ವಿಕೆಟ್ ಬೇಟೆಯಲ್ಲಿ ತ್ರಿಶತಕ ಬಾರಿಸಿದ ಜಸ್ಪೀತ್ ಬುಮ್ರಾ; ಚಹಲ್, ಭುವಿ, ಅಶ್ವಿನ್ ಸಾಲಿಗೆ ನಿಂತ ವೇಗಿ
ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತೊಂದು ಮೈಲಿಗಲ್ಲನ್ನು ಮುಟ್ಟಿದ್ದಾರೆ. ಟಿ20 ಕ್ರಿಕೆಟ್ನಲ್ಲಿ 300ನೇ ವಿಕೆಟ್ ಮಿಂಚಿದರು. ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
(1 / 9)
ಟಿ20 ಕ್ರಿಕೆಟ್ ಇತಿಹಾಸದಲ್ಲಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅವರು 300 ವಿಕೆಟ್ಗಳ ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡಿದ ಭಾರತದ 4ನೇ ಬೌಲರ್‌ಗಳ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
(AP)(2 / 9)
ಏಪ್ರಿಲ್ 23ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಬುಮ್ರಾ 1 ವಿಕೆಟ್ ಉರುಳಿಸುವ ಮೂಲಕ ಈ ಮೈಲಿಗಲ್ಲು ನೆಟ್ಟರು. ಟಿ20ಯಲ್ಲಿ 300 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಯುಜ್ವೇಂದ್ರ ಚಹಲ್ ಅಗ್ರಸ್ಥಾನದಲ್ಲಿದ್ದಾರೆ.
(AFP)(3 / 9)
373 ವಿಕೆಟ್ಗಳೊಂದೊಗೆ ಚಹಲ್ ಅಗ್ರಸ್ಥಾನ ಪಡೆದಿದ್ದರೆ, ಭುವನೇಶ್ವರ್ ಕುಮಾರ್ 2ನೇ ಸ್ಥಾನದಲ್ಲಿದ್ದಾರೆ. ಭುವಿ 318 ವಿಕೆಟ್ ಉರುಳಿಸಿದ್ದಾರೆ. 315 ವಿಕೆಟ್ ಪಡೆದಿರುವ ಅಶ್ವಿನ್ 3ನೇ ಸ್ಥಾನ, ಜಸ್ಪ್ರೀತ್ ಬುಮ್ರಾ 4ನೇ ಸ್ಥಾನ ಪಡೆದಿದ್ದಾರೆ.
(AFP)(4 / 9)
ಆದರೆ ಇಡೀ ವಿಶ್ವದಲ್ಲಿ ಅತಿ ಹೆಚ್ಚು ಟಿ20 ವಿಕೆಟ್ ಪಡೆದವರ ಪಟ್ಟಿಯಲ್ಲಿ ರಶೀದ್ ಖಾನ್ ಅಗ್ರಸ್ಥಾನದಲ್ಲಿದ್ದಾರೆ. ವಿಪರ್ಯಾಸ ಅಂದರೆ ವಿಶ್ವದ ಟಾಪ್-10 ಟಿ20 ಬೌಲರ್ಗಳಲ್ಲಿ ಬೌಲರ್ ಕೂಡ ಸ್ಥಾನ ಪಡೆದಿಲ್ಲ. ಚಹಲ್ 11 ನೇ ಸ್ಥಾನದಲ್ಲಿದ್ದಾರೆ. (ಏಪ್ರಿಲ್ 24, 2025ರ ಡೇಟಾ)
(Surjeet Yadav)(5 / 9)
ಅಫ್ಘಾನಿಸ್ತಾನದ ಅಪಾಯಕಾರಿ ಸ್ಪಿನ್ನರ್ ರಶೀದ್ ಖಾನ್ 640 ವಿಕೆಟ್‌ಗಳೊಂದಿಗೆ ಟಿ20ಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. ಅವರು ಇಲ್ಲಿವರೆಗೆ 470 ಟಿ20 ಪಂದ್ಯ ಆಡಿದ್ದಾರೆ. (2025ರ ಏಪ್ರಿಲ್ 24ರ ತನಕ ಮಾಹಿತಿ)
(REUTERS)(6 / 9)
ವೆಸ್ಟ್ ಇಂಡೀಸ್ನ ಡ್ವೇನ್ ಬ್ರಾವೋ ಟಿ20ಯಲ್ಲಿ ವಿಶ್ವದ ಎರಡನೇ ಅತ್ಯಂತ ಯಶಸ್ವಿ ಬೌಲರ್. ಅವರು 582 ಪಂದ್ಯಗಳಲ್ಲಿ 546 ವಿಕೆಟ್‌ಗಳನ್ನು ಪಡೆದಿದ್ದಾರೆ.
(REUTERS)(7 / 9)
ಸುನಿಲ್ ನರೈನ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರು 543 ಟಿ20 ಪಂದ್ಯಗಳಲ್ಲಿ 581 ವಿಕೆಟ್ ಪಡೆದಿದ್ದಾರೆ. (2025ರ ಏಪ್ರಿಲ್ 24ರ ತನಕ ಮಾಹಿತಿ)
(PTI)(8 / 9)
ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಅವರು 429 ಪಂದ್ಯಗಳಲ್ಲಿ 533 ವಿಕೆಟ್ ಪಡೆದಿದ್ದಾರೆ. (2025ರ ಏಪ್ರಿಲ್ 24ರ ತನಕ ಮಾಹಿತಿ)
ಇತರ ಗ್ಯಾಲರಿಗಳು