ವಿಜಯ್ ಹಜಾರೆ ಟ್ರೋಫಿಯಲ್ಲಿ ಕನ್ನಡಿಗರ ಅಬ್ಬರ; ಹೆಚ್ಚು ರನ್‌ ಸಿಡಿಸಿದ ಬ್ಯಾಟರ್‌ಗಳಲ್ಲಿ ಕರ್ನಾಟಕ ಆಟಗಾರರಿಗೆ ಅಗ್ರಸ್ಥಾನ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿಜಯ್ ಹಜಾರೆ ಟ್ರೋಫಿಯಲ್ಲಿ ಕನ್ನಡಿಗರ ಅಬ್ಬರ; ಹೆಚ್ಚು ರನ್‌ ಸಿಡಿಸಿದ ಬ್ಯಾಟರ್‌ಗಳಲ್ಲಿ ಕರ್ನಾಟಕ ಆಟಗಾರರಿಗೆ ಅಗ್ರಸ್ಥಾನ

ವಿಜಯ್ ಹಜಾರೆ ಟ್ರೋಫಿಯಲ್ಲಿ ಕನ್ನಡಿಗರ ಅಬ್ಬರ; ಹೆಚ್ಚು ರನ್‌ ಸಿಡಿಸಿದ ಬ್ಯಾಟರ್‌ಗಳಲ್ಲಿ ಕರ್ನಾಟಕ ಆಟಗಾರರಿಗೆ ಅಗ್ರಸ್ಥಾನ

  • ವಿಜಯ್ ಹಜಾರೆ ಟ್ರೋಫಿ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದೆ. ಟೂರ್ನಿಯಲ್ಲಿ ಕರ್ನಾಟಕ ತಂಡ ಹಾಗೂ ರಾಜ್ಯದ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಗುಂಪು ಹಂತದ ಕೊನೆಯಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಈವರೆಗೆ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟರ್‌ಗಳು ಯಾರು ಎಂಬುದನ್ನು ನೋಡೋಣ.

ಪ್ರಸಕ್ತ ಆವೃತ್ತಿಯ ವಿಜಯ್‌ ಹಜಾರೆ ಟ್ರೋಫಿಯಲ್ಲಿ ಕನ್ನಡಿಗರಾದ ಮಯಾಂಕ್‌ ಅಗರ್ವಾಲ್‌ ಹಾಗೂ ಕರುಣ್‌ ನಾಯರ್‌ ಸ್ಫೋಟಕ ಫಾರ್ಮ್‌ನಲ್ಲಿದ್ದಾರೆ. ಗ್ರೂಪ್‌ ಹಂತದಲ್ಲಿ ಇಬ್ಬರೂ ತಲಾ ನಾಲ್ಕು ಶತಕಗಳೊಂದಿಗೆ ಅತಿ ಹೆಚ್ಚು ರನ್‌ ಗಳಿಸಿದ್ದಾರೆ. ಇವರಲ್ಲಿ ಮಯಾಂಕ್‌ ಕರ್ನಾಟಕ ತಂಡದ ನಾಯಕನಾಗಿದ್ದರೆ, ಕರುಣ್‌ ವಿದರ್ಭ ಪರ ಆಡುತ್ತಿದ್ದಾರೆ.
icon

(1 / 10)

ವಿಜಯ್ ಹಜಾರೆ ಟ್ರೋಫಿಯ ಲೀಗ್ ಹಂತದ ಕೊನೆಯಲ್ಲಿ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಅವರು 7 ಪಂದ್ಯಗಳ 7 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದು, 153.25ರ ಸರಾಸರಿಯಲ್ಲಿ 613 ರನ್ ಗಳಿಸಿದ್ದಾರೆ. ಇವರ ಸ್ಟ್ರೈಕ್ ರೇಟ್ 111.65. ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ ಅಜೇಯ 139 ರನ್. ಮಯಾಂಕ್ 4 ಸ್ಫೋಟಕ ಶತಕ ಹಾಗೂ 1 ಅರ್ಧಶತಕ ಬಾರಿಸಿದ್ದಾರೆ. ಚಿತ್ರ: ಮಹಾರಾಜ ಟಿ 20 ಟ್ರೋಫಿ
icon

(2 / 10)

ವಿದರ್ಭ ತಂಡದ ಪರ ಆಡುತ್ತಿರುವ ಕನ್ನಡಿಗ ಕರುಣ್ ನಾಯರ್, ಆರು ಪಂದ್ಯಗಳಲ್ಲಿ 542.00ರ ಸರಾಸರಿಯಲ್ಲಿ 542 ರನ್ ಗಳಿಸಿದ್ದಾರೆ. ಕರುಣ್ 4 ಇನ್ನಿಂಗ್ಸ್‌ಗಳಲ್ಲಿ ಅಜೇಯರಾಗಿ ಉಳಿದು ದಾಖಲೆ ನಿರ್ಮಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 115.07 ಆಗಿದೆ. ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ ಅಜೇಯ 163 ರನ್ ಆಗಿದೆ. ವಿಜಯ್ ಹಜಾರೆ ಟ್ರೋಫಿಯ ಲೀಗ್ ಹಂತದಲ್ಲಿ ಕರುಣ್ ನಾಯರ್ 4 ಶತಕಗಳನ್ನು ಬಾರಿಸಿದ್ದಾರೆ. ಈ ನಡುವೆ 67 ಬೌಂಡರಿ ಮತ್ತು 6 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ಚಿತ್ರ: ಮಹಾರಾಜ ಟ್ರೋಫಿ.
icon

(3 / 10)

ಮಹಾರಾಷ್ಟ್ರದ ಸಿದ್ದೇಶ್ ವೀರ್ 7 ಪಂದ್ಯಗಳಲ್ಲಿ 122.50ರ ಸರಾಸರಿಯಲ್ಲಿ 490 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 103.15 ಆಗಿದೆ. ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ 155 ರನ್. ಸಿದ್ದೇಶ್ ಎರಡು ಶತಕ ಮತ್ತು ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ. ಅವರು 58 ಬೌಂಡರಿ ಮತ್ತು 11 ಸಿಕ್ಸರ್ ಗಳನ್ನು ಬಾರಿಸಿದರು. ಗೆಟ್ಟಿ ಫೋಟೋ.
icon

(4 / 10)

ವಿಜಯ್ ಹಜಾರೆ ಟ್ರೋಫಿಯ ಲೀಗ್ ಹಂತದಲ್ಲಿ ಪಂಜಾಬ್‌ ತಂಡದ ಪ್ರಭ್‌ಸಿಮ್ರನ್ ಸಿಂಗ್ ನಾಲ್ಕನೇ ಅತಿ ಹೆಚ್ಚು ರನ್‌ ಗಳಿಸಿದ್ದಾರೆ. ಇವರ ಗಳಿಕೆ 484 ರನ್. ಅವರು 7 ಪಂದ್ಯಗಳಲ್ಲಿ 7 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಸರಾಸರಿ 96.80. ಸ್ಟ್ರೈಕ್ ರೇಟ್ 130.81. ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ ಅಜೇಯ 150 ರನ್. ಫೋಟೋ: ಎಪಿ.
icon

(5 / 10)

ಮುಂಬೈನ ಆಯುಷ್ ಮಾತ್ರೆ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ವಿಜಯ್ ಹಜಾರೆ ಟ್ರೋಫಿಯ ಲೀಗ್ ಹಂತದಲ್ಲಿ ಅವರು 7 ಪಂದ್ಯಗಳ 7 ಇನ್ನಿಂಗ್ಸ್‌ಗಳಲ್ಲಿ 458 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 65.42. ಸ್ಟ್ರೈಕ್ ರೇಟ್ 135.50. ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ 181 ರನ್. ಅವರು ಎರಡು ಶತಕಗಳು ಮತ್ತು ಒಂದು ಅರ್ಧಶತಕವನ್ನು ಗಳಿಸಿದ್ದಾರೆ. ಆಯುಷ್ 43 ಬೌಂಡರಿ ಮತ್ತು 23 ಸಿಕ್ಸರ್ ಬಾರಿಸಿದ್ದಾರೆ. ACC ಫೋಟೋ.
icon

(6 / 10)

ಕರ್ನಾಟಕ ತಂಡದ ನಾಯಕನಾಗಿರುವ ಮಯಾಂಕ್ ಅಗರ್ವಾಲ್, ಈ ಬಾರಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ನಾಲ್ಕನೇ ಶತಕ ಸಿಡಿಸಿ ತಂಡವನ್ನು ಗೆಲ್ಲಿಸಿದ್ದಾರೆ. ನಾಗಾಲ್ಯಾಂಡ್ ತಂಡದ ವಿರುದ್ಧ ಗೆದ್ದ ಕರ್ನಾಟಕ, ಕ್ವಾರ್ಟರ್ ಫೈನಲ್​ಗೆ ಲಗ್ಗೆಯಿಟ್ಟಿದೆ.
icon

(7 / 10)

(espncricinfo)

ಅತ್ತ ಮಯಾಂಕ್‌ಗೆ ಸರಿಸಮನಾಗಿ ಕರುಣ್‌ ನಾಯರ್‌ ಕೂಡಾ ಅಬ್ಬರಿಸುತ್ತಿದ್ದಾರೆ. ಕರುಣ್‌ ವಿದರ್ಭ ಪರ ಆಡುತ್ತಿದ್ದರೂ, ಅವರು ಕರ್ನಾಟಕದ ಮಾಜಿ ಆಟಗಾರ ಎಂಬುದು ಗಮನಾರ್ಹ.
icon

(8 / 10)

(PTI)

ಔಟಾಗದೆ ಅತಿ ಹೆಚ್ಚು ಲಿಸ್ಟ್ ಎ ರನ್‌ ಗಳಿಸಿದ ವಿಶ್ವದಾಖಲೆಯನ್ನು ಕರುಣ್ ನಿರ್ಮಿಸಿದರು. 2010ರಲ್ಲಿ ಔಟಾಗದೆ 527 ರನ್ ಗಳಿಸಿದ್ದ ನ್ಯೂಜಿಲೆಂಡ್‌ನ ಮಾಜಿ ಆಲ್‌ರೌಂಡರ್ ಜೇಮ್ಸ್ ಫ್ರಾಂಕ್ಲಿನ್‌ರ ದಾಖಲೆಯನ್ನು ಕರುಣ್‌ ಮುರಿದಿದ್ದಾರೆ. ಉತ್ತರ ಪ್ರದೇಶ ವಿರುದ್ಧ 112 ರನ್ ಸಿಡಿಸಿದ ನಾಯರ್, ಔಟಾಗದೆ 542 ರನ್ ಗಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದರು.
icon

(9 / 10)

ಕ್ರಿಕೆಟ್ ಸುದ್ದಿಗಳ ಕ್ಷಣಕ್ಷಣದ ಅಪ್ಡೇಟ್ಸ್​​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(10 / 10)

ಇತರ ಗ್ಯಾಲರಿಗಳು