ಒಬ್ಬರಿಗೆ ಕುತ್ತಿಗೆ ನೋವು, ಇನ್ನೊಬ್ಬರಿಗೆ ಮೊಣಕೈ ನೋವು; ರಣಜಿ ಟ್ರೋಫಿ ಆಡೋಕೆ ಆಗಲ್ಲ ಎಂದ ವಿರಾಟ್ ಕೊಹ್ಲಿ-ಕೆಎಲ್ ರಾಹುಲ್
- ಟೀಮ್ ಇಂಡಿಯಾದ ಪ್ರತಿಯೊಬ್ಬ ಆಟಗಾರರು ದೇಶೀಯ ಕ್ರಿಕೆಟ್ ಆಡಲು ಸಜ್ಜಾಗಿರಬೇಕು ಎಂದು ಬಿಸಿಸಿಐ ಹೇಳಿದೆ. ಹೀಗಾಗಿ ಪ್ರಮುಖ ಆಟಗಾರರು ರಣಜಿ ಟ್ರೋಫಿಯಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇತ್ತು. ಈ ನಡುವೆ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ರಣಜಿ ಟ್ರೋಫಿಯ ಮುಂದಿನ ಸುತ್ತಿಗೆ ಲಭ್ಯವಿರುವುದಿಲ್ಲ ಎಂದು ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ.
- ಟೀಮ್ ಇಂಡಿಯಾದ ಪ್ರತಿಯೊಬ್ಬ ಆಟಗಾರರು ದೇಶೀಯ ಕ್ರಿಕೆಟ್ ಆಡಲು ಸಜ್ಜಾಗಿರಬೇಕು ಎಂದು ಬಿಸಿಸಿಐ ಹೇಳಿದೆ. ಹೀಗಾಗಿ ಪ್ರಮುಖ ಆಟಗಾರರು ರಣಜಿ ಟ್ರೋಫಿಯಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇತ್ತು. ಈ ನಡುವೆ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ರಣಜಿ ಟ್ರೋಫಿಯ ಮುಂದಿನ ಸುತ್ತಿಗೆ ಲಭ್ಯವಿರುವುದಿಲ್ಲ ಎಂದು ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ.
(1 / 9)
ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ರಣಜಿ ಟ್ರೋಫಿಯ ಮುಂದಿನ ಸುತ್ತಿನಿಂದ ಹೊರಗುಳಿಯುವುದು ಖಚಿತವಾಗಿದೆ. ಇಎಸ್‌ಪಿಎನ್ ಕ್ರಿಕ್ಇನ್ಫೋ ಪ್ರಕಾರ, ಗಾಯದ ಕುರಿತಾಗಿ ಬಿಸಿಸಿಐನ ವೈದ್ಯಕೀಯ ತಂಡಕ್ಕೆ ಮಾಹಿತಿ ನೀಡಿದ್ದಾರೆ.
(AFP)(2 / 9)
ಜನವರಿ 23ರಿಂದ ಪ್ರಾರಂಭವಾಗಲಿರುವ ರಣಜಿ ಟ್ರೋಫಿಯ ಮುಂದಿನ ಸುತ್ತಿನಲ್ಲಿ ಆಯಾ ರಾಜ್ಯ ತಂಡಗಳನ್ನು ಪ್ರತಿನಿಧಿಸಲು ಸಾಧ್ಯವಾಗುವುದಿಲ್ಲ ಎಂದು ಕೊಹ್ಲಿ ಮತ್ತು ರಾಹುಲ್ ತಿಳಿಸಿದ್ದಾರೆ.
(AFP)(3 / 9)
ಬಿಸಿಸಿಐ ಕೇಂದ್ರೀಯ ಗುತ್ತಿಗೆ ಪಡೆದ ಪ್ರತಿಯೊಬ್ಬ ಆಟಗಾರ ಕೂಡಾ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ರಾಜ್ಯ ತಂಡಗಳನ್ನು ಪ್ರತಿನಿಧಿಸುವುದನ್ನು ಬಿಸಿಸಿಐ ಇತ್ತೀಚೆಗಷ್ಟೇ ಕಡ್ಡಾಯಗೊಳಿಸಿದೆ. ಒಂದು ವೇಳೆ ಈ ನಿಯಮ ಅನುಸರಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಬಹುದು ಎಂದು ಮಂಡಳಿ ಹೇಳಿದೆ.
(AFP)(4 / 9)
ಒಂದು ವೇಳೆ ಗಾಯ ಅಥವಾ ಇನ್ಯಾವುದೇ ಕಾರಣದಿಂದ ಯಾವುದೇ ಆಟಗಾರ ಅಲಭ್ಯರಾದರೆ, ಅವರು ಆಯ್ಕೆ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅನುಮತಿ ಪಡೆಯಬೇಕು ಎಂದು ಮಂಡಳಿ ಹೇಳಿದೆ.
(AFP)(5 / 9)
ವರದಿ ಪ್ರಕಾರ, ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಅಂತಿಮ ಟೆಸ್ಟ್ ಪಂದ್ಯದ ವೇಳೆ ಕೊಹ್ಲಿಗೆ ಕುತ್ತಿಗೆ ನೋವು ಕಾಣಿಸಿಕೊಂಡಿತ್ತು. ಸರಣಿ ಮುಗಿದ ಮೂರು ದಿನಗಳ ನಂತರ ಅವರು ಇಂಜೆಕ್ಷನ್ ತೆಗೆದುಕೊಂಡಿದ್ದರು.
(AFP)(6 / 9)
ತಮಗೆ ಇನ್ನೂ ಕುತ್ತಿಗೆ ನೋವು ಇದೆ ಎಂದು ಬಿಸಿಸಿಐ ವೈದ್ಯಕೀಯ ಸಿಬ್ಬಂದಿಗೆ ಕೊಹ್ಲಿ ಮಾಹಿತಿ ನೀಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಸೌರಾಷ್ಟ್ರ ವಿರುದ್ಧದ ದೆಹಲಿಯ ರಣಜಿ ಪಂದ್ಯದಿಂದ ಕೊಹ್ಲಿ ಹೊರಗುಳಿದಿದ್ದಾರೆ.
(AP)(7 / 9)
ಅತ್ತ ಕನ್ನಡಿಗ ಕೆಎಲ್ ರಾಹುಲ್ ಮೊಣಕೈ ನೋವು ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ. ಹೀಗಾಗಿ ಪಂಜಾಬ್ ವಿರುದ್ಧದ ರಣಜಿ ಟ್ರೋಫಿ ಪಂದ್ಯಕ್ಕೆ ಕರ್ನಾಟಕ ಪರ ಆಡಲು ಅವರು ಲಭ್ಯವಿರುವುದಿಲ್ಲ.
(AP)(8 / 9)
ರಣಜಿ ಟ್ರೋಫಿಯ ಅಂತಿಮ ಸುತ್ತು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಆರಂಭದ ವೇಳೆಗೆ ಕೊನೆಗೊಳ್ಳಲಿದೆ. ರಿಷಭ್ ಪಂತ್ (ದೆಹಲಿ), ಯಶಸ್ವಿ ಜೈಸ್ವಾಲ್ (ಮುಂಬೈ) ಮತ್ತು ಶುಭ್ಮನ್ ಗಿಲ್ (ಪಂಜಾಬ್) ಜನವರಿ 23ರಿಂದ ಪ್ರಾರಂಭವಾಗುವ ರಣಜಿ ಟ್ರೋಫಿ ಪಂದ್ಯಗಳಿಗೆ ಲಭ್ಯರಿದ್ದಾರೆ.
(BCCI- X)ಇತರ ಗ್ಯಾಲರಿಗಳು