ಕಣ್ಮುಂದೆಯೇ ಅಪ್ಪನ ಸಾವು ಮತ್ತು ಕ್ರಿಕೆಟ್; ನೋವಿನಲ್ಲೂ ಬ್ಯಾಟ್ ಬೀಸಿದ್ದ ವಿರಾಟ್ ಕೊಹ್ಲಿ ಕಣ್ಣೀರ ಕಥೆ ಇದು!
ವಿರಾಟ್ ಕೊಹ್ಲಿಗೆ ಕ್ರಿಕೆಟ್ ಮೇಲೆ ಎಷ್ಟು ಪ್ರೀತಿ ಇತ್ತು ಎಂಬುದಕ್ಕೆ ಆ ಒಂದು ಘಟನೆ ಸಾಕ್ಷಿ. ತನ್ನ ತಂದೆ ಕೊನೆಯುಸಿರೆಳೆದ ಕ್ಷಣವನ್ನು ಕಣ್ಣಾರೆ ನೋಡಿದ್ದರೂ ಮರುದಿನ ಬೆಳಿಗ್ಗೆಯೇ ರಣಜಿ ಆಡಿದ್ದರು. ಆ ಮೂಲಕ ಡೆಲ್ಲಿ ತಂಡವನ್ನು ಫಾಲೋ ಆನ್ನಿಂದ ಪಾರು ಮಾಡಿದ್ದರು.
(1 / 10)
ಟೀಮ್ ಇಂಡಿಯಾ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ದಿನವೇ ಕಳೆದರೂ ಅದರ ಬೇಸರದ ಹ್ಯಾಂಗೋವರ್ ಇನ್ನೂ ಇಳಿದಿಲ್ಲ. ಅಭಿಮಾನಿಗಳು ದಿನಪೂರ್ತಿ ಅವರ ಪೋಸ್ಟ್ಗಳನ್ನೇ ಹಂಚಿಕೊಂಡು ನಿವೃತ್ತಿ ನೀಡಬಾರದಿತ್ತು ಎಂದು ಬೇಸರ ತೋಡಿಕೊಳ್ಳುತ್ತಿದ್ದಾರೆ.
(2 / 10)
ಕೆಲವರು ಅವರ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾ ಹೇಗಿದ್ದ, ಹೇಗೆ ಬೆಳೆದ ಎಂದು ಕೊಂಡಾಡುತ್ತಿದ್ದಾರೆ. ಕ್ರಿಕೆಟ್ ಜಗತ್ತು ಮಾತ್ರವಲ್ಲ, ಫುಟ್ಬಾಲ್, ಟೆನಿಸ್ ಸೇರಿದಂತೆ ಉಳಿದ ಕ್ರೀಡಾಪಟುಗಳೂ ಕೊಹ್ಲಿ ನಿವೃತ್ತಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಇಷ್ಟೆಲ್ಲಾ ಪ್ರೀತಿ ಸಂಪಾದಿಸಲು ತಾನು ಕ್ರಿಕೆಟ್ ಮೇಲಿಟ್ಟಿದ್ದ ಬದ್ಧತೆಯೇ ಕಾರಣ.
(3 / 10)
ಕೊಹ್ಲಿಗೆ ಕ್ರಿಕೆಟ್ ಮೇಲೆ ಎಷ್ಟು ಪ್ರೀತಿ ಇತ್ತು ಎಂಬುದಕ್ಕೆ ಆ ಒಂದು ಘಟನೆ ಸಾಕ್ಷಿ. ತನ್ನ ತಂದೆ ಕೊನೆಯುಸಿರೆಳೆದ ಕ್ಷಣವನ್ನು ಕಣ್ಣಾರೆ ನೋಡಿದ್ದರೂ ತನ್ನ ತಂಡವನ್ನು ಪಾರು ಮಾಡುವ ಮೂಲಕ ಅಪ್ಪನ ಕನಸಿಗೆ ನೀರೆರೆದಿದ್ದರು. ತಂದೆಯ ನಿಧನದ ನೋವಿನ ನಡುವೆಯೂ ಬ್ಯಾಟ್ ಬೀಸಿದ್ದ ಕೊಹ್ಲಿ, ಈಗ ವಿಶ್ವಶ್ರೇಷ್ಠ ಕ್ರಿಕೆಟಿನಾಗಿದ್ದಾನೆ.
(4 / 10)
ದೆಹಲಿಯ 18 ವರ್ಷದ ಹುಡುಗ ಕೊಹ್ಲಿ ತಂದೆ ಹೆಸರು ಪ್ರೇಮ್ ಕೊಹ್ಲಿ. 2006ರ ಡಿಸೆಂಬರ್ 18ರಂದು ಮಧ್ಯರಾತ್ರಿ ತನ್ನ ತಂದೆ ನಿಧನರಾದರು. ಆಗ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಕರ್ನಾಟಕ ವಿರುದ್ಧ ಡೆಲ್ಲಿ ತಂಡದ ಪರ ಕೊಹ್ಲಿ ರಣಜಿ ಪಂದ್ಯ ಆಡುತ್ತಿದ್ದರು. ಅತ್ತ ಸಾವಿನ ನೋವು, ಇತ್ತ ಡೆಲ್ಲಿ ಫಾಲೋ ಆನ್ ಭೀತಿ…
(5 / 10)
ಹೌದು, ಅತ್ತ ಕೊಹ್ಲಿ ತಂದೆಯ ಸಾವಿನ ನೋವಾದರೆ, ಇತ್ತ ಡೆಲ್ಲಿ ತಂಡ ಫಾಲೋ ಅಪಾಯಕ್ಕೆ ಸಿಲುಕಿತ್ತು. ಹೀಗಿದ್ದರೂ ತಾನು ಕ್ರಿಕೆಟ್ ಅನ್ನೇ ಆಯ್ಕೆ ಮಾಡಿಕೊಂಡರು. ಕೊಹ್ಲಿ ತನ್ನ ಅಪ್ಪ ಕಂಡಿದ್ದ ಕನಸೇ ಮುಖ್ಯ ಎಂದುಕೊಂಡರು. ಅದರಂತೆ, ನೋವಿನಲ್ಲೂ ಬ್ಯಾಟಿಂಗ್ ನಡೆಸಿದ್ದ ಕಿಂಗ್, ಡೆಲ್ಲಿಯನ್ನು ಫಾಲೋ ಆನ್ನಿಂದ ಪಾರು ಮಾಡಿದ್ದರು.
(6 / 10)
ಅದು ನಾಲ್ಕು ದಿನಗಳ ಪಂದ್ಯವಾಗಿತ್ತು. ಅದಾಗಲೇ ಕರ್ನಾಟಕ ಬ್ಯಾಟಿಂಗ್ ಮಾಡಿತ್ತು. ಮೊದಲ ಇನ್ನಿಂಗ್ಸ್ನಲ್ಲಿ 446 ರನ್ಗಳ ಬೃಹತ್ ಮೊತ್ತ ಪೇರಿಸಿತು. ಬಳಿಕ ಡೆಲ್ಲಿ ಬ್ಯಾಟಿಂಗ್ ಆರಂಭಿಸಿತು. ಎರಡನೇ ದಿನದಾಟದಲ್ಲಿ ಡೆಲ್ಲಿ 59ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೊಹ್ಲಿ 40 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.
(7 / 10)
ಸಂಕಷ್ಟಕ್ಕೆ ಸಿಲುಕಿದ್ದ ಡೆಲ್ಲಿ ಫಾಲೋ ಆನ್ ಭೀತಿಯಿಂದ ಪಾರಾಗಲು ಕೊಹ್ಲಿ ಬ್ಯಾಟಿಂಗ್ ಮಾಡುವುದು ಅನಿವಾರ್ಯವಾಗಿತ್ತು. ಆದರೆ, ಅದೇ ರಾತ್ರಿ 2.30ರ ಸುಮಾರಿಗೆ ಕೊಹ್ಲಿ ಅವರ ತಂದೆ ತೀರಿಕೊಂಡರು. 2ನೇ ದಿನದಾಟ ಮುಗಿಸಿ ಆಸ್ಪತ್ರೆಗೆ ಹೋಗಿದ್ದ ಕೊಹ್ಲಿ, ತಂದೆಯ ಸಾವನ್ನು ಕಣ್ಣಾರೆ ಕಂಡಿದ್ದ. ಪ್ರೇಮ್ ಕೊಹ್ಲಿ ಮಧ್ಯರಾತ್ರಿ 2.30ಕ್ಕೆ ನಿಧನರಾದರು.
(8 / 10)
ಅಪ್ಪ ಕೊನೆಯುಸಿರೆಳೆದಿದ್ದನ್ನು ನೋಡಿದೆ. ಆದರೆ ಬೆಳಿಗ್ಗೆ ನನ್ನ ಕೋಚ್ಗೆ ಕರೆ ಮಾಡಿ ವಿಷಯ ತಿಳಿಸಿದೆ. ನಾನು ಆಡುತ್ತೇನೆ ಎಂದು ಹೇಳಿದೆ. ಏಕೆಂದರೆ ಕ್ರಿಕೆಟ್ ಆಡುವುದು ನನ್ನ ಅಪ್ಪನ ಕನಸಾಗಿತ್ತು. ಹಾಗಾಗಿ ಕ್ರಿಕೆಟ್ ಬಿಡುವುದು ನನಗೆ ಇಷ್ಟವಿರಲಿಲ್ಲ. ಬಳಿಕ ಆ ದಿನದಾಟ ಮುಗಿಸಿ ನಾನು ಅಂತ್ಯಕ್ರಿಯೆಗೆ ಮರಳಿದ್ದೆ ಎಂದು ಕೊಹ್ಲಿ ಈ ಹಿಂದೆ ಹೇಳಿದ್ದರು.
(9 / 10)
ಆ ಪಂದ್ಯದಲ್ಲಿ 238 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ, 16 ಬೌಂಡರಿ ಸಹಿತ 90 ರನ್ ಗಳಿಸಿದ್ದರು. ಡೆಲ್ಲಿ ತಂಡವನ್ನು ಫಾಲೋ ಆನ್ನಿಂದ ಪಾರು ಮಾಡಿದ್ದ ಕಿಂಗ್, 6ನೇ ವಿಕೆಟ್ಗೆ 152 ರನ್ಗಳ ಜೊತೆಯಾಟ ಒದಗಿಸಿದ್ದರು. ನೂರರೊಳಗೆ ಕುಸಿಯಬೇಕಿದ್ದ ಡೆಲ್ಲಿ 308 ರನ್ ಗಳಿಸಿತು. ಇನ್ನು ಆ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು.
ಇತರ ಗ್ಯಾಲರಿಗಳು