2022ರಿಂದ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್ ಇವರೇ; ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗದ ವೇಗಿಗೆ ಅಗ್ರಸ್ಥಾನ
- Most Wickets: 2022ರ ಜನವರಿ 1 ರಿಂದ ಭಾರತ ದ ಪರ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್-5 ಬೌಲರ್ಗಳು ಯಾರು? ಈ ಪೈಕಿ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗದ ಈ ಬೌಲರ್ ಅಗ್ರಸ್ಥಾನ ಪಡೆದಿದ್ದಾರೆ.
- Most Wickets: 2022ರ ಜನವರಿ 1 ರಿಂದ ಭಾರತ ದ ಪರ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್-5 ಬೌಲರ್ಗಳು ಯಾರು? ಈ ಪೈಕಿ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗದ ಈ ಬೌಲರ್ ಅಗ್ರಸ್ಥಾನ ಪಡೆದಿದ್ದಾರೆ.
(1 / 6)
ಜನವರಿ 18ರಂದು ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಪ್ರಮುಖ ಬೌಲರ್ನನ್ನೇ ಕೈಬಿಡಲಾಗಿದೆ. 2022ರ ಜನವರಿ 1ರಿಂದ ಭಾರತದ ಪರ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಟಾಪ್-5 ಬೌಲರ್ಗಳು ಯಾರೆಂಬುದನ್ನು ಈ ಮುಂದೆ ನೋಡೋಣ. ಆದರೆ ಅವಕಾಶ ಪಡೆಯದ ಆ ಬೌಲರ್ ಅಗ್ರಸ್ಥಾನದಲ್ಲಿರುವುದು ವಿಶೇಷ.
(2 / 6)
ಕಳೆದ 2 ವರ್ಷಗಳಲ್ಲಿ, ಜಸ್ಪ್ರೀತ್ ಬುಮ್ರಾ 22 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 18.85 ಸರಾಸರಿಯಲ್ಲಿ 41 ವಿಕೆಟ್ ಪಡೆದಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಬುಮ್ರಾ ಆಡುವುದು ಅವರ ಫಿಟ್ನೆಸ್ ಮೇಲೆ ಅವಲಂಬಿತವಾಗಿರುತ್ತದೆ.
(3 / 6)
ಕಳೆದ ಎರಡು ವರ್ಷಗಳಲ್ಲಿ ಶಾರ್ದೂಲ್ ಠಾಕೂರ್ 32 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 27.81ರ ಸರಾಸರಿಯಲ್ಲಿ 43 ವಿಕೆಟ್ ಪಡೆದಿದ್ದಾರೆ. ಐದನೇ ಸ್ಥಾನದಲ್ಲಿದ್ದಾರೆ. ಗಾಯದ ನಂತರ ಶಾರ್ದೂಲ್ ತಂಡಕ್ಕೆ ಮರಳಿಲ್ಲ.
(4 / 6)
ಮೊಹಮ್ಮದ್ ಶಮಿ ಅವರು 47 ವಿಕೆಟ್ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. 2023ರ ವಿಶ್ವಕಪ್ ಬಳಿಕ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಪುನರಾಗಮನ ಮಾಡಲು ಸಜ್ಜಾಗಿದ್ದಾರೆ.
(5 / 6)
ಈ ಪಟ್ಟಿಯಲ್ಲಿರುವ ಏಕೈಕ ಸ್ಪಿನ್ನರ್ ಮತ್ತು ಎರಡನೇ ಬೌಲರ್ ಕುಲದೀಪ್ ಯಾದವ್. ಅವರು 314.5 ಓವರ್ಸ್ ಬೌಲ್ ಮಾಡಿದ್ದು 22.13ರ ಸರಾಸರಿಯಲ್ಲಿ 65 ವಿಕೆಟ್ ಕಿತ್ತಿದ್ದಾರೆ.
ಇತರ ಗ್ಯಾಲರಿಗಳು