Most Wickets: ಈ ವರ್ಷದ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್-5 ಬೌಲರ್ಗಳು ಇವರೇ; ಬುಮ್ರಾಗೆ ಅಗ್ರಸ್ಥಾನ
- 2024ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ (ಟಿ20, ಏಕದಿನ, ಟೆಸ್ಟ್) ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ -5 ಬೌಲರ್‌ಗಳ ಪಟ್ಟಿ ಇಲ್ಲಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ನ ತಲಾ ಒಬ್ಬೊಬ್ಬ ಬೌಲರ್ ಈ ಪಟ್ಟಿಯಲ್ಲಿದ್ದಾರೆ.
- 2024ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ (ಟಿ20, ಏಕದಿನ, ಟೆಸ್ಟ್) ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ -5 ಬೌಲರ್‌ಗಳ ಪಟ್ಟಿ ಇಲ್ಲಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ನ ತಲಾ ಒಬ್ಬೊಬ್ಬ ಬೌಲರ್ ಈ ಪಟ್ಟಿಯಲ್ಲಿದ್ದಾರೆ.
(1 / 6)
ಭಾರತ ತಂಡದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ 2024ರಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಅವರು 21 ಪಂದ್ಯಗಳಲ್ಲಿ 86 ವಿಕೆಟ್ ಕಿತ್ತಿದ್ದಾರೆ. 13 ಟೆಸ್ಟ್‌ಗಳಲ್ಲಿ 71 ವಿಕೆಟ್, 8 ಟಿ20 ಪಂದ್ಯಗಳಲ್ಲಿ 15 ವಿಕೆಟ್ ಕಬಳಿಸಿದ್ದಾರೆ. ಈ ವರ್ಷ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಆಗಿದ್ದಾರೆ. ಆದರೆ ಅವರು ಈ ವರ್ಷ ಒಂದೇ ಒಂದು ಏಕದಿನ ಆಡಿಲ್ಲ.
(X)(2 / 6)
ಶ್ರೀಲಂಕಾದ ಆಲ್ರೌಂಡರ್ ವನಿಂದು ಹಸರಂಗಾ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. 2024ರಲ್ಲಿ ಆಡಿರುವ 30 ಪಂದ್ಯಗಳಲ್ಲಿ 64 ವಿಕೆಟ್ ಪಡೆದಿದ್ದಾರೆ. 10 ಏಕದಿನಗಳಲ್ಲಿ 26 ವಿಕೆಟ್ ಪಡೆದಿರುವ ಅವರು ಈ ವರ್ಷ ಒಡಿಐನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. 20 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 38 ವಿಕೆಟ್ ಪಡೆದಿದ್ದಾರೆ.
(AP)(3 / 6)
ವೆಸ್ಟ್ ಇಂಡೀಸ್ ವೇಗದ ಬೌಲರ್ ಅಲ್ಜಾರಿ ಜೋಸೆಫ್ ಜಂಟಿಯಾಗಿ 3ನೇ ಸ್ಥಾನದಲ್ಲಿದ್ದಾರೆ. 35 ಪಂದ್ಯಗಳಲ್ಲಿ 63 ವಿಕೆಟ್ ಕಬಳಿಸಿದ್ದಾರೆ. 7 ಟೆಸ್ಟ್‌ಗಳಲ್ಲಿ 26 ವಿಕೆಟ್, 9 ಏಕದಿನದಲ್ಲಿ 15 ವಿಕೆಟ್, 19 ಟಿ20ಐಗಳಲ್ಲಿ 22 ವಿಕೆಟ್ ಉರುಳಿಸಿದ್ದಾರೆ.
(AP)(4 / 6)
ಬಾಂಗ್ಲಾದೇಶದ ಬೌಲರ್ ತಸ್ಕಿನ್ ಅಹ್ಮದ್ ಈ ವರ್ಷ 30 ಪಂದ್ಯಗಳಲ್ಲಿ 63 ವಿಕೆಟ್ ಕಿತ್ತಿದ್ದಾರೆ. 19 ಟಿ20ಐಗಳಲ್ಲಿ 30 ವಿಕೆಟ್, 7 ಏಕದಿನದಲ್ಲಿ 14 ವಿಕೆಟ್, 4 ಟೆಸ್ಟ್‌ಗಳಲ್ಲಿ 19 ವಿಕೆಟ್ ಕಿತ್ತಿದ್ದಾರೆ. ಇವರು ಸದ್ಯ ನಾಲ್ಕನೇ ಸ್ಥಾನದಲ್ಲಿದ್ದಾರೆ.
(5 / 6)
ನ್ಯೂಜಿಲೆಂಡ್ ವೇಗದ ಬೌಲರ್ ಮ್ಯಾಟ್ ಹೆನ್ರಿ ಈ ವರ್ಷ 16 ಪಂದ್ಯಗಳಲ್ಲಿ 59 ವಿಕೆಟ್ ಪಡೆದಿದ್ದಾರೆ. ಅವರು 9 ಟೆಸ್ಟ್‌ಗಳಲ್ಲಿ 48 ವಿಕೆಟ್, 7 ಟಿ20 ಪಂದ್ಯಗಳಲ್ಲಿ 11 ವಿಕೆಟ್ ಪಡೆದಿದ್ದಾರೆ. ಈ ವರ್ಷ ಅವರು ಯಾವುದೇ ಏಕದಿನ ಪಂದ್ಯವನ್ನು ಆಡಿಲ್ಲ.
(AFP)ಇತರ ಗ್ಯಾಲರಿಗಳು