ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಟಾಪ್-7 ಅತ್ಯಂತ ಕಿರಿಯ ನಾಯಕರು; ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
ಭಾರತ ಟೆಸ್ಟ್ ತಂಡದ ನೂತನ ನಾಯಕನಾಗಿ ಶುಭ್ಮನ್ ಗಿಲ್ ಆಯ್ಕೆಯಾಗಿದ್ದಾರೆ. ಇವರು ಭಾರತದ 37ನೇ ಟೆಸ್ಟ್ ನಾಯಕ. ಟೆಸ್ಟ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಟಾಪ್ 7 ಭಾರತೀಯ ನಾಯಕರನ್ನು ನೋಡೋಣ.
(1 / 7)
ಮನ್ಸೂರ್ ಅಲಿ ಖಾನ್ ಪಟೌಡಿ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಅತ್ಯಂತ ಕಿರಿಯ ನಾಯಕ ಎಂಬ ದಾಖಲೆಯನ್ನು ಹೊಂದಿದ್ದಾರೆ. ಪಟೌಡಿ 21 ವರ್ಷ 77 ದಿನಗಳಲ್ಲಿ ನಾಯಕತ್ವ ಪಡೆದರು. ಅವರು 1962ರಲ್ಲಿ ಬ್ರಿಡ್ಜ್ಟೌನ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಬಾರಿಗೆ ನಾಯಕತ್ವ ವಹಿಸಿದ್ದರು. ಇವರು 40 ಪಂದ್ಯಗಳನ್ನು ಮುನ್ನಡೆಸಿದ್ದರು. ಆದರೆ ಗೆದ್ದಿದ್ದು 9ರಲ್ಲಿ ಮಾತ್ರ.
(X)(2 / 7)
ಸಚಿನ್ ತೆಂಡೂಲ್ಕರ್ ಅವರು 23 ವರ್ಷಗಳು, 169 ದಿನಗಳಲ್ಲಿ ಟೆಸ್ಟ್ ನಾಯಕತ್ವ ಪಡೆದರು. ಎರಡನೇ ಅತ್ಯಂತ ಕಿರಿಯ ಟೆಸ್ಟ್ ನಾಯಕನಾದ ಕೊಹ್ಲಿ, ದೆಹಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಮೊದಲ ಬಾರಿಗೆ ಮುನ್ನಡೆಸಿದ್ದರು. ತಾನು 25 ಟೆಸ್ಟ್ಗಳಿಗೆ ನಾಯಕತ್ವ ವಹಿಸಿದ್ದರೂ ಗೆದ್ದಿದ್ದು ಮಾತ್ರ 4 ಪಂದ್ಯ.
(ICC)(3 / 7)
1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಅವರು ತಮ್ಮ 24 ವರ್ಷ, 48 ದಿನಗಳ ವಯಸ್ಸಿನಲ್ಲಿ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಿದ್ದರು. 1983ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ನಲ್ಲಿ ಮೊದಲ ಬಾರಿಗೆ ನಾಯಕತ್ವ ವಹಿಸಿದ್ದರು.
(ICC)(4 / 7)
ರವಿಶಾಸ್ತ್ರಿ - 25 ವರ್ಷ, 229 ದಿನಗಳಲ್ಲಿ ತಮ್ಮ ವೃತ್ತಿಜೀವನದಲ್ಲಿ ಒಂದು ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಆಗ ಅವರಿಗೆ 25 ವರ್ಷ ವಯಸ್ಸಾಗಿತ್ತು. 1988ರಲ್ಲಿ ಚೆನ್ನೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶಾಸ್ತ್ರಿ ತಮ್ಮ 25ನೇ ವಯಸ್ಸಿನಲ್ಲಿ ನಾಯಕನಾಗಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು.
(X)(5 / 7)
ಸ್ಟಾರ್ ಬ್ಯಾಟರ್ ಶುಭ್ಮನ್ ಗಿಲ್ 5ನೇ ಸ್ಥಾನದಲ್ಲಿದ್ದಾರೆ. ಗಿಲ್ 25 ವರ್ಷ 9 ತಿಂಗಳ ವಯಸ್ಸಿನಲ್ಲಿ ಭಾರತದ ಟೆಸ್ಟ್ ನಾಯಕರಾಗಿ ನೇಮಕಗೊಂಡಿದ್ದಾರೆ. ಇವರು ಜೂನ್ 20ರಂದು ತಮ್ಮ ಮೊದಲ ಪಂದ್ಯಕ್ಕೆ ನಾಯಕತ್ವ ವಹಿಸಲಿದ್ದಾರೆ. ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇದರೊಂದಿಗೆ ಕೊಹ್ಲಿ, ಗವಾಸ್ಕರ್ ದಾಖಲೆ ಮುರಿದು ಟಾಪ್-5 ಕಿರಿಯ ನಾಯಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
(PTI)(6 / 7)
ವಿರಾಟ್ ಕೊಹ್ಲಿ 26 ವರ್ಷ, 34 ದಿನಗಳಲ್ಲಿ ಚೊಚ್ಚಲ ಟೆಸ್ಟ್ ನಾಯಕತ್ವ ಪಡೆದಿದ್ದರು. ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ತಮ್ಮ ನಾಯಕತ್ವದ ಚೊಚ್ಚಲ ಪಂದ್ಯದಲ್ಲಿ ಅವರು 2 ಶತಕಗಳನ್ನೂ ಗಳಿಸಿದರು. ಕೊಹ್ಲಿ 68 ಪಂದ್ಯಗಳಲ್ಲಿ 40 ಗೆಲುವುಗಳೊಂದಿಗೆ ಭಾರತದ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ.
ಇತರ ಗ್ಯಾಲರಿಗಳು