ಕಾಪಿ ಪೇಸ್ಟ್, ರಿಪೀಟ್..: 190 ರನ್, 23.75 ಸರಾಸರಿ, 8 ಸಲ ಒಂದೇ ರೀತಿ ಔಟ್; ಬಿಜಿಟಿ ಸರಣಿಯಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಾಪಿ ಪೇಸ್ಟ್, ರಿಪೀಟ್..: 190 ರನ್, 23.75 ಸರಾಸರಿ, 8 ಸಲ ಒಂದೇ ರೀತಿ ಔಟ್; ಬಿಜಿಟಿ ಸರಣಿಯಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನ

ಕಾಪಿ ಪೇಸ್ಟ್, ರಿಪೀಟ್..: 190 ರನ್, 23.75 ಸರಾಸರಿ, 8 ಸಲ ಒಂದೇ ರೀತಿ ಔಟ್; ಬಿಜಿಟಿ ಸರಣಿಯಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನ

  • Virat Kohli: ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಸೂಪರ್​ ಸ್ಟಾರ್ ವಿರಾಟ್ ಕೊಹ್ಲಿ ಒಟ್ಟಾರೆ ಪ್ರದರ್ಶನ ಹೇಗಿದೆ? ಈ ಸರಣಿಯಲ್ಲಿ ಅವರು ಮಾಡಿದ ದೊಡ್ಡ ತಪ್ಪೇನು? ಇಲ್ಲಿದೆ ವಿವರ.

ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್​​ನ ಎರಡನೇ ಇನ್ನಿಂಗ್ಸ್​​ನಲ್ಲೂ ವಿರಾಟ್ ಕೊಹ್ಲಿ ನಿರಾಸೆ ಮೂಡಿಸಿದ್ದಾರೆ. ಮತ್ತೆ ಸ್ಕಾಟ್ ಬೋಲ್ಯಾಂಡ್ ಅವರ ಬೌಲಿಂಗ್​ನಲ್ಲೇ ವಿಕೆಟ್ ಒಪ್ಪಿಸಿದ್ದಾರೆ. 12 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿ ಔಟಾಗಿದ್ದಾರೆ. ಮತ್ತೊಂದು ಬೇಸರದ ಸಂಗತಿ ಏನೆಂದರೆ ಈ ಬಾರಿಯೂ ಆಫ್-ಸ್ಟಂಪ್ ಹೊರಗಿನ ಎಸೆತಕ್ಕೆ ಔಟ್ ಆಗಿದ್ದಾರೆ.
icon

(1 / 5)

(AP)

ಮೊದಲ ಇನ್ನಿಂಗ್ಸ್​​ನಲ್ಲಿ ಸ್ಕಾಟ್​ ಬೋಲ್ಯಾಂಡ್ ವಿರುದ್ಧ ಔಟ್​ ಸೈಡ್ ಆಫ್ ಸ್ಟಂಪ್ ಎಸೆತಕ್ಕೆ ಔಟಾಗಿದ್ದ ಕೊಹ್ಲಿ 2ನೇ ಇನ್ನಿಂಗ್ಸ್​​ನಲ್ಲೂ ಅದೇ ರೀತಿಯಲ್ಲಿ ವಿಕೆಟ್ ಒಪ್ಪಿಸಿದರು. ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಬೋಲ್ಯಾಂಡ್ ವಿರುದ್ಧವೇ ವಿರಾಟ್ ಒಟ್ಟು 5 ಬಾರಿ ಔಟ್ ಆಗಿದ್ದಾರೆ.
icon

(2 / 5)

(AFP)

ಈ ಸರಣಿಯಲ್ಲಿ ಬೋಲ್ಯಾಂಡ್ ವಿರುದ್ಧ ಕೊಹ್ಲಿ 7.60ರ ಸರಾಸರಿಯಲ್ಲಿ 38 ರನ್ ಗಳಿಸಿದ್ದಾರೆ. ಇದು ಅವರು ಗಳಿಸಿದ ಬೌಲರ್​ವೊಬ್ಬರ ವಿರುದ್ಧ ಅತ್ಯಂತ ಕಡಿಮೆ ರನ್ ಸರಾಸರಿಯಾಗಿದೆ. ಇದಕ್ಕೂ ಮುನ್ನ ಕೊಹ್ಲಿ ಯಾವೊಬ್ಬ ಬೌಲರ್ ವಿರುದ್ಧವೂ 10ಕ್ಕಿಂತ ಕಡಿಮೆ ಸರಾಸರಿಯಲ್ಲಿ ರನ್ ಗಳಿಸಿರಲಿಲ್ಲ.
icon

(3 / 5)

ಇಡೀ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕೊಹ್ಲಿ ಕೇವಲ 1 ಇನ್ನಿಂಗ್ಸ್​​ನಲ್ಲಿ ಶತಕ ಸಿಡಿಸಿದ್ದು ಬಿಟ್ಟರೆ ಉಳಿದೆಲ್ಲಾ ಇನ್ನಿಂಗ್ಸ್​​ಗಳಲ್ಲೂ ನಿರಾಸೆ ಮೂಡಿಸಿದ್ದಾರೆ. ವಿರಾಟ್ 9 ಇನ್ನಿಂಗ್ಸ್​​ಗಳಲ್ಲಿ 21.11 ಸರಾಸರಿಯಲ್ಲಿ 190 ರನ್ ಗಳಿಸಿದ್ದಾರೆ. ದುರಂತ ಏನೆಂದರೆ ತಾನು ಆಡಿರುವ 9 ಇನ್ನಿಂಗ್ಸ್​​ಗಳಲ್ಲಿ 8 ಬಾರಿ ಆಫ್ ಸ್ಟಂಪ್ ಹೊರಗಿನ ಎಸೆತಗಳಿಗೆ ಔಟಾಗಿರುವುದು.
icon

(4 / 5)

ವಿರಾಟ್ ಕೊಹ್ಲಿ ಕಳೆದ ವರ್ಷ ಟೆಸ್ಟ್ ಕ್ರಿಕೆಟ್​​ನಲ್ಲಿ 19 ಇನ್ನಿಂಗ್ಸ್​​​ಗಳಲ್ಲಿ ಕಣಕ್ಕಿಳಿದಿದ್ದು, 24.52ರ ಬ್ಯಾಟಿಂಗ್ ಸರಾಸರಿಯಲ್ಲಿ 417 ರನ್​ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಅವಧಿಯಲ್ಲಿ ಒಂದು ಶತಕ ಮತ್ತು ಒಂದು ಅರ್ಧಶತಕ ಸಿಡಿಸಿದ್ದಾರೆ. ಇದೀಗ 2025ರಲ್ಲೂ ಇದೇ ಕಳಪೆ ಪ್ರದರ್ಶನ ಮುಂದುವರೆಸಿದ್ದಾರೆ.
icon

(5 / 5)

ಇತರ ಗ್ಯಾಲರಿಗಳು