ರಾಜಸ್ಥಾನ್ ವಿರುದ್ಧ 70 ರನ್ ಸಿಡಿಸಿ ಆರೆಂಜ್ ಕ್ಯಾಪ್ ರೇಸ್ಗೆ ಧುಮುಕಿದ ವಿರಾಟ್ ಕೊಹ್ಲಿ; ಸದ್ಯಕ್ಕೀಗ ಎರಡನೇ ಸ್ಥಾನ
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಆರ್ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಗ್ರ 2ನೇ ಸ್ಥಾನಕ್ಕೇರಿದ್ದಾರೆ. ಹಾಗಾದರೆ ಈ ಪಟ್ಟಿಯಲ್ಲಿ ಯಾರಿದ್ದಾರೆ? (ಏಪ್ರಿಲ್ 24ರ ತನಕದ ಅಂಕಿ-ಅಂಶ ಇದು)
(1 / 7)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 11 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ. ಆರ್ಸಿಬಿ ಇನ್ನೆರಡು ಪಂದ್ಯ ಗೆದ್ದರೆ ನೇರವಾಗಿ ಪ್ಲೇಫ್ಗೆ ಪ್ರವೇಶಿಸಲಿದೆ. ರಾಜಸ್ಥಾನ್ ವಿರುದ್ಧ 70 ರನ್ಗಳ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ರೇಸ್ಗೆ ಧುಮುಕಿದ್ದಾರೆ.
(AFP)(2 / 7)
ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ 2ರ ಪಟ್ಟಿಯಲ್ಲಿ ಆರ್ಸಿಬಿ ಎರಡನೇ ಸ್ಥಾನದಲ್ಲಿದೆ. ಆರೆಂಜ್ ಕ್ಯಾಪ್ ಪಟ್ಟಿಗೆ ಬರುವುದಾದರೆ, ಗುಜರಾತ್ ಟೈಟಾನ್ಸ್ ಆರಂಭಿಕ ಆಟಗಾರ ಸಾಯಿ ಸುದರ್ಶನ್ 8 ಪಂದ್ಯಗಳಲ್ಲಿ 417 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಸ್ಟ್ರೈಕ್ ರೇಟ್ 152.18. ಅವರು 5 ಅರ್ಧಶತಕ ಬಾರಿಸಿದ್ದಾರೆ.
(Hindustan Times)(3 / 7)
ವಿರಾಟ್ ಕೊಹ್ಲಿ 9 ಪಂದ್ಯಗಳಲ್ಲಿ 392 ರನ್ ಗಳಿಸಿ 2ನೇ ಸ್ಥಾನಕ್ಕೇರಿದ್ದಾರೆ. ಪ್ರಸಕ್ತ ಐಪಿಎಲ್ನಲ್ಲಿ 5ನೇ ಅರ್ಧಶತಕ ಬಾರಿಸಿದ ಕೊಹ್ಲಿ, 144.11ರ ಸ್ಟ್ರೈಕ್ರೇಟ್ನೊಂದಿಗೆ ರನ್ ಗಳಿಸಿದ್ದಾರೆ.
(AFP)(4 / 7)
ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ನಿಕೋಲಸ್ ಪೂರನ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. 9 ಪಂದ್ಯಗಳಿಂದ 377 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 204.89. ಈ ವರ್ಷದ ಐಪಿಎಲ್ನಲ್ಲಿ 4 ಅರ್ಧಶತಕ ಗಳಿಸಿದ್ದಾರೆ.
(Surjeet Yadav)(5 / 7)
ಮುಂಬೈ ಇಂಡಿಯನ್ಸ್ ಕ್ರಿಕೆಟಿಗ ಮತ್ತು ಭಾರತೀಯ ಟಿ20ಐ ನಾಯಕ ಸೂರ್ಯಕುಮಾರ್ ಯಾದವ್ 4ನೇ ಸ್ಥಾನದಲ್ಲಿದ್ದು, 9 ಪಂದ್ಯಗಳಲ್ಲಿ ಸ್ಕೋರ್ 373 ಆಗಿದೆ. ಸ್ಟ್ರೈಕ್ ರೇಟ್ 166.51.
(AFP)(6 / 7)
ಗುಜರಾತ್ ಟೈಟಾನ್ಸ್ ಬ್ಯಾಟರ್ ಜೋಸ್ ಬಟ್ಲರ್ 8 ಪಂದ್ಯಗಳಲ್ಲಿ 356 ರನ್ ಗಳಿಸಿ ಐದನೇ ಸ್ಥಾನದಲ್ಲಿದ್ದಾರೆ. ಅವರ ಸ್ಟ್ರೈಕ್ ರೇಟ್ 165.58 ಆಗಿದೆ. ಈ ವರ್ಷದ ಐಪಿಎಲ್ನಲ್ಲಿ ಅವರು ಮೂರು ಅರ್ಧಶತಕ ಗಳಿಸಿದ್ದಾರೆ.
(Surjeet)ಇತರ ಗ್ಯಾಲರಿಗಳು