ಮುಂಬೈ ವಿರುದ್ಧ ನಿಧಾನವಾಗಿ ಆಡಿದರೂ ಐಪಿಎಲ್​ನಲ್ಲಿ ಚರಿತ್ರೆ ಸೃಷ್ಟಿಸಿದ ಟ್ರಾವಿಸ್ ಹೆಡ್, ಏನದು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮುಂಬೈ ವಿರುದ್ಧ ನಿಧಾನವಾಗಿ ಆಡಿದರೂ ಐಪಿಎಲ್​ನಲ್ಲಿ ಚರಿತ್ರೆ ಸೃಷ್ಟಿಸಿದ ಟ್ರಾವಿಸ್ ಹೆಡ್, ಏನದು?

ಮುಂಬೈ ವಿರುದ್ಧ ನಿಧಾನವಾಗಿ ಆಡಿದರೂ ಐಪಿಎಲ್​ನಲ್ಲಿ ಚರಿತ್ರೆ ಸೃಷ್ಟಿಸಿದ ಟ್ರಾವಿಸ್ ಹೆಡ್, ಏನದು?

  • Travis Head: ಮುಂಬೈ ಇಂಡಿಯನ್ಸ್ ವಿರುದ್ಧ 29 ಎಸೆತಗಳಲ್ಲಿ 3 ಬೌಂಡರಿ ಸಹಿತ 28 ರನ್ ಗಳಿಸಿದ ಸನ್​ರೈಸರ್ಸ್ ಹೈದರಾಬಾದ್ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ನೂತನ ದಾಖಲೆ ನಿರ್ಮಿಸಿದ್ದಾರೆ.

ಸನ್​ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟರ್​ ಟ್ರಾವಿಸ್ ಹೆಡ್ ಗುರುವಾರ ನಡೆದ 33ನೇ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಿಧಾನಗತಿಯ ಇನ್ನಿಂಗ್ಸ್ ಆಡಿದರೂ ದಾಖಲೆ ನಿರ್ಮಿಸಿದ್ದಾರೆ.
icon

(1 / 6)

(AFP)

ವಾಂಖೆಡೆ ಕ್ರೀಡಾಂಗಣದಲ್ಲಿ ಜರುಗಿದ ಮಹತ್ವದ ಪಂದ್ಯದಲ್ಲಿ 29 ಎಸೆತಗಳಲ್ಲಿ 3 ಬೌಂಡರಿ ಸಹಿತ 28 ರನ್ ಗಳಿಸಿದರೂ ದೊಡ್ಡ ಸಾಧನೆ ಮಾಡಿದ್ದಾರೆ. ಐಪಿಎಲ್​ನಲ್ಲಿ ವೇಗವಾಗಿ 1000 ರನ್ ಗಳಿಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
icon

(2 / 6)

(Hindustan Times)

ಇದರೊಂದಿಗೆ ಐಪಿಎಲ್​ನಲ್ಲಿ ಹೆಡ್​​ಗೂ ಮುನ್ನ ಈ ಸಾಧನೆ ಮಾಡಿದ್ದ ಹೆನ್ರಿಚ್ ಕ್ಲಾಸೆನ್ ಅವರನ್ನೂ ಹಿಂದಿಕ್ಕಿದ್ದಾರೆ. ಟ್ರಾವಿಸ್ ಹೆಡ್ 575 ಎಸೆತಗಳಲ್ಲಿ 1000 ರನ್ ಪೂರೈಸಿದರು.
icon

(3 / 6)

(Surjeet Yadav)

ಕೋಲ್ಕತಾ ನೈಟ್ ರೈಡರ್ಸ್​​ ಸ್ಟಾರ್ ಬ್ಯಾಟರ್ ಆಂಡ್ರೆ ರಸೆಲ್ 545 ಎಸೆತಗಳಲ್ಲಿ 1,000 ರನ್ ಗಳಿಸಿದ್ದು, ಐಪಿಎಲ್ ಇತಿಹಾಸದಲ್ಲಿ ವೇಗವಾಗಿ 1,000 ರನ್ ಗಳಿಸಿದ ದಾಖಲೆಯಾಗಿದೆ.
icon

(4 / 6)

ಕೋಲ್ಕತಾ ನೈಟ್ ರೈಡರ್ಸ್​​ ಸ್ಟಾರ್ ಬ್ಯಾಟರ್ ಆಂಡ್ರೆ ರಸೆಲ್ 545 ಎಸೆತಗಳಲ್ಲಿ 1,000 ರನ್ ಗಳಿಸಿದ್ದು, ಐಪಿಎಲ್ ಇತಿಹಾಸದಲ್ಲಿ ವೇಗವಾಗಿ 1,000 ರನ್ ಗಳಿಸಿದ ದಾಖಲೆಯಾಗಿದೆ.
(Hindustan Times)

ಸನ್​ರೈಸರ್ಸ್ ಹೈದರಾಬಾದ್​ನ ಹೆನ್ರಿಚ್​ ಕ್ಲಾಸೆನ್ 594 ಎಸೆತಗಳಲ್ಲಿ ಈ ಸಾಧನೆ ಮಾಡಿದರು. ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ 604 ಎಸೆತಗಳಲ್ಲಿ ನಾಲ್ಕಂಕಿ ರನ್ ದಾಟಿದ ಮೊದಲ ಭಾರತೀಯ ಮತ್ತು ಒಟ್ಟಾರೆ 4ನೇ ಆಟಗಾರ ಎನಿಸಿದ್ದಾರೆ.
icon

(5 / 6)

ಗ್ಲೆನ್ ಮ್ಯಾಕ್ಸ್​ವೆಲ್ 610 ಎಸೆತಗಳಲ್ಲಿ ಈ ಸಾಧನೆ ಮಾಡಿದರೆ, ಕ್ರಿಸ್ ಗೇಲ್ 615 ಎಸೆತಗಳಲ್ಲಿ 1,000 ರನ್ ಪೂರೈಸಿದರು. ಯೂಸುಫ್ ಪಠಾಣ್ ಮತ್ತು ಸುನಿಲ್ ನರೈನ್ ಅವರು ತಲಾ 617 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.
icon

(6 / 6)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು