ಟಿ20 ಲೀಗ್ ಇತಿಹಾಸದಲ್ಲೇ ಅತಿ ದೊಡ್ಡ ದಾಖಲೆ ಬರೆದ ವಿರಾಟ್; ಡೇವಿಡ್ ವಾರ್ನರ್ರ ಸಾರ್ವಕಾಲಿಕ ದಾಖಲೆ ಮುರಿದ ಕೊಹ್ಲಿ
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಧಿಕ ಅರ್ಧಶತಕಗಳ ಸಾರ್ವಕಾಲಿಕ ದಾಖಲೆ ಹೊಂದಿದ್ದ ಡೇವಿಡ್ ವಾರ್ನರ್ (62) ಅವರನ್ನು ಹಿಂದಿಕ್ಕಿದ ವಿರಾಟ್ ಕೊಹ್ಲಿ ಚರಿತ್ರೆ ಸೃಷ್ಟಿಸಿದ್ದಾರೆ.
(1 / 7)
ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಆರ್ಸಿಬಿ ಬ್ಯಾಟರ್ ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಹೊಸ ಚರಿತ್ರೆ ಸೃಷ್ಟಿಸಿದ್ದಾರೆ.
(PTI)(2 / 7)
30 ಎಸೆತಗಳಲ್ಲಿ 10 ಬೌಂಡರಿ ಸಹಿತ 54 ರನ್ ಬಾರಿಸಿದ ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಡೇವಿಡ್ ವಾರ್ನರ್ ಅವರ ಅರ್ಧಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಇದಕ್ಕೂ ಮುನ್ನ ವಾರ್ನರ್ರ ಸಾರ್ವಕಾಲಿಕ ಅರ್ಧಶತಕಗಳ ದಾಖಲೆ ಸರಿಗಟ್ಟಿದ್ದರು.
(Surjeet)(3 / 7)
ಶ್ರೀಮಂತ ಲೀಗ್ 63ನೇ ಅರ್ಧಶತಕ ಬಾರಿಸಿ ಕೊಹ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದಾರೆ. ಲೀಗ್ನಲ್ಲಿ ಇಷ್ಟು ಅರ್ಧಶತಕ ಬಾರಿಸಿದ ಮೊದಲ ಆಟಗಾರನೂ ಹೌದು. 62 ಅರ್ಧಶತಕ ಬಾರಿಸಿದ್ದ ವಾರ್ನರ್ ದಾಖಲೆ ಸರಿಗಟ್ಟಿದ್ದ ಕೊಹ್ಲಿ, ಇದೀಗ ಮುರಿದು ಹಾಕಿದ್ದಾರೆ.
(Surjeet)(4 / 7)
ಐಪಿಎಲ್ನಲ್ಲಿ ಒಟ್ಟಾರೆ 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿರುವ ಕೊಹ್ಲಿ 71 ಸಲ 50+ ಸ್ಕೋರ್ (8 ಶತಕಗಳು ಸೇರಿ) ಇದ್ದಾರೆ. ಕೊಹ್ಲಿಗೂ ಮುನ್ನ ಡೇವಿಡ್ ವಾರ್ನರ್ ಈ ದಾಖಲೆ ಹೊಂದಿದ್ದರು. ಇದೇ ಐಪಿಎಲ್ನಲ್ಲಿ ಅವರ ದಾಖಲೆ ಮುರಿದಿದ್ದ ಕೊಹ್ಲಿ, ಮತ್ತೊಂದು ಐತಿಹಾಸಿಕ ದಾಖಲೆ ಹಿಂದಿಕ್ಕಿದ್ದಾರೆ.
(PTI)(5 / 7)
ಅಲ್ಲದೆ, ತಂಡವೊಂದರ ಪರ ಅತಿ ಹೆಚ್ಚು ಅರ್ಧಶತಕ ಬಾರಿಸಿದ ಮತ್ತು ಟಿ20 ಲೀಗ್ ಇತಿಹಾಸದಲ್ಲೇ ಅತಿ ಹೆಚ್ಚು ಹಾಫ್ ಸೆಂಚುರಿ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹಿರಿಮೆಗೂ ಕೊಹ್ಲಿ ಪಾತ್ರರಾಗಿದ್ದಾರೆ.
(6 / 7)
ಇದರ ಜತೆಗೆ ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಒಂದೇ ಫ್ರಾಂಚೈಸಿ ಪರ 9000 ರನ್ ಪೂರೈಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದೀಗ ಕೊಹ್ಲಿ ಆರ್ಸಿಬಿ ಪರ 9000 ರನ್ ಪೂರ್ಣಗೊಳಿಸಿದ್ದಾರೆ.
(AP)ಇತರ ಗ್ಯಾಲರಿಗಳು