ಐಪಿಎಲ್ 2025 ಮೆಗಾ ಹರಾಜು ಪಟ್ಟಿಯಲ್ಲಿರುವ ಟಾಪ್ 5 ಕಿರಿಯ ಆಟಗಾರರಿವರು; ಇಬ್ಬರು ವಿದೇಶಿಗರು
- IPL 2025 Mega Auction: ಐಪಿಎಲ್ 2025ರ ಮೆಗಾ ಹರಾಜಿಗೆ ಕೆಲವೇ ದಿನಗಳು ಬಾಕಿ ಇವೆ. ಈ ಬಾರಿ ಹರಾಜಿಗೆ ಹೆಸರು ನೋಂದಾಯಿಸಿರುವ ಆಟಗಾರರ ಪೈಕಿ, ವೈಭವ್ ಸೂರ್ಯವಂಶಿ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಇವರಿಗೆ ಇನ್ನೂ 13 ವರ್ಷ ವಯಸ್ಸು. ಈ ಬಾರಿಯ ಐಪಿಎಲ್ ಆಕ್ಷನ್‌ನಲ್ಲಿರುವ ಅತ್ಯಂತ ಕಿರಿಯ ಆಟಗಾರರ ಪಟ್ಟಿ ಇಲ್ಲಿದೆ.

(1 / 6)
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಯುವ ತಾರೆಗಳು ವಿವಿಧ ತಂಡಗಳ ಪಾಲಾಗುವ ನಿರೀಕ್ಷೆಯಲ್ಲಿದ್ದಾರೆ. ವಯಸ್ಸಿನಲ್ಲಿ ತುಂಬಾ ಕಿರಿಯಗಿರುವ ಕೆಲವೇ ಆಟಗಾರರಿದ್ದಾರೆ. ಹರಾಜಿನಲ್ಲಿ ಕಿರಿಯರಾದ ಆ ಐದು ಆಟಗಾರರ ಬಗ್ಗೆ ತಿಳಿಯೋಣ. ಇನ್ನೂ 14 ವರ್ಷವೂ ಆಗದ ಒಬ್ಬ ಆಟಗಾರನಿದ್ದಾನೆ. ಉಳಿದಂತೆ 18 ವರ್ಷಕ್ಕಿಂತ ಮೇಲ್ಪಟ್ಟ ಆಟಗಾರರಿದ್ದಾರೆ. ಇವರಲ್ಲಿ ಮೂವರು ಭಾರತೀಯರು ಮತ್ತು ಇಬ್ಬರು ವಿದೇಶಿ ಆಟಗಾರರು ಸೇರಿದ್ದಾರೆ.
(2 / 6)
ಘಜನ್‌ಫರ್: ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಇರುವ ಕಿರಿಯ ಆಟಗಾರರ ಪಟ್ಟಿಯಲ್ಲಿ ಅಫ್ಘಾನಿಸ್ತಾನದ ಯುವ ಸ್ಪಿನ್ನರ್ ಅಲ್ಲಾಹ್ ಗಜನ್‌ಫರ್ ಐದನೇ ಸ್ಥಾನದಲ್ಲಿದ್ದಾರೆ. 2024ರ ನವೆಂಬರ್ 18ರ ವೇಳೆಗೆ ಅವರ ವಯಸ್ಸು 18 ವರ್ಷ 7 ತಿಂಗಳು 29 ದಿನಗಳು.
(3 / 6)
ಮಫಾಕಾ ನಾಲ್ಕನೇ ಕಿರಿಯ ಆಟಗಾರ: ದಕ್ಷಿಣ ಆಫ್ರಿಕಾದ ಕ್ವೆನ್ ಮಫಾಕಾ, ಐಪಿಎಲ್ ಹರಾಜಿನಲ್ಲಿ ಸೇರ್ಪಡೆಗೊಂಡ ಕಿರಿಯ ತಾರೆಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರ ವಯಸ್ಸು 18 ವರ್ಷ ಮತ್ತು 7 ತಿಂಗಳು. ಕಳೆದ ಆವೃತ್ತಿಯಲ್ಲಿ ಮಫಾಕಾ ಮುಂಬೈ ಇಂಡಿಯನ್ಸ್ ಪರ ಆಡಿದ್ದಾರೆ.
(4 / 6)
ಆಂಡ್ರೆ ಮೂರನೇ ಸ್ಥಾನ: ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಸೇರ್ಪಡೆಗೊಂಡ ಮೂರನೇ ಕಿರಿಯ ಆಟಗಾರ ಆಂಡ್ರೆ ಸಿದ್ಧಾರ್ಥ್. ತಮಿಳುನಾಡು ಪರ ದೇಶೀಯ ಕ್ರಿಕೆಟ್ ಆಡುವ ಈ ಆಟಗಾರನ ವಯಸ್ಸು 18 ವರ್ಷ, 2 ತಿಂಗಳು.
(5 / 6)
ಆಯುಷ್ ಎರಡನೇ ಕಿರಿಯ ಆಟಗಾರ: ಮುಂಬೈ ಪರ ದೇಶೀಯ ಕ್ರಿಕೆಟ್ ಆಡುವ ಆಯುಷ್ ಮ್ಹಾತ್ರೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇವರು ಹರಾಜಿನಲ್ಲಿರುವ ಎರಡನೇ ಅತ್ಯಂತ ಕಿರಿಯ ಆಟಗಾರ. ಅವರ ವಯಸ್ಸು 17 ವರ್ಷ ಹಾಗೂ 4 ತಿಂಗಳು.
ಇತರ ಗ್ಯಾಲರಿಗಳು