ಐಪಿಎಲ್ ಚರಿತ್ರೆಯ ಪುಟಗಳಲ್ಲಿ 9 ಐತಿಹಾಸಿಕ ದಾಖಲೆಗಳನ್ನು ಸೇರಿಸಿದ ವಿರಾಟ್ ಕೊಹ್ಲಿ; ಒಂದೊಂದೂ ಡೈಮಂಡ್​ಗೆ ಸಮ!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್ ಚರಿತ್ರೆಯ ಪುಟಗಳಲ್ಲಿ 9 ಐತಿಹಾಸಿಕ ದಾಖಲೆಗಳನ್ನು ಸೇರಿಸಿದ ವಿರಾಟ್ ಕೊಹ್ಲಿ; ಒಂದೊಂದೂ ಡೈಮಂಡ್​ಗೆ ಸಮ!

ಐಪಿಎಲ್ ಚರಿತ್ರೆಯ ಪುಟಗಳಲ್ಲಿ 9 ಐತಿಹಾಸಿಕ ದಾಖಲೆಗಳನ್ನು ಸೇರಿಸಿದ ವಿರಾಟ್ ಕೊಹ್ಲಿ; ಒಂದೊಂದೂ ಡೈಮಂಡ್​ಗೆ ಸಮ!

ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಮಿಂಚಿದ ಆರ್​​ಸಿಬಿ ಸ್ಟಾರ್​ ಬ್ಯಾಟರ್ ವಿರಾಟ್ ಕೊಹ್ಲಿ ಹಲವು ದಾಖಲೆಗಳ ಬೇಟೆಯಾಡಿದ್ದಾರೆ. ಅವುಗಳ ಪಟ್ಟಿಯನ್ನು ಮುಂದೆ ನೋಡೋಣ.

ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡು ರನ್ನುಗಳ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಒಟ್ಟು 8ನೇ ಗೆಲುವು ಸಾಧಿಸಿ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
icon

(1 / 11)

(REUTERS)

ಪಂದ್ಯದಲ್ಲಿ ಮಿಂಚಿದ ಆರ್​​ಸಿಬಿ ಸ್ಟಾರ್​ ಬ್ಯಾಟರ್ ವಿರಾಟ್ ಕೊಹ್ಲಿ ಹಲವು ದಾಖಲೆಗಳ ಬೇಟೆಯಾಡಿದ್ದಾರೆ. 33 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಹಿತ 62 ರನ್ ಸಿಡಿಸುವ ಮೂಲಕ ಇತಿಹಾಸ ಪುಟಗಳಲ್ಲಿ ತನ್ನದೇಯಾದ ಹೆಸರನ್ನು ಕೆತ್ತಿದ್ದಾರೆ. ಅವುಗಳನ್ನು ಒಂದೊಂದಾಗಿ ನೋಡುತ್ತಾ ಹೋಗೋಣ.
icon

(2 / 11)

ಐಪಿಎಲ್​ನಲ್ಲಿ ಸಿಎಸ್​ಕೆ ವಿರುದ್ಧ ಅತ್ಯಧಿಕ ಅರ್ಧಶತಕ ದಾಖಲಿಸಿದ ಹೆಗ್ಗಳಿಕೆ ವಿರಾಟ್ ಕೊಹ್ಲಿ ಪಾಲಾಯಿತು. 10 ಅರ್ಧಶತಕ ಬಾರಿಸುವ ಮೂಲಕ ತಲಾ 9 ಅರ್ಧಶತಕ ಬಾರಿಸಿರುವ ಶಿಖರ್ ಧವನ್, ಡೇವಿಡ್ ವಾರ್ನರ್, ರೋಹಿತ್​ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ.
icon

(3 / 11)

(AP)

ವಿರಾಟ್ ಐಪಿಎಲ್​ನಲ್ಲಿ ಒಟ್ಟಾರೆ ಎರಡನೇ ಬಾರಿಗೆ ಆರ್​​ಸಿಬಿ ಪರ ಸತತ 4 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇದಕ್ಕೂ ಮೊದಲು 2016 ರಲ್ಲಿ ಕೊಹ್ಲಿ ಸತತ 4 ಅರ್ಧಶತಕಗಳನ್ನು ಚಚ್ಚಿದ್ದರು.
icon

(4 / 11)

(Surjeet Yadav)

ಐಪಿಎಲ್​ನಲ್ಲಿ ತಂಡವೊಂದರ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಸಿಎಸ್​ಕೆ ಅವರು 1146 ರನ್ ಗಳಿಸಿ ಡೇವಿಡ್ ವಾರ್ನರ್ ದಾಖಲೆ ಮುರಿದಿದ್ದಾರೆ. ವಾರ್ನರ್ ಅವರು ಪಂಜಾಬ್ ಎದುರು 1134 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದರು. ಬಳಿಕ ಕೊಹ್ಲಿ ಡೆಲ್ಲಿ ವಿರುದ್ಧ 1130 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.
icon

(5 / 11)

(PTI)

ವಿರಾಟ್ ಕೊಹ್ಲಿ ಮತ್ತೊಂದು ದಾಖಲೆಯಲ್ಲಿ ಡೇವಿಡ್ ವಾರ್ನರ್ ದಾಖಲೆ ಮುರಿದಿದ್ದಾರೆ. ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಸಲ 500 ಪ್ಲಸ್ (ಒಂದು ಸೀಸನ್​ನಲ್ಲಿ ಗಳಿಸಿದ ಸ್ಕೋರ್)​ ಸ್ಕೋರ್ ಮಾಡಿದ ಹಿರಿಮೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಕೊಹ್ಲಿ 8 ಬಾರಿ, ವಾರ್ನರ್ 7 ಸಲ ಈ ಸಾಧನೆ ಮಾಡಿದ್ದರೆ, ಕೆಎಲ್ ರಾಹುಲ್ 6, ಶಿಖರ್ ಧವನ್ 5 ಸಲ 500 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ.
icon

(6 / 11)

ಕೊಹ್ಲಿ ಮತ್ತು ಬೆಥೆಲ್ ನಡುವೆ ಮೊದಲ ವಿಕೆಟ್​ಗೆ 97 ರನ್​ಗಳು ಹರಿದು ಬಂತು. ಇದು ಸಿಎಸ್​ಕೆ ವಿರುದ್ಧ ಬಂದ ಆರ್​ಸಿಬಿಯ ಅತ್ಯಧಿಕ ಎರಡನೇ ಜೊತೆಯಾಟ. ಇದಕ್ಕೂ ಮುನ್ನ 2021ರಲ್ಲಿ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ 111 ರನ್​​ಗಳ ಪಾಲುದಾರಿ ಒದಗಿಸಿದ್ದರು.
icon

(7 / 11)

ಪಂದ್ಯದಲ್ಲಿ 5 ಸಿಕ್ಸರ್ ಚಚ್ಚಿದ ಕೊಹ್ಲಿ ಒಂದೇ ತಂಡದ (ಆರ್​ಸಿಬಿ) ಪರ 300+ (304) ಸಿಕ್ಸರ್ ಬಾರಿಸಿದ ಐಪಿಎಲ್​ನ ಏಕೈಕ ಆಟಗಾರ. ಈ ಸಾಧನೆ ಯಾರಿಂದಲೂ ಇನ್ನೂ ಸಾಧ್ಯವಾಗಿಲ್ಲ. ಕ್ರಿಸ್​ ಗೇಲ್ ಅವರು ಆರ್​ಸಿಬಿ ಪರ ​​263 ಸಿಕ್ಸರ್​ ಬಾರಿಸಿದ್ದು, ಎರಡನೇ ಸ್ಥಾನದಲ್ಲಿದ್ದಾರೆ.
icon

(8 / 11)

ಒಂದೇ ಮೈದಾನದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲೂ ಕೊಹ್ಲಿಗೆ ಅಗ್ರಸ್ಥಾನ. ಚಿನ್ನಸ್ವಾಮಿ ಮೈದಾನದಲ್ಲಿ 151 ಸಿಕ್ಸರ್​ ಬಾರಿಸಿದ್ದ ಕ್ರಿಸ್​ಗೇಲ್ ದಾಖಲೆಯನ್ನು ಮುರಿದು ಕೊಹ್ಲಿ ಮುಂದೆ ಸಾಗಿದ್ದಾರೆ. ಮೈದಾನವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನಕ್ಕೇರಿ ವಿಶ್ವದಾಖಲೆ ನಿರ್ಮಿಸಿದ್ದಾರೆ.
icon

(9 / 11)

ಪಂದ್ಯದಲ್ಲಿ 10 ರನ್ ಸಿಡಿಸುತ್ತಿದ್ದಂತೆ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಿದರು. ಅವರು ಭಾರತದಲ್ಲಿ ನಡೆದ ಟಿ20ಯಲ್ಲಿ 9500 ರನ್ ಪೂರ್ಣಗೊಳಿಸಿದ್ದಾರೆ. ಈ ಸಾಧನೆ ಮಾಡಿದ ಮೊದಲ ಆಟಗಾರನೂ ಹೌದು.
icon

(10 / 11)

ಹಾಗೆಯೇ ಐಪಿಎಲ್​ನಲ್ಲಿ 8500 ರನ್ ಪೂರ್ಣಗೊಳಿಸಿದ್ದಾರೆ. ಪಂದ್ಯದಲ್ಲಿ 55 ರನ್ ಗಳಿಸುತ್ತಿದ್ದಂತೆ ಈ ಮೈಲಿಗಲ್ಲು ತಲುಪಿದರು.
icon

(11 / 11)

ಹಾಗೆಯೇ ಐಪಿಎಲ್​ನಲ್ಲಿ 8500 ರನ್ ಪೂರ್ಣಗೊಳಿಸಿದ್ದಾರೆ. ಪಂದ್ಯದಲ್ಲಿ 55 ರನ್ ಗಳಿಸುತ್ತಿದ್ದಂತೆ ಈ ಮೈಲಿಗಲ್ಲು ತಲುಪಿದರು.
(PTI)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು