ಆ ಕಾರಣಕ್ಕೆ ಭಾರತದ ಟಿ20ಐ ಕ್ರಿಕೆಟ್ಗೆ ಮರಳುವ ಬಯಕೆ ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ
- ಲಾಸ್ ಏಂಜಲೀಸ್ ಆಯೋಜಿಸಲಿರುವ 2028ರ ಒಲಿಂಪಿಕ್ಸ್ನಲ್ಲಿ ಭಾರತ ಚಿನ್ನದ ಪದಕದ ಪಂದ್ಯಕ್ಕೆ ಅರ್ಹತೆ ಪಡೆದರೆ ಆ ಪಂದ್ಯದಲ್ಲಿ ಆಡಲು ನಿವೃತ್ತಿ ಪಡೆಯುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
- ಲಾಸ್ ಏಂಜಲೀಸ್ ಆಯೋಜಿಸಲಿರುವ 2028ರ ಒಲಿಂಪಿಕ್ಸ್ನಲ್ಲಿ ಭಾರತ ಚಿನ್ನದ ಪದಕದ ಪಂದ್ಯಕ್ಕೆ ಅರ್ಹತೆ ಪಡೆದರೆ ಆ ಪಂದ್ಯದಲ್ಲಿ ಆಡಲು ನಿವೃತ್ತಿ ಪಡೆಯುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
(1 / 6)
2024ರ ಜೂನ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ವಿಶ್ವಕಪ್ ಫೈನಲ್ ಗೆದ್ದ ನಂತರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಘೋಷಿಸಿದ್ದ ಭಾರತೀಯ ತಂಡದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ, ಇದೀಗ ನಿವೃತ್ತಿ ಹಿಂಪಡೆಯುವ ಸುಳಿವು ನೀಡಿದ್ದಾರೆ.
(2 / 6)
ಕಳೆದ ವರ್ಷ ಯುನೈಟೆಡ್ ಸ್ಟೇಟ್ಸ್ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದ ನಂತರ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಟಿ20 ಸ್ವರೂಪದಿಂದ ನಿವೃತ್ತಿ ಘೋಷಿಸಿದ್ದರು. ಇದಾಗಿಯೂ ಕೊಹ್ಲಿ ಆ ಒಂದು ಪಂದ್ಯಕ್ಕೆ ವಿದಾಯ ಹಿಂಪಡೆಯುವುದಾಗಿ ಹೇಳಿದ್ದಾರೆ.
(Sukumaran)(3 / 6)
128 ವರ್ಷಗಳ ಬಳಿಕ ಒಲಿಂಪಿಕ್ಸ್ಗೆ ಕ್ರಿಕೆಟ್ ಮರಳುತ್ತಿದೆ. ಈ ಮೆಗಾ ಈವೆಂಟ್ನಲ್ಲಿ ಟಿ20 ಕ್ರಿಕೆಟ್ ಆಡಿಸಲಾಗುತ್ತದೆ. ‘ಭಾರತ ಫೈನಲ್ ಪ್ರವೇಶಿಸಿದರೆ ಆ ಪಂದ್ಯದಲ್ಲಿ ಆಡುವುದಕ್ಕಾಗಿ ನಾನು ನಿವೃತ್ತಿ ಪಡೆಯುತ್ತೇನೆ’ ಎಂದು ಕೊಹ್ಲಿ ಹೇಳಿದ್ದಾರೆ.
(REUTERS)(4 / 6)
ಆರ್ಸಿಬಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೊಹ್ಲಿ, ‘ಟಿ20 ಕ್ರಿಕೆಟ್ ನಿವೃತ್ತಿ ವಾಪಸ್ ಪಡೆಯಲ್ಲ. ಆದರೆ ಒಲಿಂಪಿಕ್ಸ್ನಲ್ಲಿ ಭಾರತ ಫೈನಲ್ ಪ್ರವೇಶಿಸಿ ಚಿನ್ನದ ಪದಕಕ್ಕೆ ಆಡಿದರೆ ಆ ಪಂದ್ಯದಲ್ಲಿ ನಾನು ಪಂದ್ಯಕ್ಕೆ ನಿವೃತ್ತಿ ಹಿಂಪಡೆಯುತ್ತೇನೆ ಎಂದು ನಗುತ್ತಾ ಹೇಳಿದ್ದಾರೆ.
(5 / 6)
’ದೇಶಕ್ಕಾಗಿ ಒಲಿಂಪಿಕ್ ಪದಕ ಗೆಲ್ಲುವುದು ಬಹಳ ಸಂತೋಷದ ಸಂಗತಿ. ಕ್ರಿಕೆಟ್ ಸೇರ್ಪಡೆಯು ಪದಕ ಗೆಲ್ಲುವ ನಮ್ಮ ಅವಕಾಶಗಳನ್ನು ಉಜ್ವಲಗೊಳಿಸಿದೆ. ಆದ್ದರಿಂದ ನಾವು ದೇಶಕ್ಕೆ ಪದಕ ತರಲು ಸಾಧ್ಯವಾದರೆ, ಅದು ಖಂಡಿತವಾಗಿಯೂ ನಮಗೆ ವಿಶೇಷವಾಗಿರುತ್ತದೆ' ಎಂದು ಹೇಳಿದ್ದಾರೆ.
ಇತರ ಗ್ಯಾಲರಿಗಳು