ಕೊಹ್ಲಿ-ರೋಹಿತ್ ಮತ್ತೆ ಭಾರತ ತಂಡದ ಪರ ಕಣಕ್ಕಿಳಿಯಲು ಇಷ್ಟೊಂದು ಸಮಯ ಬೇಕೇ?
- ಮಾಜಿ ನಾಯಕರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮತ್ತೆ ಯಾವಾಗ ಭಾರತ ತಂಡದ ಜರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿದೆ ಮಾಹಿತಿ.
- ಮಾಜಿ ನಾಯಕರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮತ್ತೆ ಯಾವಾಗ ಭಾರತ ತಂಡದ ಜರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿದೆ ಮಾಹಿತಿ.
(1 / 5)
ಮೇ 7ರಂದು ರೋಹಿತ್ ಶರ್ಮಾ ಬೆನ್ನಲ್ಲೇ ಮತ್ತೊಬ್ಬ ಸೂಪರ್ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಇಂದು (ಮೇ 12ರಂದು) ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ನಿರ್ಧಾರ ಪ್ರಕಟಿಸಿದ್ದಾರೆ.
(PTI)(2 / 5)
ಐಪಿಎಲ್ ಬಳಿಕ ಜೂನ್ 20ರಿಂದ ಶುರುವಾಗುವ ಐದು ಪಂದ್ಯಗಳ ಟೆಸ್ಟ್ ಸರಣಿಗೆ ವಿರಾಟ್ ಕೊಹ್ಲಿ ಭಾರತ ತಂಡದ ಭಾಗವಾಗಲಿದ್ದಾರೆ ಎಂದು ಊಹಿಸಲಾಗಿತ್ತು. ಆದರೆ ಆಗಿದ್ದೇ ಬೇರೆ. ಕೆಲ ದಿನಗಳಿಂದ ಹರಡಿದ್ದ ವದಂತಿಗಳು ಇದೀಗ ನಿಜವಾಗಿದ್ದು, ಕೊಹ್ಲಿಯೂ ಬಿಳಿ ಜೆರ್ಸಿಯನ್ನು ಪಕ್ಕಕ್ಕಿಟ್ಟಿದ್ದಾರೆ.
(PTI)(3 / 5)
ಟಿ20ಐ ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಮುಂದುವರೆಯುತ್ತಾರೆ. ಹಾಗಿದ್ದರೆ, ಈ ಜೋಡಿ ಭಾರತ ತಂಡದಲ್ಲಿ ಮತ್ತೆ ಕಣಕ್ಕಿಳಿಯೋದು ಯಾವಾಗ, ಎಂದು? ಇಲ್ಲಿದೆ ಉತ್ತರ.
(ANI Picture Service Wire)(4 / 5)
ರೋಹಿತ್ ಮತ್ತು ವಿರಾಟ್ ಮತ್ತೆ ಭಾರತ ತಂಡದಲ್ಲಿ ಕಾಣಿಸಿಕೊಳ್ಳುವುದು ಆಗಸ್ಟ್ನಲ್ಲಿ. ಮೆನ್ ಇನ್ ಬ್ಲ್ಯೂ ಸೀಮಿತ ಓವರ್ಗಳ ಸರಣಿಗಾಗಿ ಆಗಸ್ಟ್ನಲ್ಲಿ ಪ್ರವಾಸ ಕೈಗೊಳ್ಳಲಿದೆ. ಇಲ್ಲಿ ಭಾರತ ಮೂರು ಏಕದಿನ ಪಂದ್ಯಗಳನ್ನು ಭಾರತ ಆಡಲಿದೆ. ಈ ಸಿರೀಸ್ನಲ್ಲಿ ರೋ-ಕೋ ಜೋಡಿ ಕಣಕ್ಕಿಳಿಯಬಹುದು.
(AP)ಇತರ ಗ್ಯಾಲರಿಗಳು