ಹರಾಜಿನಲ್ಲಿ 2.60 ಕೋಟಿಗೆ RCB ಖರೀದಿಸಿದ ಜಾಕೋಬ್ ಬೆಥೆಲ್ ಯಾರು; ಕಳೆದ 3 ತಿಂಗಳಲ್ಲಿ ಈತ ಮುಟ್ಟಿದ್ದೆಲ್ಲಾ ಚಿನ್ನ
- Jacob Bethell: ಇತ್ತೀಚೆಗೆ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ ತಂಡವು ಜಾಕೋಬ್ ಬೆಥೆಲ್ ಎಂಬ ಆಟಗಾರನಿಗೆ ಬರೋಬ್ಬರಿ 2.60 ಕೋಟಿ ರೂ. ಕೊಟ್ಟು ಖರೀದಿ ಮಾಡಿತು. ಭಾರತೀಯರಿಗೆ ಅಷ್ಟೇನು ಪರಿಚಿತನಲ್ಲದ ಇಂಗ್ಲೆಂಡ್‌ನ ಯುವ ಆಲ್‌ರೌಂಡರ್‌ಗೆ ಫ್ರಾಂಚೈಸಿ ಅಷ್ಟು ದುಡ್ಡು ಸುರಿದಿದ್ದು ಯಾಕೆ ಎಂಬುದು ಅಭಿಮಾನಿಗಳಿಗೆ ಅಚ್ಚರಿಯಾಯ್ತು. ಇದರ ಹಿಂದೆ ಹಲವು ಕಾರಣಗಳಿವೆ.
- Jacob Bethell: ಇತ್ತೀಚೆಗೆ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ ತಂಡವು ಜಾಕೋಬ್ ಬೆಥೆಲ್ ಎಂಬ ಆಟಗಾರನಿಗೆ ಬರೋಬ್ಬರಿ 2.60 ಕೋಟಿ ರೂ. ಕೊಟ್ಟು ಖರೀದಿ ಮಾಡಿತು. ಭಾರತೀಯರಿಗೆ ಅಷ್ಟೇನು ಪರಿಚಿತನಲ್ಲದ ಇಂಗ್ಲೆಂಡ್‌ನ ಯುವ ಆಲ್‌ರೌಂಡರ್‌ಗೆ ಫ್ರಾಂಚೈಸಿ ಅಷ್ಟು ದುಡ್ಡು ಸುರಿದಿದ್ದು ಯಾಕೆ ಎಂಬುದು ಅಭಿಮಾನಿಗಳಿಗೆ ಅಚ್ಚರಿಯಾಯ್ತು. ಇದರ ಹಿಂದೆ ಹಲವು ಕಾರಣಗಳಿವೆ.
(1 / 8)
ಕಳೆದ ಮೂರು ತಿಂಗಳಿಂದ ಬೆಥೆಲ್ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. 2024 ಅವರ ಪಾಲಿಗೆ ಮರೆಯಲಾಗದ ವರ್ಷವಾಗುವುದು ಸುಳ್ಳಲ್ಲ. ಸೆಪ್ಟೆಂಬರ್ ತಿಂಗಳ 11ರಂದು ಇಂಗ್ಲೆಂಡ್ ಪರ ಟಿ20 ಪದಾರ್ಪಣೆ ಮಾಡಿದ ಬೆಥೆಲ್ ಅದರ ಬೆನ್ನಲ್ಲೇ 19ರಂದು ಏಕದಿನ ತಂಡಕ್ಕೂ ಪದಾರ್ಪಣೆ ಮಾಡಿದರು. ಕಡಿಮೆ ಅವಧಿಯಲ್ಲಿ ಸೀಮಿತ್ ಓವರ್ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು.
(2 / 8)
ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಅಬ್ಬರಿಸಿದ ಬೆನ್ನಲ್ಲೇ, ಇದೀಗ ವಿಶ್ವದ ಜನಪ್ರಿಯ ಕ್ರಿಕೆಟ್ ಲೀಗ್‌ನಲ್ಲಿ ಆಡುವ ಅವಕಾಶ ಬೆಥೆಲ್‌ಗೆ ಸಿಕ್ಕಿದೆ. ಅದು ಕೂಡಾ ಐಪಿಎಲ್‌ನ ಅತ್ಯಂತ ಜನಪ್ರಿಯ ತಂಡ ಆರ್‌ಸಿಬಿ ಪರ. ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆಗೆ ಆಡುವ ಅವಕಾಶ ಪಡೆದಿದ್ದಾರೆ.
(3 / 8)
ಐಪಿಎಲ್ ಕಾಂಟ್ರಾಕ್ಟ್ ಸಿಕ್ಕ ಬೆನ್ನಲ್ಲೇ, ನವೆಂಬರ್ 28ರಂದು ಬೆಥೆಲ್ ಟೆಸ್ಟ್ ತಂಡಕ್ಕೂ ಪದಾರ್ಪಣೆ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ 21ರ ಹರೆಯದ ಎಡಗೈ ಬ್ಯಾಟರ್, ಮೊದಲ ಇನ್ನಿಂಗ್ಸ್‌ನಲ್ಲಿ 10 ರನ್ ಮಾತ್ರ ಗಳಿಸಿದರು.
(4 / 8)
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಐದು ಅರ್ಧಶತಕಗಳನ್ನು ಸಿಡಿಸಿರುವ ಬೆಥೆಲ್, ಚುಟುಕು ಸ್ವರೂಪದ ಸ್ಫೋಟಕ ಆಟಗಾರ. ಆರ್‌ಸಿಬಿ ತಂಡಕ್ಕೆ ಒಬ್ಬ ಪರ್ಫೆಕ್ಟ್ ಫಿನಿಶರ್ ಅಗತ್ಯವಿತ್ತು. ಇಂಗ್ಲೆಂಡ್ ಪರ ತಮ್ಮ ಮ್ಯಾಚ್ ಫಿನಿಶಿಂಗ್ ಸಾಮರ್ಥ್ಯ ತೋರಿಸಿದ್ದ ಬೆಥೆಲ್, ಇದೀಗ ಆರ್‌ಸಿಬಿ ಪರ ಆಡಲು ಉತ್ಸುಕರಾಗಿದ್ದಾರೆ.(Action Images via Reuters)
(5 / 8)
ಇಂಗ್ಲೆಂಡ್‌ನ ಎಡಗೈ ಬ್ಯಾಟಿಂಗ್ ಮತ್ತು ಎಡಗೈ ಸ್ಪಿನ್ ಬೌಲಿಂಗ್ ಮಾಡುವ 21 ವರ್ಷದ ಆಟಗಾರನಿಗೆ ಆರ್‌ಸಿಬಿ ತಂಡ 2.6 ಕೋಟಿ ನೀಡಿದರ ಹಿಂದೆ ವಿಶೇಷ ಲೆಕ್ಕಾಚಾರವಂತೂ ಇದ್ದೇ ಇರಲಿದೆ.(AFP)
(6 / 8)
ಬಾರ್ಬಡೋಸ್‌ನಲ್ಲಿ ಜನಿಸಿದ ಬೆಥೆಲ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತನ್ನ ಸ್ಫೋಟಕ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ. ಹರಾಜಿನಲ್ಲಿ ಇವರನ್ನು ಆರ್‌ಸಿಬಿ ಖರೀದಿಸಿದ ಬಳಿಕ, ಇವರ ಬ್ಯಾಟಿಂಗ್ ವಿಡಿಯೋಗಳು ಕೂಡಾ ವೈರಲ್ ಆಗುತ್ತಿವೆ.(AFP)
(7 / 8)
ಎಡಗೈ ಬ್ಯಾಟರ್ ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ದ ಟಿ20 ಸರಣಿಯ ಸಮಯದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದರು.ಎರಡು ಅರ್ಧ ಶತಕಗಳನ್ನು ಸಿಡಿಸಿದ ಆಟಗಾರ ಬರೋಬ್ಬರಿ 57.66ರ ಪ್ರಭಾವಶಾಲಿ ಸರಾಸರಿಯಲ್ಲಿ 173 ರನ್ ಗಳಿಸಿದ್ದಾರೆ. ಈವರೆಗೆ ಆಡಿದ ಏಳು ಪಂದ್ಯಗಳಲ್ಲಿ 167.96 ಸ್ಟ್ರೈಕ್ ರೇಟ್ ಹೊಂದಿದ್ದಾರೆ.(AP)
ಇತರ ಗ್ಯಾಲರಿಗಳು