ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಕ್ರಿಕೆಟಿಗರು; 11 ವರ್ಷಗಳ ದಾಖಲೆ ಮುರಿದ ಧೋನಿ
- ಐಪಿಎಲ್ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಹಿರಿಯ ಟಾಪ್ -5 ಕ್ರಿಕೆಟಿಗರ ಪಟ್ಟಿಯಲ್ಲಿ ಇಬ್ಬರು ಭಾರತೀಯರು ಇದ್ದಾರೆ. ಎಂಎಸ್ ಧೋನಿ 11 ವರ್ಷಗಳ ದಾಖಲೆ ಮುರಿದು ದಾಖಲೆ ನಿರ್ಮಿಸಿದ್ದಾರೆ.
- ಐಪಿಎಲ್ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಹಿರಿಯ ಟಾಪ್ -5 ಕ್ರಿಕೆಟಿಗರ ಪಟ್ಟಿಯಲ್ಲಿ ಇಬ್ಬರು ಭಾರತೀಯರು ಇದ್ದಾರೆ. ಎಂಎಸ್ ಧೋನಿ 11 ವರ್ಷಗಳ ದಾಖಲೆ ಮುರಿದು ದಾಖಲೆ ನಿರ್ಮಿಸಿದ್ದಾರೆ.
(1 / 7)
2025ರ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ, 11 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 26 ರನ್ ಗಳಿಸಿ ಚೆನ್ನೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
(HT_PRINT)(2 / 7)
ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪರ್ ಹಿಂದೆ ನಿಂತು ಒಂದು ಕ್ಯಾಚ್, ಒಂದು ಸ್ಟಂಪ್ ಮತ್ತು ಒಂದು ರನೌಟ್ ಮಾಡಿದ ಪರಿಣಾಮ ಧೋನಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಇದರೊಂದಿಗೆ 11 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
(HT_PRINT)(3 / 7)
ಧೋನಿ ಐಪಿಎಲ್ ಇತಿಹಾಸದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಹಿರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು 43 ವರ್ಷ 261 ದಿನಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಧೋನಿ ಬಳಿಕ ಐಪಿಎಲ್ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಹಿರಿಯ ಆಟಗಾರರು ಯಾರು?
(ANI)(4 / 7)
ಧೋನಿ ಅವರು ಪ್ರವೀಣ್ ತಾಂಬೆ ದಾಖಲೆ ಮುರಿದಿದ್ದಾರೆ. ಪ್ರವೀಣ್ 42 ವರ್ಷ 208 ದಿನಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದರು. ರಾಜಸ್ಥಾನ್ ರಾಯಲ್ಸ್ ತಂಡದ ಮಾಜಿ ಸ್ಪಿನ್ನರ್ ಐಪಿಎಲ್ 2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪ್ರಶಸ್ತಿ ಗೆದ್ದಿದ್ದರು.
(BCCI)(5 / 7)
ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮಾಜಿ ನಾಯಕ ಮತ್ತು ಶ್ರೇಷ್ಠ ಸ್ಪಿನ್ನರ್ ಶೇನ್ ವಾರ್ನ್ ಇದ್ದಾರೆ. ವಾರ್ನ್ 41 ವರ್ಷ 223 ದಿನಗಳಲ್ಲಿ ಪಂದ್ಯ ಪುರುಷೋತ್ತಮರಾದರು. ಅವರು ಐಪಿಎಲ್ 2011 ರಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ವಿರುದ್ಧ ಪ್ರಶಸ್ತಿಯನ್ನು ಗೆದ್ದರು.
(BCCI)(6 / 7)
ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಡಮ್ ಗಿಲ್‌ಕ್ರಿಸ್ಟ್ 41 ವರ್ಷ ಮತ್ತು 181 ದಿನಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರು. ಅವರು ಐಪಿಎಲ್ 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಈ ಸಾಧನೆ ಮಾಡಿದ್ದರು. ಆಗ ಅವರು ಕಿಂಗ್ಸ್ ಇಲೆವೆನ್ ಪಂಜಾಬ್‌ನಲ್ಲಿದ್ದರು.
(X)ಇತರ ಗ್ಯಾಲರಿಗಳು