ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲೇ ವಿರಾಟ್ ಕೊಹ್ಲಿ ದಾಖಲೆ; ಈ ಸಾಧನೆ ಮಾಡಿದ ಮೊದಲಿಗ
- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲೇ ದಾಖಲೆ ನಿರ್ಮಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 1,000 ರನ್ ಗಡಿ ದಾಡಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ 38 ರನ್ ಗಳಿಸುವುದರೊಂದಿಗೆ ಈ ದಾಖಲೆ ನಿರ್ಮಿಸಿದ್ದಾರೆ.
- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲೇ ದಾಖಲೆ ನಿರ್ಮಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 1,000 ರನ್ ಗಡಿ ದಾಡಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ 38 ರನ್ ಗಳಿಸುವುದರೊಂದಿಗೆ ಈ ದಾಖಲೆ ನಿರ್ಮಿಸಿದ್ದಾರೆ.
(1 / 7)
ಈ ಪಂದ್ಯಕ್ಕೂ ಮುನ್ನ ಕೆಕೆಆರ್ ವಿರುದ್ಧ ಕೊಹ್ಲಿ 31 ಇನ್ನಿಂಗ್ಸ್‌ಗಳಿಂದ 38.48 ಸರಾಸರಿಯಲ್ಲಿ 962 ರನ್ ಗಳಿಸಿದ್ದರು. ಇದರಲ್ಲಿ ಒಂದು ಶತಕ ಮತ್ತು ಆರು ಅರ್ಧಶತಕಗಳು ಸೇರಿದ್ದವು. ಇಂದಿನ ಪಂದ್ಯದ 38 ರನ್ ಗಳಿಸುವ ಮೂಲಕ 1000 ರನ್ ಗಡಿ ದಾಟಿದ್ದಾರೆ. ಪಂದ್ಯದಲ್ಲಿ ಸಿಡಿದ ಕಿಂಗ್ ಆಕರ್ಷಕ ಅರ್ಧಶತಕ ಗಳಿಸಿದರು.
(REUTERS)(2 / 7)
ಕೆಕೆಆರ್ ವಿರುದ್ಧ 28 ಇನ್ನಿಂಗ್ಸ್‌ಗಳಲ್ಲಿ 43.72ರ ಸರಾಸರಿಯಲ್ಲಿ 1,093 ರನ್ ಗಳಿಸಿರುವ ಡೇವಿಡ್ ವಾರ್ನರ್ ಅಗ್ರ ಸ್ಥಾನದಲ್ಲಿದ್ದಾರೆ. ವಾರ್ನರ್ ಎರಡು ಶತಕ ಮತ್ತು ಆರು ಅರ್ಧಶತಕಗಳನ್ನು ಸಿಡಿಸಿದ್ದಾರೆ.
(IPL)(3 / 7)
ಮುಂಬೈ ಇಂಡಿಯನ್ಸ್ ತಂಡದ ರೋಹಿತ್ ಶರ್ಮಾ 34 ಇನ್ನಿಂಗ್ಸ್‌ಗಳಿಂದ 39.62ರ ಸರಾಸರಿಯಲ್ಲಿ 1,070 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಆರು ಅರ್ಧಶತಕಗಳು ಸೇರಿವೆ.
(PTI)(4 / 7)
ಕೊಹ್ಲಿ ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ 1,000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಇದೀಗ ಕೆಕೆಆರ್ ಸೇರಿ ನಾಲ್ಕು ತಂಡಗಳ ವಿರುದ್ಧ ಈ ಸಾಧನೆ ವಿಸ್ತರಿಸಿದ್ದಾರೆ.
(REUTERS)(5 / 7)
ಐಪಿಎಲ್ ಇತಿಹಾಸದಲ್ಲಿ ಯಾವುದೇ ಬ್ಯಾಟ್ಸ್‌ಮನ್ ಎರಡಕ್ಕಿಂತ ಹೆಚ್ಚು ತಂಡಗಳ ವಿರುದ್ಧ 1,000 ಕ್ಕೂ ಹೆಚ್ಚು ರನ್ ಗಳಿಸಿಲ್ಲ. ವಿರಾಟ್ ಕೊಹ್ಲಿ ಮಾತ್ರ 4 ತಂಡಗಳ ವಿರುದ್ಧ 1000ಕ್ಕೂ ಹೆಚ್ಚು ರನ್ ಸಿಡಿಸಿದ್ದಾರೆ.
(REUTERS)(6 / 7)
ಡೇವಿಡ್ ವಾರ್ನರ್ ಕೆಕೆಆರ್ ಜೊತೆಗೆ ಪಂಜಾಬ್ ಕಿಂಗ್ಸ್ ವಿರುದ್ಧ ಈ ಸಾಧನೆ ಮಾಡಿದ್ದಾರೆ. ರೋಹಿತ್ ಶರ್ಮಾ ಕೆಕೆಆರ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಈ ಸಾಧನೆ ಮಾಡಿದ್ದಾರೆ.
(REUTERS)ಇತರ ಗ್ಯಾಲರಿಗಳು