ಟಿ20ಐ ಕ್ರಿಕೆಟ್​ನಲ್ಲಿ ವೇಗದ ಸೆಂಚುರಿ ಸಿಡಿಸಿದರೂ ಅಗ್ರ-5ರಲ್ಲಿಲ್ಲ ಅಭಿಷೇಕ್ ಶರ್ಮಾ; ಇವರಿಗಿಂತ ಮುಂದಿರೋದು ಯಾರು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿ20ಐ ಕ್ರಿಕೆಟ್​ನಲ್ಲಿ ವೇಗದ ಸೆಂಚುರಿ ಸಿಡಿಸಿದರೂ ಅಗ್ರ-5ರಲ್ಲಿಲ್ಲ ಅಭಿಷೇಕ್ ಶರ್ಮಾ; ಇವರಿಗಿಂತ ಮುಂದಿರೋದು ಯಾರು?

ಟಿ20ಐ ಕ್ರಿಕೆಟ್​ನಲ್ಲಿ ವೇಗದ ಸೆಂಚುರಿ ಸಿಡಿಸಿದರೂ ಅಗ್ರ-5ರಲ್ಲಿಲ್ಲ ಅಭಿಷೇಕ್ ಶರ್ಮಾ; ಇವರಿಗಿಂತ ಮುಂದಿರೋದು ಯಾರು?

  • Fastest Century in T20I: ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್​ನಲ್ಲಿ ಅತಿ ವೇಗವಾಗಿ ಸೆಂಚುರಿ ಸಿಡಿಸಿದ ಟಾಪ್​-5 ಆಟಗಾರರು? ಭಾರತೀಯರು ಯಾರಿದ್ದಾರೆ? ಅಗ್ರಸ್ಥಾನ ಯಾರಿಗೆ ಇಲ್ಲಿದೆ ವಿವರ.

ಇಂಗ್ಲೆಂಡ್ ವಿರುದ್ಧದ ಐದನೇ ಟಿ20ಐ ಸರಣಿಯಲ್ಲಿ ಬ್ಯಾಟಿಂಗ್​ನಲ್ಲಿ ವಿಧ್ವಂಸ ಸೃಷ್ಟಿಸಿ ಶರವೇಗದ ಸಿಡಿಸಿದ ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಹಲವು ದಾಖಲೆಗಳ ಒಡೆಯನಾಗಿದ್ದಾರೆ.
icon

(1 / 9)

(AFP)

17 ಎಸೆತಗಳಲ್ಲಿ ಅರ್ಧಶತಕ, 37 ಎಸೆತಗಳಲ್ಲಿ 100 ಪೂರೈಸಿದ ಎಡಗೈ ಬ್ಯಾಟರ್​​ ಭಾರತದ ಪರ ವೇಗದ ಸೆಂಚುರಿ ಸಿಡಿಸಿದ ಎರಡನೇ ಆಟಗಾರ. ಈ ಪಟ್ಟಿಯಲ್ಲಿ ರೋಹಿತ್​ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ.
icon

(2 / 9)

54 ಎಸೆತಗಳಲ್ಲಿ 4 ಬೌಂಡರಿ, 13 ಸಿಕ್ಸರ್ ಸಹಿತ 135 ರನ್ ಸಿಡಿಸಿರುವ ಅಭಿಷೇಕ್ ಶರ್ಮಾ, ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ವೇಗದ ಶತಕ ಸಿಡಿಸಿದ ಟಾಪ್​-5 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯದಿದ್ದರೂ 8ನೇ ಸ್ಥಾನವನ್ನು ಪಡೆದಿದ್ದಾರೆ.
icon

(3 / 9)

(HT_PRINT)

ಹಾಗಾದರೆ, ವಿಶ್ವ ಕ್ರಿಕೆಟ್​ನಲ್ಲಿ ಅತಿ ವೇಗವಾಗಿ ಸೆಂಚುರಿ ಸಿಡಿಸಿದ ಟಾಪ್​-5 ಆಟಗಾರರು? ಭಾರತೀಯರು ಯಾರಿದ್ದಾರೆ? ಅಗ್ರಸ್ಥಾನ ಯಾರಿಗೆ ಇಲ್ಲಿದೆ ವಿವರ.
icon

(4 / 9)

ಟಾಪ್​-5ರಲ್ಲಿ ರೋಹಿತ್ ಶರ್ಮಾ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಸೌತ್ ಆಫ್ರಿಕಾದ ಡೇವಿಡ್ ಮಿಲ್ಲರ್​ ಜಂಟಿ 5ನೇ ಸ್ಥಾನ ಪಡೆದಿದ್ದಾರೆ. 2017ರಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ 35 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಅತಿ ವೇಗದ ಶತಕ ಬಾರಿಸಿದ ಭಾರತದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಿಲ್ಲರ್ ಕೂಡ ಅದೇ ವರ್ಷ 35 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.
icon

(5 / 9)

(PTI)

ನೇಪಾಳದ ಬ್ಯಾಟಿಂಗ್ ಆಲ್‌ರೌಂಡರ್ ಕುಶಾಲ್ ಮಲ್ಲಾ 4ನೇ ಸ್ಥಾನದಲ್ಲಿದ್ದಾರೆ. 2023ರಲ್ಲಿ ಮಂಗೋಲಿಯಾ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕುಶಾಲ್ 34 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಪಂದ್ಯದಲ್ಲಿ ಅವರು 50 ಎಸೆತಗಳಲ್ಲಿ 8 ಬೌಂಡರಿ ಮತ್ತು 12 ಸಿಕ್ಸರ್‌ಗಳನ್ನು ಒಳಗೊಂಡಂತೆ ಅಜೇಯ 135 ರನ್ ಗಳಿಸಿದ್ದರು.
icon

(6 / 9)

(X)

ಮೂರನೇ ಸ್ಥಾನದಲ್ಲಿರುವ ನಮೀಬಿಯಾದ ಜಾನ್ ನಿಕೋಲ್ ಲಾಫ್ಟಿ-ಈಟನ್ ಅವರು ನೇಪಾಳದ ವಿರುದ್ಧ 2024ರಲ್ಲಿ 33 ಎಸೆತಗಳಲ್ಲೇ ಶತಕ ಬಾರಿಸಿ ದಾಖಲೆ ಬರೆದಿದ್ದಾರೆ.
icon

(7 / 9)

ಜಿಂಬಾಬ್ವೆಯ ಆಲ್​ರೌಂಡರ್ ಸಿಕಂದರ್ ರಾಜಾ 2ನೇ ಸ್ಥಾನದಲ್ಲಿದ್ದಾರೆ. 2024ರಲ್ಲಿ ಗ್ಯಾಂಬಿಯಾ ವಿರುದ್ಧ 33 ಎಸೆತಗಳಲ್ಲಿ ಶತಕ ಸಿಡಿಸಿದ ಸಾಧನೆ ಮಾಡಿದ್ದರು. ನಮೀಬಿಯಾದ ಜಾನ್ ನಿಕೋಲ್ ಲಾಫ್ಟಿ-ಈಟನ್ ಕೂಡ 33 ಎಸೆತಗಳಲ್ಲೇ ಶತಕ ಬಾರಿಸಿದ್ದಾರೆ.
icon

(8 / 9)

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗದ ಶತಕ ಬಾರಿಸಿದ ದಾಖಲೆ ಸಾಹಿಲ್ ಚೌಹಾಣ್ ಹೆಸರಿನಲ್ಲಿದೆ. ಎಸ್ಟೋನಿಯಾ ಪರ ಆಡುತ್ತಿದ್ದ ಅವರು ಸೈಪ್ರಸ್ ವಿರುದ್ಧ 27 ಎಸೆತಗಳಲ್ಲಿ ಶತಕ ಪೂರೈಸಿದರು. 2024ರಲ್ಲಿ ನಡೆದ ಈ ಪಂದ್ಯದಲ್ಲಿ ಸಾಹಿಲ್ 41 ಎಸೆತಗಳಲ್ಲಿ 144 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದ್ದರು. ಅವರ ಬ್ಯಾಟ್‌ನಿಂದ 6 ಬೌಂಡರಿ ಮತ್ತು 18 ಸಿಕ್ಸರ್‌ಗಳು ಬಂದಿದ್ದವು.
icon

(9 / 9)

(ICC)

ಇತರ ಗ್ಯಾಲರಿಗಳು