ಐಸಿಸಿ ಟೂರ್ನಿಗಳಲ್ಲಿ ಆಯಾ ದೇಶಗಳ ಪರ ಅತಿ ಹೆಚ್ಚು ಶತಕ ಸಿಡಿಸಿದ ಕ್ರಿಕೆಟಿಗರು; ರೋಹಿತ್ ಶರ್ಮಾ ವಿಶ್ವದಾಖಲೆ
- ICC Tournaments: ಐಸಿಸಿ ಟೂರ್ನಮೆಂಟ್ಗಳಲ್ಲಿ (ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಟಿ20 ವಿಶ್ವಕಪ್) ಆಯಾ ದೇಶಗಳ ಪರ ಅತಿ ಹೆಚ್ಚು ಶತಕ ಬಾರಿಸಿದ ಕ್ರಿಕೆಟಿಗರು ಯಾರು? 10 ದೇಶಗಳ ವಿವರ ಇಂತಿದೆ.
- ICC Tournaments: ಐಸಿಸಿ ಟೂರ್ನಮೆಂಟ್ಗಳಲ್ಲಿ (ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಟಿ20 ವಿಶ್ವಕಪ್) ಆಯಾ ದೇಶಗಳ ಪರ ಅತಿ ಹೆಚ್ಚು ಶತಕ ಬಾರಿಸಿದ ಕ್ರಿಕೆಟಿಗರು ಯಾರು? 10 ದೇಶಗಳ ವಿವರ ಇಂತಿದೆ.
(1 / 10)
'ಹಿಟ್‌ಮ್ಯಾನ್' ಎಂದೇ ಖ್ಯಾತರಾಗಿರುವ ರೋಹಿತ್ ಶರ್ಮಾ ಐಸಿಸಿ ಟೂರ್ನಿಗಳಲ್ಲಿ ಒಟ್ಟು 8 ಶತಕ ಚಚ್ಚಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ 7, ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ 1 ಶತಕ ಗಳಿಸಿದ್ದಾರೆ. ರೋಹಿತ್ ಐಸಿಸಿ ಟೂರ್ನಿಗಳಲ್ಲಿ ಭಾರತ ಪರ ಅತ್ಯಧಿಕ ಶತಕ ಗಳಿಸಿದ ಆಟಗಾರ ಮಾತ್ರವಲ್ಲ, ಐಸಿಸಿ ಟೂರ್ನಿಗಳ ಇತಿಹಾಸದಲ್ಲೂ ಸೆಂಚುರಿ ಬಾರಿಸಿದ ಕ್ರಿಕೆಟಿಗನೂ ಹೌದು.
(AFP)(2 / 10)
ದಿಗ್ಗಜ ಕ್ರಿಸ್ ಗೇಲ್ ಐಸಿಸಿ ಪಂದ್ಯಾವಳಿಗಳಲ್ಲಿ ವೆಸ್ಟ್ ಇಂಡೀಸ್ ಪರ 7 ಶತಕ ಬಾರಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ 3 ಸೆಂಚುರಿ ಮತ್ತು ಏಕದಿನ ವಿಶ್ವಕಪ್, ಟಿ20 ವಿಶ್ವಕಪ್‌ನಲ್ಲಿ ತಲಾ 2 ಶತಕ ದಾಖಲಿಸಿದ್ದಾರೆ.
(X)(3 / 10)
ಐಸಿಸಿ ಟೂರ್ನಿಗಳಲ್ಲಿ ಶ್ರೀಲಂಕಾ ಪರ 7 ಸೆಂಚುರಿ ಬಾರಿಸಿರುವ ಕುಮಾರ್ ಸಂಗಕ್ಕಾರ ತಮ್ಮ ದೇಶದ ಪರ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ 5 ಶತಕ, ಚಾಂಪಿಯನ್ಸ್ ಟ್ರೋಫಿಯಲ್ಲಿ 1 ಶತಕ ಸಿಡಿಸಿದ್ದಾರೆ.
(ICC)(4 / 10)
ಆಸ್ಟ್ರೇಲಿಯಾ ಪರ ಐಸಿಸಿ ಟೂರ್ನಿಗಳಲ್ಲಿ ರಿಕಿ ಪಾಂಟಿಂಗ್ ಮತ್ತು ಡೇವಿಡ್ ವಾರ್ನರ್ ಅತಿ ಹೆಚ್ಚು ಶತಕ ಸಿಡಿಸಿದ ಜಂಟಿ ದಾಖಲೆ ಹೊಂದಿದ್ದಾರೆ. ಇಬ್ಬರೂ ತಲಾ 6 ಬಾರಿ ನೂರರ ಗಡಿ ದಾಟಿದ್ದಾರೆ. ವಾರ್ನರ್ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಎಲ್ಲಾ ಶತಕ ಗಳಿಸಿದ್ದಾರೆ. ಪಾಂಟಿಂಗ್ ಏಕದಿನ ವಿಶ್ವಕಪ್‌ನಲ್ಲಿ 5 ಶತಕ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ 1 ಶತಕವನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
(ICC)(5 / 10)
ಸಯೀದ್ ಅನ್ವರ್ ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ಪರ ಅತಿ ಹೆಚ್ಚು ಶತಕ ಬಾರಿಸಿರುವ ದಾಖಲೆ ಹೊಂದಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ 3 ಬಾರಿ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ 2 ಬಾರಿ ಶತಕ ಗಳಿಸಿದ್ದರು.
(ICC)(6 / 10)
ದಕ್ಷಿಣ ಆಫ್ರಿಕಾ ಪರ ಲೆಜೆಂಡರಿ ಬ್ಯಾಟ್ಸ್‌ಮನ್ ಹರ್ಷಲ್ ಗಿಬ್ಸ್ ಅವರು ಐಸಿಸಿ ಟೂರ್ನಿಗಳಲ್ಲಿ 5 ಶತಕ ಗಳಿಸಿ ತಮ್ಮ ದೇಶದ ಪರ ಅಗ್ರಸ್ಥಾನದಲ್ಲಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ 2 ಶತಕ, ಚಾಂಪಿಯನ್ಸ್ ಟ್ರೋಫಿಯಲ್ಲಿ 3 ಶತಕ ಬಾರಿಸಿದ್ದಾರೆ.
(ICC)(7 / 10)
ಯುವ ಆಲ್‌ರೌಂಡರ್ ರಚಿನ್ ರವೀಂದ್ರ ಐಸಿಸಿ ಟೂರ್ನಮೆಂಟ್‌ನಲ್ಲಿ ನ್ಯೂಜಿಲೆಂಡ್ ಪರ ನಾಲ್ಕು ಶತಕ ಗಳಿಸುವ ಸಾಧನೆ ಮಾಡಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ 3 ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ 1 ಶತಕ ಸಿಡಿಸಿದ್ದಾರೆ.
(X)(8 / 10)
ಐಸಿಸಿ ಟೂರ್ನಿಗಳಲ್ಲಿ ಇಂಗ್ಲೆಂಡ್ ಪರ ಅತಿ ಹೆಚ್ಚು ನಾಲ್ಕು ಶತಕ ಗಳಿಸಿದ ಆಟಗಾರ ಜೋ ರೂಟ್. ಏಕದಿನ ವಿಶ್ವಕಪ್‌ನಲ್ಲಿ ಮೂರು ಬಾರಿ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಒಮ್ಮೆ ಶತಕ ಗಳಿಸಿದ್ದಾರೆ.
(AP)(9 / 10)
ಆಲ್‌ರೌಂಡರ್ ಮಹ್ಮದುಲ್ಲಾ ಬಾಂಗ್ಲಾದೇಶ ಪರ ಐಸಿಸಿ ಟೂರ್ನಿಗಳಲ್ಲಿ 4 ಶತಕ ಗಳಿಸಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಮೂರು ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಒಂದು ಶತಕ ಗಳಿಸಿದ್ದಾರೆ.
(X)ಇತರ ಗ್ಯಾಲರಿಗಳು