ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಸೂಪರ್ ಓವರ್ ಆಗಿತ್ತು. ಉಭಯ ತಂಡಗಳು 163 ರನ್ ಗಳಿಸಿದ್ದವು. ಸೂಪರ್ ಓವರ್‌ನಲ್ಲಿ ಲಾಕಿ ಫರ್ಗುಸನ್ ವಿರುದ್ಧ ಎಸ್​ಆರ್​​ಹೆಚ್ ಬ್ಯಾಟ್ಸ್‌ಮನ್‌ಗಳು ಕೇವಲ 2 ರನ್ ಗಳಿಸಿದರಷ್ಟೆ. ಬಳಿಕ ಕೆಕೆಆರ್ ಸುಲಭವಾಗಿ ಗೆದ್ದುಕೊಳ್ತು.
icon

(12 / 15)

2020ರಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್​ ನಡುವೆ ನಡೆದ ಒಂದೇ ಪಂದ್ಯದಲ್ಲಿ ಎರಡು ಸೂಪರ್​ ಓವರ್​ಗಳು ನಡೆದವು. ಅಧಿಕೃತ ಇನ್ನಿಂಗ್ಸ್​ನಲ್ಲಿ ಉಭಯ ತಂಡಗಳು 176 ರನ್ ಗಳಿಸಿದ್ದವು. ಬಳಿಕ ಮೊದಲ ಇನ್ನಿಂಗ್ಸ್​​ನಲ್ಲಿ 5-5 ರನ್​ಗಳ ಸಮಬಲ ಸಾಧಿಸಿದವು. ಆದರೆ ಎರಡನೇ ಸೂಪರ್ ಓವರ್​ನಲ್ಲಿ ಮುಂಬೈ 11 ರನ್ ಗಳಿಸಿದರೆ, ಪಂಜಾಬ್ ಅದನ್ನು 4 ಎಸೆತಗಳಲ್ಲೇ ಮುಗಿಸಿ ಗೆದ್ದು ಬೀಗಿತು.
icon

(13 / 15)

ಐಪಿಎಲ್ 2021 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಸೂಪರ್ ಓವರ್ ಆಡಲಾಗಿತ್ತು. ಡೆಲ್ಲಿ ತಂಡಕ್ಕೆ ಸೂಪರ್ ಓವರ್‌ನಲ್ಲಿ ಎಂಟು ರನ್ ಗಳಿಸುವ ಅಗತ್ಯವಿತ್ತು. ಈ ಸ್ಕೋರ್ ಅನ್ನು ಸುಲಭವಾಗಿ ಗೆದ್ದು ಬೀಗಿತು.
icon

(14 / 15)

ನಾಲ್ಕು ವರ್ಷಗಳ ನಂತರ 2025ರಲ್ಲಿ ಮತ್ತೊಮ್ಮೆ ದೆಹಲಿ ತಂಡ ಸೂಪರ್ ಓವರ್‌ಗೆ ತಲುಪಿತು. ಉಭಯ ತಂಡಗಳು 188 ರನ್ ಗಳಿಸಿದ್ದವು. ಬಳಿಕ ಸೂಪರ್ ಓವರ್​ನಲ್ಲಿ ಆರ್​ಆರ್​ 11 ರನ್ ಗಳಿಸಿತ್ತು. ಡೆಲ್ಲಿ 4 ಎಸೆತಗಳಲ್ಲೇ ಗೆದ್ದು ಬೀಗಿತು.
icon

(15 / 15)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು