ಕನ್ಕಷನ್ ಬದಲಿ ಆಟಗಾರನಾಗಿ ಟಿ20 ಪದಾರ್ಪಣೆ ಮಾಡಿದ ಭಾರತದ ಮೊದಲ ಆಟಗಾರ ಹರ್ಷಿತ್ ರಾಣಾ; ಏನಿದು ನಿಯಮ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕನ್ಕಷನ್ ಬದಲಿ ಆಟಗಾರನಾಗಿ ಟಿ20 ಪದಾರ್ಪಣೆ ಮಾಡಿದ ಭಾರತದ ಮೊದಲ ಆಟಗಾರ ಹರ್ಷಿತ್ ರಾಣಾ; ಏನಿದು ನಿಯಮ?

ಕನ್ಕಷನ್ ಬದಲಿ ಆಟಗಾರನಾಗಿ ಟಿ20 ಪದಾರ್ಪಣೆ ಮಾಡಿದ ಭಾರತದ ಮೊದಲ ಆಟಗಾರ ಹರ್ಷಿತ್ ರಾಣಾ; ಏನಿದು ನಿಯಮ?

  • ಇಂಗ್ಲೆಂಡ್‌ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಭಾರತ ತಂಡ 15 ರನ್‌ಗಳಿಂದ ಗೆದ್ದು ಸರಣಿ ವಶಪಡಿಸಿಕೊಂಡಿತು. ಟಿ20 ಸ್ವರೂಪಕ್ಕೆ ಅನಿರೀಕ್ಷಿತ ರೀತಿಯಲ್ಲಿ ಪದಾರ್ಪಣೆ ಮಾಡಿದ ಹರ್ಷಿತ್ ರಾಣಾ, ಪಂದ್ಯದ ಗತಿಯನ್ನೇ ಬದಲಿಸಿದರು. ಬದಲಿ ಆಟಗಾರನಾಗಿ (ಕನ್ಕಷನ್ ಸಬ್ಸ್ಟಿಟ್ಯೂಟ್) ಟಿ20ಗೆ ಪದಾರ್ಪಣೆ ಮಾಡಿದ ಭಾರತದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ, ಭಾರತದ ಆಡುವ ಬಳಗದಲ್ಲಿ ರಾಣಾ ಇರಲಿಲ್ಲ. ಆದರೆ, ಚೇಸಿಂಗ್‌ ವೇಳೆಗೆ ಆಲ್‌ರೌಂಡರ್ ಶಿವಂ ದುಬೆ ಬದಲಿಗೆ ಕನ್ಕಷನ್ ಬದಲಿ ಆಟಗಾರನಾಗಿ ರಾಣಾ ತಂಡಕ್ಕೆ ಬಂದರು.
icon

(1 / 8)

(REUTERS)

ಕನ್ಕಷನ್ ಬದಲಿ ಎಂದರೆ, ಒಬ್ಬ ಆಟಗಾರ ತಂಡದ ಆಡುವ ಬಳಗದಿಂದ ಹೊರಹೋಗುವಾಗ ಆ ಆಟಗಾರನಷ್ಟೇ ಸಾಮರ್ಥ್ಯದ ಮತ್ತೊಬ್ಬ ಆಟಗಾರ ಆಡುವ ಅವಕಾಶವಾಗಿದೆ.
icon

(2 / 8)

ನಿಯಮದ ಪ್ರಕಾರ, “ಒಬ್ಬ ಆಟಗಾರನಿಗೆ ಬದಲಿಯಾಗಿ ಬರುವ ಆಟಗಾರನು ಆ ಆಟಗಾರನಿಗೆ ಸಮಾನ ಆಟಗಾರನಾಗಿದ್ದರೆ, ಮತ್ತು ಅವರ ಸೇರ್ಪಡೆಯಿಂದ ಪಂದ್ಯದ ಉಳಿದ ಭಾಗಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡದಿದ್ದರೆ, ಐಸಿಸಿ ಪಂದ್ಯದ ರೆಫರಿ ಸಾಮಾನ್ಯವಾಗಿ ಕನ್ಕಷನ್ ಬದಲಿ ವಿನಂತಿಯನ್ನು ಅನುಮೋದಿಸಬಹುದು.”
icon

(3 / 8)

(AFP)

ಈ ನಿಯಮದ ಪ್ರಕಾರ ಶಿವಂ ದುಬೆ ಬದಲಿಗೆ ಹರ್ಷಿತ್‌ ರಾಣಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದರೆ, ಬೌಲಿಂಗ್‌ನಲ್ಲಿ ದುಬೆ ಸಾಮರ್ಥ್ಯ ಮತ್ತು ರಾಣಾ ಸಾಮರ್ಥ್ಯದ ಪ್ರಶ್ನೆಗಳು ಮೂಡಿವೆ.
icon

(4 / 8)

(BCCI X)

ಕನ್ಕಷನ್ ಬದಲಿ ಆಟಗಾರನನ್ನು ಕಣಕ್ಕಿಳಿಸಿರುವುದರಿಂದ ರಾಣಾ ಅವರು ದುಬೆಗೆ ಸಮಾನ ಬದಲಿ ಆಟಗಾರನೇ ಎಂಬುದು ಚರ್ಚಾಸ್ಪದವಾಗಿದೆ. ಸಹಜವಾಗಿಯೇ ಬೌಲಿಂಗ್‌ನಲ್ಲಿ ದುಬೆಗಿಂತ ಹರ್ಷಿತ್ ಹೆಚ್ಚು ಪರಿಣಾಂಕಾರಿ ಬೌಲರ್‌ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಆಲ್‌ರೌಂಡರ್‌ ಒಬ್ಬನ ಬದಲಿಗೆ ಬೌಲರ್‌ ಅನ್ನು ಕಣಕ್ಕಿಳಿಸುವುದಕ್ಕೆ ಮ್ಯಾಚ್‌ ರೆಫ್ರಿಗಳು ಒಪ್ಪಿದ್ದಾರೆ.
icon

(5 / 8)

(PTI)

ಬದಲಿ ಆಟಗಾರನಾಗಿ ಟಿ20 ಪದಾರ್ಪಣೆ ಮಾಡಿದ ರಾಣಾ ಪಂದ್ಯದ ಮೇಲೆ ಪ್ರಭಾವ ಬೀರಿದರು. ತಮ್ಮ ನಾಲ್ಕು ಓವರ್‌ಗಳಲ್ಲಿ 33 ರನ್‌ಗಳನ್ನು ಬಿಟ್ಟುಕೊಟ್ಟು 3 ಪ್ರಮುಖ ವಿಕೆಟ್‌ಗಳನ್ನು ಪಡೆದರು.
icon

(6 / 8)

(Surjeet Yadav)

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತದ ಪರ, ಸರಣಿಯಲ್ಲಿ ಮೊದಲ ಪಂದ್ಯವನ್ನು ಆಡಿದ ದುಬೆ 34 ಎಸೆತಗಳಲ್ಲಿ 53 ರನ್ ಗಳಿಸಿದರು. ಅವರ ಸ್ಫೋಟಕ ಆಟದ ನೆರವಿಂದ ಭಾರತವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು..
icon

(7 / 8)

ಇಂಗ್ಲೆಂಡ್‌ ಚೇಸಿಂಗ್‌ ಸಮಯದಲ್ಲಿ ಪವರ್‌ಪ್ಲೇ ನಂತರ ರಾಣಾ ಬದಲಿ ಆಟಗಾರನಾಗಿ ಬಂದರು. ಒಂದೆರಡು ಓವರ್‌ಗಳ ನಂತರ ಬದಲಿ ಆಟಗಾರನ ಕಣಕ್ಕಿಳಿಸಲು ಅಧಿಕೃತ ದೃಢೀಕರಣ ಬಂದಿತು. "ಶಿವಂ ದುಬೆ ಅವರ ಬದಲಿ ಆಟಗಾರ ಹರ್ಷಿತ್ ರಾಣಾ " ಎಂದು ಬಿಸಿಸಿಐ ತಿಳಿಸಿತು.
icon

(8 / 8)

ಇತರ ಗ್ಯಾಲರಿಗಳು