ವಿರಾಟ್ ಕೊಹ್ಲಿ To ಜಸ್ಪ್ರೀತ್ ಬುಮ್ರಾ; ಭಾರತದ ಈ ಕ್ರಿಕೆಟಿಗರು ತಮ್ಮ ಪತ್ನಿಯರಿಗಿಂತ ಕಿರಿಯರು!
- Cricketers Who Married Older Women: ಭಾರತೀಯ ಕ್ರಿಕೆಟ್ನ ಅನೇಕ ಆಟಗಾರರು ತಮಗಿಂತ ಹಿರಿಯರನ್ನು ಸಂಗಾತಿಗಳನ್ನಾಗಿ ಮಾಡಿಕೊಂಡಿದ್ದಾರೆ. ಪತ್ನಿಯರಿಗಿಂತ ಕಿರಿಯರಾದ 8 ಕ್ರಿಕೆಟಿಗರ ಬಗ್ಗೆ ತಿಳಿಯಿರಿ.
- Cricketers Who Married Older Women: ಭಾರತೀಯ ಕ್ರಿಕೆಟ್ನ ಅನೇಕ ಆಟಗಾರರು ತಮಗಿಂತ ಹಿರಿಯರನ್ನು ಸಂಗಾತಿಗಳನ್ನಾಗಿ ಮಾಡಿಕೊಂಡಿದ್ದಾರೆ. ಪತ್ನಿಯರಿಗಿಂತ ಕಿರಿಯರಾದ 8 ಕ್ರಿಕೆಟಿಗರ ಬಗ್ಗೆ ತಿಳಿಯಿರಿ.
(1 / 8)
ಟೀಮ್ ಇಂಡಿಯಾ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ. ಕೊಹ್ಲಿಗಿಂತ ಅನುಷ್ಕಾ 6 ತಿಂಗಳು ದೊಡ್ಡವರು. ಇಬ್ಬರೂ ಡಿಸೆಂಬರ್ 17, 2017 ರಂದು ವಿವಾಹವಾದರು. ಈ ದಂಪತಿಗೆ ವಮಿಕಾ, ಅಕಾಯ್ ಎಂಬ ಇಬ್ಬರು ಮಕ್ಕಳಿದ್ದಾರೆ.
(Instagram)(2 / 8)
ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪತ್ನಿಯ ಹೆಸರು ಅಂಜಲಿ. ಸಚಿನ್ಗಿಂತ ಅಂಜಲಿ 6 ವರ್ಷ ದೊಡ್ಡವರು. ಇಬ್ಬರೂ 1995ರಲ್ಲಿ ವಿವಾಹವಾದರು. ಎಂಬಿಬಿಎಸ್ ಪದವಿ ಪಡೆದಿದ್ದ ಅಂಜಲಿ ವೈದ್ಯೆಯೂ ಹೌದು. ಮಕ್ಕಳ ಹೆಸರು ಸಾರಾ ಮತ್ತು ಅರ್ಜುನ್.
(PTI)(3 / 8)
ಭಾರತದ ಮಾಜಿ ಬ್ಯಾಟ್ಸ್‌ಮನ್ ಸುರೇಶ್ ರೈನಾ ಅವರ ಪತ್ನಿ ಪ್ರಿಯಾಂಕಾ ಚೌಧರಿ ಅವರಿಗಿಂತ ಐದು ತಿಂಗಳು 9 ದಿನ ದೊಡ್ಡವರು. ರೈನಾ ಏಪ್ರಿಲ್ 2015ರಲ್ಲಿ ಪ್ರಿಯಾಂಕಾ ಅವರನ್ನು ವಿವಾಹವಾದರು.
(Instagram)(4 / 8)
ಆಲ್‌ರೌಂಡರ್ ಶಿವಂ ದುಬೆ ಅವರ ಪತ್ನಿಯ ಹೆಸರು ಅಂಜುಮ್ ಖಾನ್. ದುಬೆ ಅವರಿಗಿಂತ ಅಂಜುಮ್ 6 ವರ್ಷ 9 ತಿಂಗಳು ದೊಡ್ಡವರು. ಇಬ್ಬರೂ 2021 ರಲ್ಲಿ ವಿವಾಹವಾದರು.
(5 / 8)
ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರ ಪತ್ನಿಯ ಹೆಸರು ಶೀತಲ್ ಗೌತಮ್. ಉತ್ತಪ್ಪ ಅವರಿಗಿಂತ ಆಕೆ ನಾಲ್ಕು ವರ್ಷ ದೊಡ್ಡವರು. ಇಬ್ಬರೂ 2016 ರಲ್ಲಿ ವಿವಾಹವಾದರು. ಶೀತಲ್ ಒಬ್ಬ ಟೆನಿಸ್ ಆಟಗಾರ್ತಿ.
(6 / 8)
ಭಾರತದ ಮಾಜಿ ದಂತಕಥೆ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರ ಪತ್ನಿಯ ಹೆಸರು ಚೇತನಾ ರಾಮತೀರ್ಥ. ವರದಿಗಳ ಪ್ರಕಾರ, ಚೇತನಾ ಕುಂಬ್ಳೆಗಿಂತ ಎರಡು ವರ್ಷ ದೊಡ್ಡವರು. 1999 ರಲ್ಲಿ ಇಬ್ಬರಿಗೂ ಮದುವೆಯಾಗಿತ್ತು. ಇದು ಚೇತನಾಳ ಎರಡನೇ ಮದುವೆಯಾಗಿತ್ತು.
(7 / 8)
ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ವಿಚ್ಛೇದಿತ ಜಯಂತಿ ಅವರನ್ನು ವಿವಾಹವಾದರು. ಆಕೆ ವೆಂಕಟೇಶ್ಗಿಂತ 9 ವರ್ಷ ದೊಡ್ಡವರು. ಇಬ್ಬರೂ 1996 ರಲ್ಲಿ ವಿವಾಹವಾಗಿದ್ದರು.
ಇತರ ಗ್ಯಾಲರಿಗಳು