ಐಪಿಎಲ್‌ನಲ್ಲಿ ಒಂದೇ ತಂಡದ ಪರ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ಸ್; ಆರ್ಸಿಬಿಯವರೇ ಇಬ್ಬರು!
- ರಾಜಸ್ಥಾನ್ ರಾಯಲ್ಸ್ ವಿರುದ್ಧ ಅದ್ಭುತ ಅರ್ಧಶತಕದೊಂದಿಗೆ ಮುಂಬೈ ಇಂಡಿಯನ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ರೋಹಿತ್ ಶರ್ಮಾ, ಐಪಿಎಲ್‌ನಲ್ಲಿ ಒಂದೇ ತಂಡದ ಪರ 6000 ರನ್ ಪೂರೈಸಿದ್ದಾರೆ. ಹಾಗಾದರೆ ಒಂದೇ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು ಯಾರು?
- ರಾಜಸ್ಥಾನ್ ರಾಯಲ್ಸ್ ವಿರುದ್ಧ ಅದ್ಭುತ ಅರ್ಧಶತಕದೊಂದಿಗೆ ಮುಂಬೈ ಇಂಡಿಯನ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ರೋಹಿತ್ ಶರ್ಮಾ, ಐಪಿಎಲ್‌ನಲ್ಲಿ ಒಂದೇ ತಂಡದ ಪರ 6000 ರನ್ ಪೂರೈಸಿದ್ದಾರೆ. ಹಾಗಾದರೆ ಒಂದೇ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು ಯಾರು?
(1 / 8)
ಮೇ 1ರ ಗುರುವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ 36 ಎಸೆತಗಳಲ್ಲಿ 53 ರನ್ ಗಳಿಸಿ ಅದ್ಭುತ ಪ್ರದರ್ಶನ ನೀಡಿದರು. ಇದರೊಂದಿಗೆ, ಅವರು ಮುಂಬೈ ಇಂಡಿಯನ್ಸ್ ಪರ ಆಡುವಾಗ 6000 ರನ್‌ಗಳನ್ನು ಪೂರ್ಣಗೊಳಿಸಿದರು. ಅಲ್ಲದೆ, ವಿಶೇಷ ದಾಖಲೆಯನ್ನೂ ತಮ್ಮಗಾಗಿಸಿಕೊಂಡಿದ್ದಾರೆ.
(PTI)(2 / 8)
ಐಪಿಎಲ್‌ನಲ್ಲಿ ಒಂದೇ ತಂಡದ ಪರ ಅತ್ಯಧಿಕ ರನ್ ಕಲೆ ಹಾಕಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ವಿರಾಟ್ ಕೊಹ್ಲಿ ಅವರು ಈ ದಾಖಲೆಯ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಈಗ ಮುಂಬೈ ಪರ ಅವರು 6024 ರನ್ ಪೂರ್ಣಗೊಳಿಸಿದ್ದಾರೆ. ಎಂಐ ತಂಡಕ್ಕೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರನೂ ಹೌದು.
(3 / 8)
ಐಪಿಎಲ್‌ನಲ್ಲಿ ಮಾತ್ರವಲ್ಲದೆ, ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಯಾವುದೇ ತಂಡಕ್ಕೆ ಅತಿ ಹೆಚ್ಚು ರನ್‌ಗಳ ವಿಷಯದಲ್ಲಿ ರೋಹಿತ್ ಎರಡನೇ ಸ್ಥಾನದಲ್ಲಿದ್ದಾರೆ. ಐಪಿಎಲ್ ಸೇರಿದಂತೆ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಮೂರನೇ ಸ್ಥಾನದಲ್ಲಿ ಜೇಮ್ಸ್ ವಿನ್ಸ್ ಇದ್ದಾರೆ, ಅವರು ಹ್ಯಾಂಪ್‌ಶೈರ್ ಪರ 5934 ರನ್ ಗಳಿಸಿದ್ದಾರೆ.
(Surjeet )(4 / 8)
ಹಾಗಾದರೆ ಐಪಿಎಲ್‌ನಲ್ಲಿ ತಂಡವೊಂದರ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಟಾಪ್-5 ಆಟಗಾರರು ಯಾರು? ಇಲ್ಲಿದೆ ವಿವರ.
(Surjeet )(5 / 8)
ಐಪಿಎಲ್ ಅಥವಾ ಯಾವುದೇ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಒಂದೇ ತಂಡಕ್ಕೆ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಐಪಿಎಲ್‌ನಲ್ಲಿ ಆರ್‌ಸಿಬಿ ಪರ 8871 ರನ್ ಗಳಿಸಿದ್ದಾರೆ.
(PTI)(6 / 8)
ಐಪಿಎಲ್‌ನಲ್ಲಿ ಒಂದೇ ತಂಡಕ್ಕೆ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸುರೇಶ್ ರೈನಾ ಮೂರನೇ ಸ್ಥಾನದಲ್ಲಿದ್ದಾರೆ. ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ 5269 ರನ್ ಗಳಿಸಿದ್ದಾರೆ.
(7 / 8)
ಐಪಿಎಲ್ 2025ರ ಪ್ಲೇಆಫ್ ರೇಸ್‌ನಿಂದ ಹೊರಗುಳಿದಿರುವ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಅವರು ಸಿಎಸ್‌ಕೆ ಪರ 5269 ರನ್ ಗಳಿಸಿದ್ದಾರೆ.
(AFP)ಇತರ ಗ್ಯಾಲರಿಗಳು